ಬೆಂಗ್ಳೂರು ನೈಸ್ ರಸ್ತೆಯಲ್ಲಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್
ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಡ್ರೈವಿಂಗ್ ಮಾಡುವುದು ಕಷ್ಟವಲ್ಲ. ಎಕ್ಸಿಲರೇಟರ್, ಬ್ರೇಕ್ ಪರಿಜ್ಞಾನವಿದ್ದರೆ ಸಾಕು ಎನ್ನುವುದು ನಮ್ಮ ಅಭಿಪ್ರಾಯ. ಡ್ರೈವಿಂಗ್ ಬೇಸಿಕ್ಸ್ ಗೊತ್ತಿದ್ರೆ ಸಾಕು ಆರಾಮವಾಗಿ ಚಾಲನೆ ಮಾಡಬಹುದು. ಆಟೋಮ್ಯಾಟಿಕ್ ಗೇರ್ ಕಾರಾಗಿರುವುದರಿಂದ ಎಡಗಾಲಿಗೆ ಕೆಲಸವಿಲ್ಲ. ತುಳಿಯಲು ಕಾಲಿನ ಕೆಳಗೆ ಕ್ಲಚ್ಚೇ ಇಲ್ಲ. ಬಲಗಾಲಿನಲ್ಲಿ ಆಕ್ಸಿಲರೇಟರ್ ಮತ್ತು ಬ್ರೇಕ್ ನಿರ್ವಹಣೆ ಮಾಡುತ್ತಿದ್ದರೆ ಸಾಕು.
ಮರ್ಸಿಡಿಸ್ ಬೆಂಜ್ ಸಿ250 ಸಿಡಿಐ ಕಾರು 2.5 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ. ಇದು 6 ಸ್ಪೀಡಿನ ಟಿಟ್ರೊನಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಈ ಕಾರು ಸಂಚಾರ ದಟ್ಟಣೆಯಲ್ಲೂ ಬೋರ್ ಹೊಡೆಸುವುದಿಲ್ಲ. ಕಾರಿನ ಆಸುಪಾಸಿನಲ್ಲಿ ನಿಗದಿತ ವ್ಯಾಪ್ತಿಯಲ್ಲಿ ಯಾವುದಾದರೂ ವಾಹನ ಅಡ್ಡಬಂದರೆ ಸೆನ್ಸಾರ್ ಎಚ್ಚರಿಸುತ್ತದೆ. ಸುರಕ್ಷತವಾಗಿ ಚಾಲನೆ ಮಾಡಬಹುದು.
ನಮಗೆ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಚಾಲನೆಯ ನಿಜವಾದ ಅನುಭವ ದೊರಕಿದ್ದು ನೈಸ್ ರಸ್ತೆಯ ಟ್ರ್ಯಾಕಿನಲ್ಲಿ. ಈ ಟ್ರಾಕಿನಲ್ಲಿ ಯಾವುದೇ ವಾಹನಗಳು ಪ್ರವೇಶಿಸುವುದಿಲ್ಲ. ಹೀಗಾಗಿ ಗರಿಷ್ಠ ವೇಗ, ಗರಿಷ್ಠ ಅನುಭವ ಪಡೆಯಲು ನಮಗೆ ಸಾಧ್ಯವಾಯಿತು. ಅದೇ ದಾರಿಯಲ್ಲಿ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೂತನ ಚಿತ್ರ ವಿರಾಟ್ ಶೂಟಿಂಗ್ ನಡೆಯುತ್ತಿತ್ತು.
ಇದರ ಸ್ಟಿಯರಿಂಗ್ ಹಿಡಿಯಲು ಬೆರಳುಗಳು ಸಾಕು. ಪವರ್ ಸ್ಟೀಯರಿಂಗ್ ಸ್ಮೂತಾಗಿ ಕಾರನ್ನು ನಿರ್ವಹಿಸಲು ನೆರವಾಗುತ್ತದೆ. ನೈಸ್ ರಸ್ತೆಯಲ್ಲಿ ವೇಗವಾಗಿ ಚಾಲನೆ ಮಾಡಿದಾಗ ನಮಗೆ ಸಿ ಕ್ಲಾಸ್ ಎಂಜಿನಿನ 204 ಅಶ್ವಶಕ್ತಿಯ ನಿಜವಾದ ಅನುಭವ ದೊರಕಿತು. ನೂರು ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಹೋಗುವಾಗಿನ ಮಜಾವೇ ಬೇರೆ.
ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರಿನ ಆಕ್ಸಿಲರೇಷನ್ ಇಷ್ಟವಾಗುತ್ತದೆ. ನಮ್ಮ ಗಮನಕ್ಕೆ ಬಾರದಂತೆ ಆಟೋಮ್ಯಾಟಿಕ್ ಆಗಿ ಗೇರುಗಳು ಬದಲಾಗುತ್ತಿರುತ್ತವೆ. ಕಾರಿನ ಸಸ್ಪೆನ್ಷನ್ ಸಿಸ್ಟಮ್ ಗುಣಮಟ್ಟದಿಂದಾಗಿ ಚಾಲನೆ ಅನುಭವ ಅನನ್ಯ. ಈ ಕಾರಿನ ವಿಶೇಷ ಸಸ್ಪೆನ್ಷನಿಂದಾಗಿ ರಸ್ತೆಯಲ್ಲಿರುವ ಸಣ್ಣಪುಟ್ಟ ಗುಂಡಿಗಳು, ಹಂಪ್ ಗಳು ಕಾರಿನೊಳಗಿದ್ದವರ ಅನುಭವಕ್ಕೆ ಬರುವುದೇ ಇಲ್ಲ.
ಸಿ ಕ್ಲಾಸ್ ಕಾರನ್ನು ಯು ಟರ್ನ್ ಮಾಡುವುದು ಕೂಡ ತುಂಬಾ ಸರಳ ಮತ್ತು ಸುಲಭ. ಬ್ರೇಕ್ ಕೂಡ ಗಮನಸೆಳೆಯುವ ಇನ್ನೊಂದಂಶ. ಬ್ರೇಕನ್ನು ಸ್ವಲ್ಪ ಟಚ್ ಮಾಡಿದರೆ ಸಾಕು ಗಾಡಿ ಸ್ಲೋ ಆಗುತ್ತದೆ. ಗಟ್ಟಿಯಾಗಿ ಅದುಮುವ ಅಗತ್ಯವೇ ಇಲ್ಲ. ಗಟ್ಟಿಯಾಗಿ ಅದುಮುವುದು ಕೊಂಚ ಅಪಾಯಕಾರಿ. ಡಿಸ್ಕ್ ಬ್ರೇಕ್ ತುಂಬಾ ಪರಿಣಾಮಕಾರಿಯಾಗಿದ್ದು, ಚಾಲಕನ ಕಾನ್ಫಿಡೆನ್ಸ್ ಹೆಚ್ಚಿಸುತ್ತದೆ.
ದರ, ಮೈಲೇಜ್ ಮತ್ತು ಇನ್ನಿತರ ಮಾಹಿತಿಗಾಗಿ ಮುಂದಿನ ಪುಟಕ್ಕೆ ಬನ್ನಿ


Click it and Unblock the Notifications









