ಮಹೀಂದ್ರ ಥಾರ್ ಜೀಪಿನ ಪುಟ್ಟ ವಿಮರ್ಶೆ
ಥಾರ್ ಜೀಪಿನ ಮೇಲ್ಚಾವಣಿ ಸಾಫ್ಟ್ ಕವರಿನಿಂದ ಆವೃತ್ತವಾಗಿದೆ. ಹೀಗಾಗಿ ಏರ್ ಕಂಡಿಷನ್ ಪ್ರಾಕ್ಟಿಕಲ್ ಅಲ್ಲ. ಆದರೂ ಕಂಪನಿಯು ಗ್ರಾಹಕರನ್ನು ತಂಪಾಗಿಸಲು ಎಸಿ ಅಳವಡಿಸಿಬಿಟ್ಟಿದೆ. ಹೊಸದಾಗಿ ಬಂದ ಇನ್ನೊಂದು ಫೀಚರ್ ಎಂದರೆ ರಬ್ಬರ್ ಮ್ಯಾಟ್. ಆಫ್ ರೋಡ್ ಡ್ರೈವಿಂಗ್ ನಂತ್ರ ಇದನ್ನು ತೆಗೆದು ವಾಷ್ ಮಾಡೋದು ಸುಲಭ.
ಫ್ಯೂಯಲ್ ಕ್ಯಾಪ್ ಲೀಕಾಗೋ ಸಮಸ್ಯೆಯಿಲ್ಲ. ಯಾಕೆಂದ್ರೆ ಕಂಪನಿಯು ಫ್ಯೂಯಲ್ ಕ್ಯಾಪ್ ಮರುವಿನ್ಯಾಸ ಮಾಡಿದೆ. ಬೇಕಾದ್ರೆ ಮುಂಭಾಗಕ್ಕೆ ಹೊಸ ಬಂಪರ್ ಅಳವಡಿಸಿಕೊಳ್ಳುವ ಅವಕಾಶವನ್ನು ಕಂಪನಿ ನೀಡಿದೆ.
ಮಹೀಂದ್ರ ಥಾರ್ 2.5 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ. ಈ ಸಿಆರ್ ಡಿಇ ಎಂಜಿನ್ ಆರೋಗ್ಯಕರವಾದ 105 ಅಶ್ವಶಕ್ತಿ ನೀಡುತ್ತದೆ. ಈ ಜೀಪು ಐದು ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಆದ್ರೆ ಇದರ ಫಸ್ಟ್ ಮತ್ತು ರಿವರ್ಸ್ ಗೇರನ್ನು ಒಂದೇ ಸಮಯದಲ್ಲಿ ಎಂಗೇಜ್ ಮಾಡೋದು ಕಷ್ಟ ಅಂತ ನಮ್ಮ ಸ್ನೇಹಿತರೊಬ್ಬರು ಅಭಿಪ್ರಾಯಪಡುತ್ತಾರೆ.
ಮಹೀಂದ್ರ ಥಾರ್ ಆರಂಭಿಕ ದರ 6.89 ಲಕ್ಷ ರುಪಾಯಿ. ಪ್ಲಾಟ್ ಫಾರ್ಮ್ ಸದೃಢವಾಗಿರುವುದರಿಂದ ಇದು ಆಫ್ ರೋಡ್ ಅಭಿಮಾನಿಗಳಿಗೆ ಸೂಕ್ತವಾದ ಜೀಪ್. ಇದನ್ನು ಖರೀದಿದಾರರು ತಮ್ಮ ಟೇಸ್ಟ್ ಗೆ ತಕ್ಕಂತೆ ಕಸ್ಟಮೈಸ್ಡ್ ಮಾಡ್ಕೊಬಹುದು.
ಥಾರ್ ಸವಾರಿ ನಿಮ್ಮ ಸ್ಟೇಟಸ್ ಹೆಚ್ಚು ಮಾಡುವ ಲುಕ್ ಹೊಂದಿದೆ. ಎಲ್ಲರೂ ಕಾರ್ ಕಾರ್ ಎನ್ನುತ್ತಿರುವಾಗ ಡಿಫರೆಂಟಾಗಿ ನೀವು ಥಾರ್ ಎಂಬ ಜೀಪ್ ಖರೀದಿಸಬಹುದು.


Click it and Unblock the Notifications









