ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ದೇಶಿಯ ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಭಾರೀ ಬದಲಾವಣೆ ಕಂಡುಬರುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಹಲವು ವಿದೇಶಿ ಕಾರು ಉತ್ಪಾದನಾ ಸಂಸ್ಥೆಗಳು ಸಹ ಭಾರತದಲ್ಲಿ ತಮ್ಮ ಜನಪ್ರಿಯ ಕಾರುಗಳನ್ನು ಬಿಡುಗಡೆಗೊಳಿಸುವ ತವಕದಲ್ಲಿವೆ. ಇವುಗಳಲ್ಲಿ ಬ್ರಿಟಿಷ್ ಕಾರು ಉತ್ಪಾದನಾ ಸಂಸ್ಥೆಯಾದ ಮೊರಿಸ್ ಗ್ಯಾರೇಜ್(ಎಂಜಿ) ಕೂಡಾ ಒಂದಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಎಂಜಿ ಮೋಟಾರ್ ಸಂಸ್ಥೆಯು ಭಾರತದಲ್ಲಿ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಈ ನಿಟ್ಟಿನಲ್ಲಿ ಬೃಹತ್ ಬಂಡವಾಳದೊಂದಿಗೆ 2017ರಲ್ಲೇ ತನ್ನ ಮೊದಲ ಕಾರು ಉತ್ಪಾದನಾ ಘಟಕವನ್ನು ಆರಂಭಗೊಳಿಸಿದ್ದಲ್ಲೇ ಇದೀಗ ಬಿಡುಗಡೆಯಾಗಲಿರುವ ಮೊದಲ ಕಾರು ಮಾದರಿ ಹೆಕ್ಟರ್ ಆವೃತ್ತಿಯನ್ನು ಬಹಿರಂಗಗೊಳಿಸುವ ಮೂಲಕ ಎಸ್‌ಯುವಿ ಪ್ರಿಯರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದೆ. ಸುಧಾರಿತ ತಂತ್ರಜ್ಞಾನ ಮತ್ತು ಐಷಾರಾಮಿ ಫೀಚರ್ಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿರುವ ಹೆಕ್ಟರ್ ಕಾರು ಇದೇ ತಿಂಗಳು ಕೊನೆಯಲ್ಲಿ ಬಿಡುಗಡೆಯಾಗುತ್ತಿದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಹೆಕ್ಟರ್ ಕಾರು ಬಿಡುಗಡೆಗೊಳಿಸುವುದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿದ್ದ ಎಂಜಿ ಮೋಟಾರ್ ಸಂಸ್ಥೆಯು ಡ್ರೈವ್‌ಸ್ಪಾರ್ಕ್ ತಂಡಕ್ಕೂ ಸ್ಪೆಷಲ್ ಡ್ರೈವ್ ಕಲ್ಪಿಸಿತ್ತು. ಈ ಹಿನ್ನೆಲೆ ಎಂಜಿ ಮೋಟಾರ್ ಆಹ್ವಾನದ ಮೇರೆಗೆ ಹೆಕ್ಟರ್ ಕಾರಿನ ಮೊದಲ ಡ್ರೈವ್ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾದ್ರೆ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿರುವ ಹೊಸ ಕಾರಿನ ವಿಶೇಷತೆ ಏನು? ಪ್ರತಿಸ್ಪರ್ಧಿ ಕಾರುಗಳಿಂತಲೂ ಇದು ಹೇಗೆ ಭಿನ್ನವಾಗಿದೆ ಎನ್ನುವುದನ್ನು ಇಲ್ಲಿ ಸಂಪೂರ್ಣವಾಗಿ ಚರ್ಚಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಕಾರಿನ ಡಿಸೈನ್

ಹೆಕ್ಟರ್ ಕಾರಿನಲ್ಲಿ ಡ್ಯುಯಲ್ ಹೆಡ್‌ಲ್ಯಾಂಪ್, ಮುಂಭಾಗದಲ್ಲಿ ದೊಡ್ಡ ಗಾತ್ರದ ಗ್ರಿಲ್, ಟೈಲ್ ಲೈಟ್ಸ್ ಸುತ್ತು ನೀಡಲಾಗಿರುವ ವ್ಯಾರ್ಪ್ ವಿನ್ಯಾಸವು ಹೊಸ ಕಾರಿನ ಸೌಂದರ್ಯಕ್ಕೆ ಮೆರಗು ತಂದಿದ್ದು, ಸ್ಲಿಕ್ ಎಲ್ಇಡಿ ಡಿಆರ್‌ಎಲ್ಎಸ್, ಗ್ರಿಲ್ ಸುತ್ತ ಸಿಲ್ವರ್ ಆಕ್ಸೆಂಟ್ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಹಾಗೆಯೇ ಹಕ್ಟರ್ ಕಾರಿನ ಹೊರಭಾಗದ ವಿನ್ಯಾಸವು ಶಾರ್ಪ್ ಡಿಸೈನ್ ಹೊಂದಿದ್ದು, ಇದು ಕಾರಿಗೆ ಸ್ಪೋರ್ಟಿ ಲುಕ್ ನೀಡುವಲ್ಲಿ ಸಹಕಾರಿಯಾಗಲಿದೆ. ಅದರಲ್ಲೂ ಹೆಕ್ಟರ್ ಟಾಪ್ ಎಂಡ್ ಮಾದರಿಯು ಇತರೆ ಮಾದರಿಗಳಿಂತೂ ಉನ್ನತ ಮಟ್ಟದ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಆರಂಭಿಕ ಆವೃತ್ತಿಯು ಕೆಲವು ಸೌಲಭ್ಯಗಳನ್ನು ಕಳೆದುಕೊಳ್ಳಲಿದೆ.

ಮುಂಭಾಗದ ವಿನ್ಯಾಸದಂತೆಯೇ ಕಾರಿನ ಹಿಂಭಾಗದ ವಿನ್ಯಾಸವು ಕೂಡಾ ಗಮನಸೆಳೆಯಲಿದ್ದು, ಎಲ್ಇಡಿ ಟೈಲ್ ಲ್ಯಾಂಪ್, ಡೈನಾಮಿಕ್ ಟರ್ನ್ ಇಂಡಿಕೇಟರ್, ರಿಯರ್ ಫಾಗ್ ಲ್ಯಾಂಪ್, ಸಿಲ್ವರ್ ಸ್ಕಿಡ್ ಪ್ಲೇಟ್ ಮತ್ತು ಎಂಜಿ ಬ್ಯಾಡ್ಜ್ ಗಮನಸೆಳೆಯುತ್ತೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಗಳಲ್ಲೇ ಅತ್ಯಾಧುನಿಕ ಸೌಲಭ್ಯಗಳ ಪ್ರೇರಿತ ಹೆಕ್ಟರ್ ಕಾರು ಮಾದರಿಯು ಟಾಟಾ ಹ್ಯಾರಿಯರ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೊಸ ಕಾರಿನಲ್ಲಿ ಒದಗಿಸಲಾಗಿರುವ ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳು ಎಸ್‌ಯುವಿ ಪ್ರಿಯರ ಪ್ರಮುಖ ಆಕರ್ಷಣೆಯಾಗಲಿವೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಕಾರಿನ ಒಳವಿನ್ಯಾಸ

ಹೆಕ್ಟರ್ ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿದ್ದು, ಬ್ಲ್ಯಾಕ್ ಕಲರ್ ಥೀಮ್ ಇಂಟಿರಿಯರ್‌ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಪೋಟೈನ್‌ಮೆಂಟ್ ಕಂಟ್ರೋಲ್, ನೆವಿಗೇಷನ್ ನಿಯಂತ್ರಿಸಬಲ್ಲ 10.4-ಇಂಚಿನ ವರ್ಟಿಕಲ್ ಸ್ಟ್ರಾಕ್ಡ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೈ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಇದರಲ್ಲಿ ಐ ಸ್ಮಾರ್ಟ್ ಕನೆಕ್ವಿವಿಟಿ ಸೌಲಭ್ಯವು ಹೆಕ್ಟರ್ ಕಾರಿಗೆ ಮತ್ತಷ್ಟು ಮೆರಗು ತಂದಿರುವುದಲ್ಲದೇ ಕಾರಿಗೂ ಗರಿಷ್ಠ ಭದ್ರತೆ ಒದಗಿಸಲಿದ್ದು, ಪ್ಯಾಕೇಜ್ ಸೌಲಭ್ಯ ಹೊಂದಿರುವ ಐ ಸ್ಮಾರ್ಟ್ ಕನೆಕ್ಟಿವಿಟಿನಲ್ಲಿ ಧ್ವನಿ ಹಿಂಬಾಲಿಸುವಿಕೆ, ಲೈವ್ ವೆಹಿಕಲ್ ಟ್ರಾಕಿಂಗ್, ವೆಹಿಕಲ್ ಸ್ಟೆಟಸ್, ಜಿಯೋ ಫೆನ್ಸ್ ಸೇರಿದಂತೆ 50ಕ್ಕೂ ಹೆಚ್ಚು ಫೀಚರ್ಸ್ ಇದರಲ್ಲಿವೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಇಂಟರ್‌ನೆಂಟ್ ಸೌಲಭ್ಯವನ್ನು ಹೊಂದಿದ ಭಾರತದ ಮೊದಲ ಕಾರು ಮಾದರಿ ಇದಾಗಿದ್ದು, ಹಲೋ ಎಂಜಿ ಮೂಲಕ 100ಕ್ಕೂ ಹೆಚ್ಚು ತಾಂತ್ರಿಕ ಸೌಲಭ್ಯಗಳನ್ನು ಧ್ವನಿ ಗ್ರಹಿಕೆ ಮೂಲಕವೇ ನಿಯಂತ್ರಣ ಮಾಡಬಹುದಾದ ಸೌಲಭ್ಯವಿದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಇನ್ನು ಹೆಕ್ಟರ್ ಕಾರಿನಲ್ಲಿ ಲೆದರ್ ಕೊಟಿಂಗ್ ಪ್ರೇರಿತ ಮಲ್ಟಿ ಫಂಕ್ಷನ್ ಸ್ಟಿರಿಂಗ್ ವೀಲ್ಹ್ ಹೊಂದಿದ್ದು, ಇದರಲ್ಲಿ ಹೊರಹೊಗುವ ಮತ್ತು ಒಳಬರುವ ಕರೆಗಳನ್ನು ಸ್ವಿಕರಿಸಬಹುದಾಗಿದೆ. ಹಾಗೆಯೇ 3.5-ಇಂಚಿನ ಎಂಡಿಐ ಡಿಸ್‌ಪ್ಲೈ ಕೂಡಾ ಹಲವು ಮುಂಚೂಣೆಗಳನ್ನು ನೀಡಲಿದ್ದು, ಇಂಧನ ಸಂಗ್ರಹಣೆ, ಸಾಗುವ ಮಾರ್ಗದ ವಿವರಣೆಯನ್ನು ಸಂಪೂರ್ಣವಾಗಿ ನೀಡಲಿದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಹೊಸ ಕಾರಿನ ಇತರೆ ಫೀಚರ್ಸ್‌ಗಳು

*ಆ್ಯಂಬಿಯೆಂಟ್ ಲೈಟ್ಸ್ (8 ಬಣ್ಣಗಳಲ್ಲಿ)

*ಲೆದರ್ ಅಪ್‌ಹೊಲಿಸ್ಟ್ರೈ( ಟಾಪ್ ಎಂಡ್ ಮಾಡೆಲ್‌ಗಳಲ್ಲಿ)

* 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕ ಸೀಟು

* ಪನೊರೊಮಿಕ್ ಸನ್‌ರೂಫ್

* ಟಿಲ್ಟ್ ಆ್ಯಂಡ್ ಟೆಲಿಸ್ಕೊಪಿಕ್ ಸ್ಟಿರಿಂಗ್

* ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್

* ಆಟೋ ಎಸಿ ಜೊತೆ ರಿಯರ್ ವೆಂಟ್ಸ್

* ಪ್ರೀಮಿಯಂ ಇನ್ಫಿನಿಟಿ ಸೌಂಡ್ ಸಿಸ್ಟಂ

* ಫ್ರಂಟ್ ಆ್ಯಂಡ್ ರಿಯರ್ ಪವರ್ ವಿಂಡೋ

* ಫಾಸ್ಟ್ ಚಾರ್ಜಿಂಗ್

* ಅಂಡ್ರಾಯಿಡ್ ಆಡಿಯೋ

* ಫುಶ್ ಬಟನ್ ಸ್ಟಾರ್ಟ್/ಸ್ಟಾಪ್

* ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಆಸನ ಸೌಲಭ್ಯ ಮತ್ತು ಬೂಟ್ ಸ್ಪೆಸ್

ಹೆಕ್ಟರ್ ಕಾರು ಸದ್ಯ 5 ಆಸನ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದ್ದು, ವಿಸ್ತಾರವಾದ ಕ್ಯಾಬಿನ್ ಸೌಲಭ್ಯದಿಂದಾಗಿ ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ನೀಡಲಿದೆ. ಹಾಗೆಯೇ ಹಿಂಬದಿಯ ಸವಾರರಿಗೆ ನೀಡಲಾಗಿರುವ ಆರ್ಮ್ ರೆಸ್ಟ್, ಕಪ್ ಹೋಲ್ಡ್ ಮತ್ತು ಹೆಡ್ ರೆಸ್ಟ್ ಸೌಲಭ್ಯವು ಗಮನಸೆಳೆಯುತ್ತವೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಹಾಗೆಯೇ ಹೆಕ್ಟರ್ ಕಾರಿನಲ್ಲಿ 587 ಲೀಟರ್ ನಷ್ಟು ಬೂಟ್ ಸ್ಪೆಸ್(ಡಿಕ್ಕಿ) ಸೌಲಭ್ಯವನ್ನು ನೀಡಲಾಗಿದ್ದು, ಮತ್ತಷ್ಟು ಸ್ಥಳಾವಕಾಶ ಬೇಕಿದ್ದಲ್ಲಿ ಹಿಂಬದಿಯ ಆಸನಗಳನ್ನು ಮುಂದುಕ್ಕೆ ತಳ್ಳುವ ಮೂಲಕ ಅಗತ್ಯವಾದ ಲಗೇಜ್ ಜಾಗವನ್ನು ನಿರ್ಮಿಸಿಕೊಳ್ಳಬಹುದು.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಕಾರಿನ ಉದ್ದಳತೆ

ಉದ್ದ (ಎಂಎಂ) 4,655
ಅಗಲ (ಎಂಎಂ) 1,835
ಎತ್ತರ (ಎಂಎಂ) 1,760
ವೀಲ್ಹ್ ಬೆಸ್ (ಎಂಎಂ) 2,750

ಬೂಟ್ ಸ್ಪೆಸ್(ಲೀಟರ್)

587

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಹೆಕ್ಟರ್ ಕಾರಿನಲ್ಲಿ ಪೆಟ್ರೋಲ್ ಆವೃತ್ತಿಯು 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 143-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಹಾಗೆಯೇ ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಪಡೆದುಕೊಂಡಿರಲಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಇದರಲ್ಲಿ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯಲ್ಲಿ 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೋಡಿಸಲಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಹೆಚ್ಚಿನ ಮಟ್ಟದ ಇಂಧನ ಕಾರ್ಯಕ್ಷಮತೆಯನ್ನು ಕಾಯ್ದಕೊಳ್ಳಲು ನೆರವಾಗಲಿದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಸದ್ಯಕ್ಕೆ ಬಿಎಸ್-4 ವೈಶಿಷ್ಟ್ಯತೆಗಳಿಗೆ ಅನುಗುಣವಾಗಿಯೇ ಎಂಜಿನ್ ಸೌಲಭ್ಯ ಹೊಂದಿರುವ ಹೆಕ್ಟರ್ ಕಾರು ಮುಂಬರುವ ಕೆಲವೇ ದಿನಗಳಲ್ಲಿ ಬಿಎಸ್-6 ಎಂಜಿನ್‌ಗೆ ಉನ್ನತಿಕರಣ ಹೊಂದಲಿದ್ದು, ಸ್ಮಾಟ್ ಹೈಬ್ರಿಡ್ ತಂತ್ರಜ್ಞಾನವು ಮೈಲೇಜ್ ಪ್ರಮಾಣದಲ್ಲಿ ಶೇ.14ರಷ್ಟು ಹೆಚ್ಚಳಕ್ಕೆ ಕಾರಣವಾದರೆ ಶೇ.11 ರಷ್ಟು ಕಾರ್ಬನ್ ಹೊರಸೂಸುವ ಪ್ರಮಾಣವನ್ನು ತಗ್ಗಿಸಲಿದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಹೆಕ್ಟರ್ ಕಾರಿನ ಎಂಜಿನ್ ಪ್ರಮುಖಾಂಶಗಳು

ಎಂಜಿನ್ ವೈಶಿಷ್ಟ್ಯತೆ ಪೆಟ್ರೋಲ್ ಡೀಸೆಲ್

ಎಂಜಿನ್ (ಸಿಸಿ ಗಳಲ್ಲಿ) 1,541 1,956
ಸಿಲಿಂಡರ್‌ಗಳ ಸಂಖ್ಯೆ 4 4
ಹಾರ್ಸ್ ಪವರ್(ಬಿಎಚ್‌ಪಿ) 143 172
ಟಾರ್ಕ್ (ಎನ್ಎಂ) 250 350
ಟ್ರಾನ್‌ಮಿಷನ್ 6-ಸ್ಪೀಡ್ ಮ್ಯಾನುವಲ್/7-ಡಿಸಿಟಿ 6-ಮ್ಯಾನುವಲ್
ಕಾರಿನ ತೂಕ(ಅಂದಾಜು) 1554 - 1644 1633 - 1700

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಕಾರಿನ ಮೈಲೇಜ್

*ಪೆಟ್ರೋಲ್ ವರ್ಷನ್(ಆಟೋಮ್ಯಾಟಿಕ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 13.96 ಕಿ.ಮಿ

*ಪೆಟ್ರೋಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 14.16 ಕಿ.ಮಿ

*ಪೆಟ್ರೋಲ್ ಎಂಜಿನ್ ಜೊತೆ 48 ವೊಲ್ಟ್ ಮೈಲ್ಡ್ ಹೈಬ್ರಿಡ್(ಮ್ಯಾನುವಲ್ ಗೇರ್‌ಬಾಕ್ಸ್) - ಪ್ರತಿ ಲೀಟರ್‌ಗೆ 15.81 ಕಿ.ಮಿ

*ಡಿಸೇಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 17.41 ಕಿ.ಮಿ

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಹೆಕ್ಟರ್ ವೆರಿಯೆಂಟ್ ಮತ್ತು ಸುರಕ್ಷಾ ಸೌಲಭ್ಯಗಳು

ಸ್ಟೈಲ್, ಸೂಪರ್, ಸ್ಮಾರ್ಟ್ ಮತ್ತು ಶಾರ್ಪ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಾಗಲಿರುವ ಹೆಕ್ಟರ್ ಕಾರಿನಲ್ಲಿ ರಿಮೋಟ್ ಕೀ ಲೆಸ್ ಎಂಟ್ರಿ, ವೆಲ್‌ಕಮ್ ಲೈಟ್, ಹೈಟ್ ಅಡ್ಜೆಸ್ಟ್ ಹೆಡ್ ರೆಸ್ಟ್, ಫ್ರಂಟ್ ಮತ್ತು ರಿಯರ್ ಫಾಸ್ಟ್-ಚಾರ್ಜಿಂಗ್ ಪೋರ್ಟ್ಸ್, ಗ್ಲೋ ಬಾಕ್ಸ್, ಡ್ರೈವರ್ ಆರ್ಮ್ ರೆಸ್ಟ್, 60:40 ಅನುಪಾತದಲ್ಲಿ ಮಡಚಬಹುದಾದ ಹಿಂಬದಿ ಆಸನ, ಆಟೋ ಎಸಿ, ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯವು ಪ್ರತಿ ವೆರಿಯೆಂಟ್‌ನಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಹೆಕ್ಟರ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಆರ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಡಿಫಾಗರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ISOFIX ಚೈಲ್ಡ್-ಸೀಟ್ ಮೌಂಟ್ಸ್ ಸೌಲಭ್ಯ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಹೆಕ್ಟರ್ ಕಾರಿನ ಬೆಲೆ(ಅಂದಾಜು)

ಎಂಜಿ ಹೆಕ್ಟರ್ ಕಾರು ಎಸ್‌ಯುವಿ ಮಾದರಿಗಳಲ್ಲಿ ವಿಶೇಷ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.14 ಲಕ್ಷದಿಂದ ಟಾಪ್ ಎಂಡ್ ಹೈಬ್ರಿಡ್ ಎಂಜಿನ್ ಮಾದರಿಯು ರೂ.20 ಲಕ್ಷ ಬೆಲೆ ಪಡೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಹೆಕ್ಟರ್ ಪ್ರತಿಸ್ಪರ್ಧಿ ಕಾರುಗಳು

ಸದ್ಯ ಮಾರುಕಟ್ಟೆಯಲ್ಲಿ ಹೆಕ್ಟರ್ ಕಾರಿಗೆ ಸರಿಸಮನಾದ ಕಾರುಗಳು ಅಷ್ಟಾಗಿ ಇಲ್ಲವಾದರೂ ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಹ್ಯುಂಡೈ ಕ್ರೆಟಾ ಕಾರಿಗೂ ಕೂಡಾ ಇದು ಪ್ರತಿಸ್ಪರ್ಧಿಯಾಗಲಿದೆ.

ಪ್ರತಿಸ್ಪರ್ಧಿಗಳು/ಎಂಜಿನ್ ಸಾಮರ್ಥ್ಯ ಎಂಜಿ ಹೆಕ್ಟರ್ ಟಾಟಾ ಹ್ಯಾರಿಯರ್ ಜೀಪ್ ಕಂಪಾಸ್
ಎಂಜಿನ್ 1.5-ಲೀಟರ್ ಪೆಟ್ರೋಲ್/ 2.0-ಲೀಟರ್ ಡೀಸೆಲ್ 2.0-ಲೀಟರ್ ಡೀಸೆಲ್ 1.4-ಲೀಟರ್ ಪೆಟ್ರೋಲ್/ 2.0-ಲೀಟರ್ ಡೀಸೆಲ್
ಹಾರ್ಸ್ ಪವರ್(ಬಿಎಚ್‌ಪಿ) 143/170 140 163/173
ಟಾರ್ಕ್(ಎನ್ಎಂ) 250/350 350 250/350
ಟ್ರಾನ್‌ಮಿಷನ್ ಡಿಸಿಟಿ/ಎಂಟಿ 6ಎಂಟಿ ಡಿಸಿಟಿ/ಎಂಟಿ
ಬೆಲೆ(ಎಕ್ಸ್‌ಶೋರೂಂ ಪ್ರಕಾರ) ಬಿಡುಗಡೆಯ ನಂತರ ಬೆಲೆ ಮಾಹಿತಿ ಲಭ್ಯವಾಗಲಿದೆ ರೂ. 13 ಲಕ್ಷ - ರೂ. 16.5 ಲಕ್ಷ ರೂ. 15.6 ಲಕ್ಷದಿಂದ - ರೂ. 23.1 ಲಕ್ಷ

ಫಸ್ಟ್ ಡ್ರೈವ್ ರಿವ್ಯೂ- ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ಎಂಜಿ ಹೆಕ್ಟರ್?

ಹೆಕ್ಟರ್ ಕುರಿತು ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಎಂಜಿ ಮೋಟಾರ್ ಸಂಸ್ಛೆಯು ಹೆಕ್ಟರ್ ಮೂಲಕ ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿ ಯಾವ ಮಟ್ಟಿಗೆ ಬೇಡಿಕೆ ಪಡೆದುಕೊಳ್ಳಲಿದೆ ಎನ್ನುವುದರ ಆಧಾರದ ಮೇಲೆ ಎಂಜಿ ಮೋಟಾರ್ ಭವಿಷ್ಯ ನಿರ್ಧಾರವಾಗಲಿದೆ.

More from DriveSpark

Article Published On: Saturday, June 15, 2019, 19:10 [IST]
English summary
MG Hector First Drive Review. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+