ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್: ಡ್ರೈವ್‌ಸ್ಪಾರ್ಕ್ ಟೆಸ್ಟ್ ಡ್ರೈವ್

ಬೆಳ್ಳಂಬೆಳಗೆಯೇ ಜಯನಗರ ಮೂರನೇ ಬ್ಲಾಕಿನಲ್ಲಿರುವ ನಮ್ಮ ಕಚೇರಿ ಮುಂದೆ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಕಾರು ರಾಜಗಾಂಭಿರ್ಯದಿಂದ ಬಂದು ನಿಂತಿತ್ತು. ವಿಳಂಬ ಮಾಡದೇ ಕಾರಿನ ಇಗ್ನಿಷನ್ ತಿರುಗಿಸಿ ನೈಸ್ ರಸ್ತೆಯ ಟೆಸ್ಟ್ ಟ್ರ್ಯಾಕಿನತ್ತ ದೌಡಾಯಿಸಿದೆವು.

ಲವ್ ಅಟ್ ಫಸ್ಟ್ ಸೈಟ್ ಅಂತಾರಲ್ಲ, ನಮ್ಮೆಲ್ಲರಿಗೂ ಮೊದಲ ನೋಟಕ್ಕೆ ಸಿ ಕ್ಲಾಸ್ ಕಾರು ಇಷ್ಟವಾಗಿ ಬಿಡ್ತು. ಮರ್ಸಿಡಿಸ್ ಬೆಂಝ್ ಎಂಟ್ರಿ ಲೆವೆಲ್ ಸಿ-ಕ್ಲಾಸ್ ಸೆಡಾನ್ ಕಾರಿನ ಗುಣಮಟ್ಟ, ವಿಲಾಸಿ ವಿಶೇಷತೆಗಳು, ತಂತ್ರಜ್ಞಾನ ಅಚ್ಚರಿ ಹುಟ್ಟಿಸುತ್ತವೆ. ವಿಶೇಷವೆಂದರೆ ಇದು ಬೆಂಝ್ ಕಂಪನಿಯ ಅಗ್ಗದ ಕಾರು. ದರ 39 ಲಕ್ಷ ರುಪಾಯಿ.

ಕಾರಿನ ಮುಂಭಾಗ ಮುದ್ದಾಗಿದೆ. ಮೂರು ಗ್ರಿಲ್ಲುಗಳ ನಡುವೆ ಮರ್ಸಿಡಿಸ್ ಲೊಗೊ ಎದ್ದು ಕಾಣುತ್ತದೆ. ಕಾರಿನ ಹಿಂಭಾಗದ ವಿನ್ಯಾಸ ಕ್ಲಾಸಿಕ್. ಅಲಾಯ್ ವೀಲ್ ಎದ್ದು ಕಾಣುತ್ತದೆ. ವಿನ್ಯಾಸ ಡೀಸೆಂಟ್ ಅಥವಾ ಸರಳವಾಗಿದೆ. ಹೆಡ್ ಲೈಟ್ ನಡುವೆ ಜೋಡಿಸಿರುವ ಎಲ್ಇಡಿ ಲೈಟ್ ತುಂಟ ಹುಡುಗಿಯ ಕಣ್ಣಿನಂತೆ ಕಾಣುತ್ತದೆ.

ಎಂಟ್ರಿ ಲೆವೆಲ್ ಕಾರೆಂದು ಇದನ್ನು ಕಡೆಗಣಿಸುವಂತಿಲ್ಲ. ಕ್ಲಾಸಿಕ್ ವಿನ್ಯಾಸ ನೋಡಿ ಅತ್ಯಾಧುನಿಕವಲ್ಲವೆಂದು ಭಾವಿಸಬೇಕಿಲ್ಲ. ಕಾರಿನ ಡೋರ್ ತೆಗೆದು ಕ್ಯಾಬಿನ್ ಪ್ರವೇಶಿಸಿದಾಗ ಬೆರಗು ಮೂಡಿಸುತ್ತದೆ. ಕ್ರೀಮ್ ಬಣ್ಣದ ಸೀಟ್, ಡ್ಯಾಷ್ ಬೋರ್ಡಿಗೆ ಬಳಸಿರುವ ವಿಶೇಷ ಗುಣಮಟ್ಟದ ಪ್ಲಾಸ್ಟಿಕ್, ಸನ್ ರೂಫ್ ಛಾವಣಿ, ಎಸಿ, ಸೆಂಟ್ರಲ್ ಕನ್ಸೋಲ್ ಎಲ್ಲವೂ ಲಗ್ಷುರಿ ಅನುಭವ ನೀಡುತ್ತದೆ. ಸೀಟ್ ಬಿಟ್ಟು ಮೇಲಕ್ಕೆ ಏಳಲು ಮನಸ್ಸೇ ಬರುವುದಿಲ್ಲ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ 250 ಸಿಡಿಐ ಕಾರಿನ ಕೆಲವು ಫೀಚರುಗಳು ಅಚ್ಚರಿ ಹುಟ್ಟಿಸುತ್ತವೆ. ಇದರ ಸೀಟ್ ಹೊಂದಾಣಿಕೆ ಮಾಡುವುದು ಕಷ್ಟವಲ್ಲ. ಮಾಮೂಲಿ ಕಾರಿನಂತೆ ಸೀಟಿನ ಕೆಳಗೆ ಕೈ ಹಾಕಿ, ಸೀಟನ್ನು ಹಿಂದಕ್ಕೆ ಮುಂದಕ್ಕೆ ದೂಡಬೇಕಿಲ್ಲ. ಡೋರಿನಲ್ಲಿರುವ ಬಟನ್ ಪ್ರೆಸ್ ಮಾಡಿದರೆ ಸಾಕು. ಸ್ವಯಂಚಾಲೀತವಾಗಿ ಸೀಟ್ ಹೊಂದಾಣಿಕೆಯಾಗುತ್ತದೆ. ಸ್ಟೀಯರಿಂಗ್ ವೀಲ್ ಕೂಡ ಇದೇ ರೀತಿ ಹೊಂದಾಣಿಕೆ ಮಾಡಿಕೊಳ್ಳಬಹುದು.

ನೈಸ್ ರಸ್ತೆಯಲ್ಲಿ ಸಿ ಕ್ಲಾಸ್ ಡ್ರೈವಿಂಗ್ ಅನುಭವ ಓದಲು ಮುಂದಿನ ಪುಟಕ್ಕೆ ಪ್ರವೇಶಿಸಿರಿ.

Most Read Articles

Kannada
English summary
Kannada Drivespark had an opportunity to test drive the C 250 CDI Bluemotion premium sedan and we would like to share our experience with our viewers. If you have a look at Mercedes-Benz's entry level C-Class sedan, you will understand the attention to detail and quality that the carmaker has provided to its cheapest car in India.
Story first published: Tuesday, June 26, 2012, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X