ನಿಸ್ಸಾನ್ ಇವಾಲಿಯಾ: ಡ್ರೈವಿಂಗ್ ಅನುಭವ ಹೇಗಿದೆ?
(ಮುಂದುವರೆದ ಭಾಗ)ಹದಿನಾಲ್ಕು ಇಂಚಿನ ವೀಲುಗಳನ್ನು ಹೊಂದಿರುವ ಬೃಹತ್ ಗಾತ್ರದ ಈ ವ್ಯಾನ್(ಕಾರು)ನಲ್ಲಿ ಡ್ರೈವಿಂಗ್ ಅನುಭವ ಆಕರ್ಷಕ. ಸೀಟ್ ಬೆಲ್ಟ್ ಧರಿಸಿ ಚಾಲನೆ ಆರಂಭಿಸಿದ ಕೆಲವೇ ಕ್ಷಣದಲ್ಲಿ ಇದರ ಅನನ್ಯ ಕಾರ್ಯಕ್ಷಮತೆ ಗಮನ ಸೆಳೆಯುತ್ತದೆ.

ನಿಸ್ಸಾನ್ ಕಂಪನಿಯು ಈ ಅರ್ಬನ್ ಕ್ಲಾಸ್ ಯುಟಿಲಿಟಿ ವಾಹನಕ್ಕೆ ರೆನೊ ಕೆ9ಕೆ ಡೀಸೆಲ್ ಎಂಜಿನ್ ಜೋಡಿಸಿದೆ. ಮೊದಲಿಗೆ ನಿಮಗೆ ಒಂದು ಪ್ರಶ್ನೆ ಮೂಡಬಹುದು. ಈ ಮಲ್ಟಿ ಪರ್ಪೊಸ್ ವಾಹನಕ್ಕೆ ಈ ಎಂಜಿನ್ ಸಾಕೇ? ಎಂದು. ನಮಗೂ ಅಂತಹ ಪ್ರಶ್ನೆ ಮೂಡಿತ್ತು. ಕೆಲವು ಸ್ನೇಹಿತರು ಈ ಎಂಜಿನ್ ಸಾಕು ಅಂದ್ರು.
ಎಂತಹ ಸಂಚಾರ ದಟ್ಟಣೆಯಲ್ಲೂ ಮತ್ತು ಹೇರ್ ಪಿನ್ ಬೆಂಡ್ ರಸ್ತೆಯಲ್ಲೂ ನಿರಾಳವಾಗಿ ಚಾಲನೆ ಮಾಡಲು ಸಾಧ್ಯವಾಗುವಂತೆ ಇವಾಲಿಯಾ ವಿನ್ಯಾಸ ಮಾಡಲಾಗಿದೆ. ಕಂಪನಿಯು ಇದರ ಎಂಜಿನನ್ನು ಉತ್ತಮವಾಗಿ ಟ್ಯೂನ್ ಮಾಡಿದೆ.
ಸುಮಾರು ಒಂದು ಸಾವಿರ ಆವರ್ತನ ತಲುಪಿದಾಗ ಇದರ ಟರ್ಬೊ ಲಾಗ್ ಫೀಚರ್ ಅನುಭವಕ್ಕೆ ಬರುತ್ತದೆ. ಸಿಟಿ ಮತ್ತು ಹೆದ್ದಾರಿ ರಸ್ತೆಗೆ ಈ ಕಾರು ಪೂರಕ. ಈ ಕಾರಿನಲ್ಲಿ ಇಷ್ಟವಾಗುವ ಮತ್ತು ಇಷ್ಟವಾಗದ ಪುಟ್ಟ ಪಟ್ಟಿಯೊಂದನ್ನು ಮುಂದಿನ ಪುಟದಲ್ಲಿ ನೀಡಿದ್ದೇವೆ. ಅದನ್ನು ಓದಿದ್ಮೇಲೆ ಇವಾಲಿಯಾ ಕಾರಿನ ಕುರಿತು ನಿಮಗೆ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾದೀತು. ಮುಂದಿನ ಪುಟ ನೋಡಿ.


Click it and Unblock the Notifications








