ಇವಾಲಿಯಾ ರೋಡ್ ಟೆಸ್ಟ್ ಷರಾ: ಪರವಾಗಿಲ್ಲ!
ಹೊಸ ತಲೆಮಾರಿನ ಎಂಪಿವಿ/ಎಂಯುವಿ ಪ್ರೇಮಿಗಳನ್ನು ಇವಾಲಿಯಾ ಆಕರ್ಷಿಸುವುದು ಕಷ್ಟವೆಂಬ ಅಭಿಪ್ರಾಯ ಡ್ರೈವ್ ಸ್ಪಾರ್ಕ್ ತಂಡದ್ದು. ಹಳೆಯ ಶಾಲೆಯಂತೆ ಕಾಣುವ ಇದರ ಸ್ಟೈಲ್ ಹೆಚ್ಚಿನವರಿಗೆ ಇಷ್ಟವಾಗಲಿಕ್ಕಿಲ್ಲ.
ಇನ್ನೊಂದು ವಿಚಾರ ಹೇಳಲು ಮರೆತೆ. ಇದರ ಡೋರ್ ಮಾರುತಿ ಆಮ್ನಿ ತರಹ ಸ್ಲೈಡಿಂಗ್ ಡೋರ್. ಅಂದ್ರೆ ಇದು ಜಾರಿಸುವ ಡೋರ್ ಹೊಂದಿದೆ :-) ಇಂತಹ ಡೋರ್ ಮಾರುತಿ ಆಮ್ನಿಯಲ್ಲಿ ಮಾತ್ರ ಯಶಸ್ಸು ಕಂಡಿತ್ತು. ಆದರ ನಂತರ ಇಂತಹ ಡೋರ್ ಸಕ್ಸಸ್ ಆದದ್ದು ಕಡಿಮೆ. ಹೆಚ್ಚು ಸ್ಥಳಾವಕಾಶದ ನಗರ ಕ್ಲಾಸ್ ಯುಟಿಲಿಟಿ ವಾಹನ ಇಷ್ಟಪಡುವರಿಗೆ ಇದು ಸೂಕ್ತ. ಇದರಲ್ಲಿ ಇಷ್ಟವಾಗುವ ಮತ್ತು ಇಷ್ಟವಾಗದ ಸಂಗತಿಗಳ ಪಟ್ಟಿ ಓದಿ.
ಒಳ್ಳೆಯ ವಿಚಾರ:
* ಇದರ ಎತ್ತರದ ವ್ಯಾನ್ ವಿನ್ಯಾಸಕ್ಕೆ ಹೋಲಿಸಿದರೆ ರೈಡಿಂಗ್ ಗುಣಮಟ್ಟ ಅತ್ಯುತ್ತಮ.
* ಹಗುರ ಸ್ಟಿಯರಿಂಗ್ ಮತ್ತು ಅತ್ಯುತ್ತಮ ಟರ್ನಿಂಗ್ ರೇಡಿಯಸ್.
* 1.5 ಲೀಟರ್ ಡೀಸೆಲ್ ಎಂಜಿನ್ ನೀಡುವ ಅತ್ಯುತ್ತಮ ಪವರ್
* ವಿಶಾಲ ಲಗೇಜ್ ಸ್ಥಳಾವಕಾಶ
* ಡ್ರೈವಿಂಗ್ ಮಾಡುವಾಗ ಮುಂಭಾಗದ ದೃಷ್ಯಗಳು ಸಮರ್ಪಕವಾಗಿ ಕಾಣುತ್ತವೆ.
* ದೊಡ್ಡ ಕುಟುಂಬಕ್ಕೆ ಮತ್ತು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವರಿಗೆ ಸೂಕ್ತ ಆಯ್ಕೆ.
ಇಷ್ಟವಾಗದ ವಿಚಾರ;
* ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ನಿಂದಾಗಿ ಎರಡನೇ ಮತ್ತು ಮೂರನೇ ಸಾಲಿನ ಸೀಟಿನಲ್ಲಿ ಕುಳಿತವರಿಗೆ ಪ್ರಯಾಣ ಕೊಂಚ ತ್ರಾಸ ಉಂಟುಮಾಡಬಲ್ಲದು.
* ಎಆರ್ ಎಐ ಪ್ರಕಾರ ಇದು ಪ್ರತಿಲೀಟರಿಗೆ 19 ಕಿ.ಮೀ. ಮೈಲೇಜ್ ನೀಡುತ್ತದೆ. ಆದರೆ ಕಾರು ಸಂಪೂರ್ಣವಾಗಿ ಲೋಡ್ ಆಗಿದ್ದಾಗ, 10 ಕಿ.ಮೀ. ಮೈಲೇಜ್ ನೀಡಬಹುದಂತೆ.
* ಈ ಕಾರಿನ ಎರಡನೇ ಸೀಟ್ ಕೆಳಗೆ ಸರಿಸಲು ಇರುವ ಫಿಲ್ಮ್ಸಿ ಪ್ಲಾಸ್ಟಿಕ್ ಟ್ಯಾಗ್ ಅನುಕೂಲಕರವಾಗಿಲ್ಲ.
* ಮಧ್ಯಮ ಭಾಗದ ಪ್ಯಾಸೆಂಜರ್ ಕಿಟಕಿ ಪೂರ್ಣವಾಗಿ ಕೆಳಗೆ ಸರಿಸಲು ಸಾಧ್ಯವಿಲ್ಲ.
* 14 ಇಂಚಿನ ಗಿಡ್ಡ ಟೈರ್
* ನಿಯತವಾಗಿ ಜೋಡಿಸದ ಪವರ್ ವಿಂಡೊ ಸ್ವಿಚ್.
* ಕಪ್ ಹೋಲ್ಡರ್ ಮುಂಭಾಗದ ಲೆಗ್ ರೂಮ್ ಸ್ಥಳಾವಕಾಶವನ್ನು ಕಬಲಿಸಿದೆ.
ನಿಸ್ಸಾನ್ ಚ್ಯಾಲೆಂಜ್:
ಇವಾಲಿಯಾ ಕಾರಿಗೆ ಮಹೀಂದ್ರ ಕ್ಷೈಲೊ ಮತ್ತು ಟೊಯೊಟಾ ಇನ್ನೋವಾ ಪ್ರಮುಖ ಪ್ರತಿಸ್ಪರ್ಧಿಗಳು. ಇವುಗಳಿಗೆ ಪೈಪೋಟಿ ನೀಡಿ ಇವಾಲಿಯಾ ಮಾರಾಟ ಹೆಚ್ಚಿಸಿಕೊಳ್ಳಬೇಕಾದು ನಿಸ್ಸಾನ್ ಮುಂದಿರುವ ಪ್ರಮುಖ ಸವಾಲು. ಇದರ ದರ ಎಲ್ಲಾದರೂ 10 ಲಕ್ಷ ರುಪಾಯಿಗಿಂತ ಕಡಿಮೆ ಇದ್ರೆ ಮಾರಾಟಕ್ಕೆ ಅಷ್ಟೇನೂ ಸಮಸ್ಯೆಯಿಲ್ಲ. ಅಥವಾ ಇದು ದೇಶದ ಇನ್ನೊಂದು ಟ್ಯಾಕ್ಸಿಯಾಗಿ ಹೊರಹೊಮ್ಮುವುದೋ? ಯಾರಿಗೊತ್ತು.
ನಿಸ್ಸಾನ್ ಇವಾಲಿಯಾ ರೋಡ್ ಟೆಸ್ಟ್ ನಿಮಗೆ ಇಷ್ಟವಾಯಿತಾ? ನಿಮಗೆ ಇನ್ಯಾವ ಸಂಗತಿಗಳು ಬೇಕು. ಕನ್ನಡದ ಪ್ರಪ್ರಥಮ ವಾಹನ ತಾಣ ಕನ್ನಡ ಡ್ರೈವ್ ಸ್ಪಾರ್ಕಿನಿಂದ ನೀವು ಏನು ಬಯಸುವಿರಿ? ನಮಗೆ ಕಾಮೆಂಟ್ ಬಾಕ್ಸಿನಲ್ಲಿ ಒಂದು ಓಲೆ ಬರೆಯಿರಿ. ಧನ್ಯವಾದ.


Click it and Unblock the Notifications









