ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್, ವಿಲಾಸಿ ಸವಾರಿಗೆ ನೈಸ್
ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 250 ಸಿಡಿಐ ಬ್ಲೂಮೋಷನ್ ಕಾರಿನ ಹೊರವಿನ್ಯಾಸ ಕ್ಲಾಸಿಕ್ ಲುಕ್ ಹೊಂದಿದೆ. ಹಳೆಯ ವಿನ್ಯಾಸ ನೋಡಿ ಇದು ಅತ್ಯಾಧುನಿಕ ಕಾರು ಅಲ್ಲವೆಂಬ ಭಾವನೆ ಮನದಲ್ಲಿ ಮೂಡಬಹುದು.ಆದರೆ ಕ್ಯಾಬಿನೊಳಗೆ ಪ್ರವೇಶಿಸಿ ಕಾರು ಚಾಲೂ ಮಾಡಿದಾಗ ಈ ಕಾರಿನ ವ್ಯಾಲ್ಯೂ ಮತ್ತು ತಂತ್ರಜ್ಞಾನದ ಅರಿವುಂಟಾಗುತ್ತದೆ. ಇದರ ಹೈಟೆಕ್ ತಂತ್ರಜ್ಞಾನಗಳು ಬೆರಗು ಮೂಡಿಸುತ್ತವೆ.
ಮರ್ಸಿಡಿಸ್ ಬೆಂಝ್ ಕಾರಿಗೆ ಕೊಂಚ ಹೆಚ್ಚು ಆಕ್ಸಿಲರೇಷನ್ ನೀಡಿದ್ರೆ ಕಾರಿನ ವೇಗ ನೂರು ಕಿ.ಮೀ. ದಾಟಬಹುದು. 2.5 ಲೀಟಿರಿನ ಡೀಸೆಲ್ ಎಂಜಿನ್ ಅತ್ಯಧಿಕ ಪವರ್ ನೀಡುತ್ತದೆ. ಇಷ್ಟೇಲ್ಲ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಕಾರಿನ ಬಗ್ಗೆ ಹೇಳಿದ್ಮೇಲೆ ಅದರ ಟೆಕ್ ಮಾಹಿತಿ ನೀಡದಿದ್ರೆ ಅಪೂರ್ಣವೆನಿಸುತ್ತದೆ.
ಟೆಕ್ ಮಾಹಿತಿ
ಎಂಜಿನ್: 2.1 ಲೀಟರ್, ನಾಲ್ಕು ಸಿಲಿಂಡರ್
ಗೇರ್ ಬಾಕ್ಸ್: 7 ಸ್ಪೀಡ್ ಆಟೋಮ್ಯಾಟಿಕ್
ಅಶ್ವಶಕ್ತಿ: 205
ಟಾರ್ಕ್: 1,600 ಆವರ್ತನಕ್ಕೆ 500ಎನ್ಎಂ
ಗರಿಷ್ಠ ವೇಗ: ಪ್ರತಿಗಂಟೆಗೆ 280 ಕಿ.ಮೀ.
0-100 ವೇಗ: 5.1 ಸೆಕೆಂಡ್
ಮೈಲೇಜ್: 18 ಕಿ.ಮೀ.
ಕಂಪನಿ ಹೇಳೋ ಪ್ರಕಾರ ಇದರ ಮೈಲೇಜ್ ಲೀಟರ್ ಡೀಸೆಲಿಗೆ 18 ಕಿ.ಮೀ. ಕೆಲವರು ಇದಕ್ಕಿಂತಲೂ ಹೆಚ್ಚು ಮೈಲೇಜ್ ಸಿಗುವುದಾಗಿ ಹೇಳುತ್ತಾರೆ. ನಮ್ಮ ಒಂದಿನದ ಟೆಸ್ಟ್ ಡ್ರೈವಿನಲ್ಲಿ ಮೈಲೇಜ್ ಮೇಲೆ ನಿಗಾ ವಹಿಸಲು ಸಾಧ್ಯವಾಗಿಲ್ಲ.
ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಕಾರಿಗೆ ಸದ್ಯ ಎರಡು ಪ್ರಮುಖ ಎದುರಾಳಿಗಳಿದ್ದಾರೆ. ಬಿಎಂಡಬ್ಲ್ಯು 3 ಸೀರಿಸ್ ಮತ್ತು ಆಡಿ ಎ4 ಕಾರುಗಳು ಬೆಂಝ್ ಸಿ-ಕ್ಲಾಸ್ ಜೊತೆ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿವೆ. ಈ ಮೂರು ಕಾರುಗಳು ತಮ್ಮದೇ ವಿಶೇಷ ತಂತ್ರಜ್ಞಾನ, ಆಕರ್ಷಣೆಗಳಿಂದ ಆಪ್ತವಾಗುತ್ತವೆ.
ಡ್ರೈವಿಂಗ್ ಇಷ್ಟಪಡುವರಿಗೆ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಸೂಕ್ತ. ಇದರಲ್ಲಿ ಚಾಲನೆಯ ಥ್ರಿಲ್, ಐಷಾರಾಮಿ, ವೇಗದ ಅನುಭವ ಪಡೆಯಬಹುದು. ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಕಾರನ್ನು ಐಷಾರಾಮಿ ಮತ್ತು ಕಾರ್ಯಕ್ಷಮತೆಯ ಯುಗಳಗೀತೆ ಎನ್ನಬಹುದು.
ಮರ್ಸಿಡಿಸ್ ಬೆಂಝ್ ಸಿ250 ಡಿಸಿಐ ಕಾರಿನ ದರ ಸುಮಾರು 39 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ. ಬಿಎಂಡಬ್ಲ್ಯು 3 ಸೀರಿಸ್ ದರ 37.8 ಲಕ್ಷ ರುಪಾಯಿ ಇದೆ. ಆಡಿ ಎ4 2.0 ಟಿಡಿಐ ದರ ಸುಮಾರು 38.98 ಲಕ್ಷ ರುಪಾಯಿ ಇದೆ. ಈ ಮೂರು ಕಾರುಗಳ ದರಗಳೂ ಒಂದಕ್ಕಿಂತ ಒಂದು ಪೈಪೋಟಿ ನಡೆಸುವಂತಿವೆ.
ಈ ಟೆಸ್ಟ್ ಡ್ರೈವ್ ಮೂಲಕ ಸಿ-ಕ್ಲಾಸ್ ಅಪೂರ್ವ ಕಾರೆಂದು ಷರಾ ಬರೆಯಲು ಅಥವಾ ಇದಮಿತ್ಥಂ ಎಂದು ಹೇಳಲು ನಮಗೆ ಸಾಧ್ಯವಾಗದು. ನಾವಿನ್ನೂ ಬಿಎಂಡಬ್ಲ್ಯು 3 ಸೀರಿಸ್ ಮತ್ತು ಆಡಿ ಎ4 ಕಾರುಗಳನ್ನು ಡ್ರೈವ್ ಮಾಡಿಲ್ಲ. ಅವನ್ನು ಡ್ರೈವಿಂಗ್ ಮಾಡಿದ್ಮೇಲೆ ಸಿ ಕ್ಲಾಸ್ ಜೊತೆ ಹೋಲಿಕೆ ಮಾಡಿ ಇದಮಿತ್ಥಂ ಎಂದು ಹೇಳಬಹುದು.
ಆದರೆ ಸಾವಿರ ಪದಗಳನ್ನು ಒಂದು ಛಾಯಾಚಿತ್ರ ಹೇಳುತ್ತದೆ. ನಾವು ವಿಭಿನ್ನ ಕೋನಗಳಲ್ಲಿ ಬೆಂಝ್ ಸಿ-ಕ್ಲಾಸ್ ಚಿತ್ರಗಳನ್ನು ಕ್ಲಿಕ್ಕಸಿದ್ದೇವೆ. ಚಿತ್ತದಲ್ಲಿ ಚಿತ್ತಾರ ಮೂಡಿಸುವಂತಹ ಈ ಕಾರಿನ ಕಲರ್ ಕಲರ್ ಚಿತ್ರ ಸಂತೆ ನೋಡಲು ಈ ಲಿಂಕ್ ಪ್ರವೇಶಿಸಿ.


Click it and Unblock the Notifications









