ಇವಾಲಿಯಾ ಕಾರಲ್ಲಿ ಇಷ್ಟವಾಗುವ ಸಂಗತಿಗಳು
ನೀವು ಕಾರಿನ ಸೌಂದರ್ಯಕ್ಕಿಂತ ಅದರ ಸ್ಥಳಾವಕಾಶ ಇತ್ಯಾದಿ ಸಂಗತಿಗಳಿಗೆ ಪ್ರಾಮುಖ್ಯತೆ ನೀಡುವಿರಾದರೆ ಇವಾಲಿಯಾ ನಿಮಗೆ ಸೂಕ್ತ. ಇದರ ಸ್ಥಳಾವಕಾಶ ನಿಮಗೆ ಖಂಡಿತಾವಾಗಿಯೂ ಬೆರಗು ಮೂಡಿಸುತ್ತದೆ. ಆಕರ್ಷಕ ಹೆಡ್ ರೂಮ್, ಲೆಗ್ ರೂಮ್ ಮತ್ತು ವಿಶಾಲತೆಯನ್ನು ಗಮನದಲ್ಲಿಟ್ಟುಕೊಂಡು ಇವಾಲಿಯಾ ಕಾರನ್ನು ನಿಸ್ಸಾನ್ ವಿನ್ಯಾಸ ಮಾಡಿರುವಂತಿದೆ.
ಸೀಟಿನ ಮೊದಲ ಸಾಲಿನ ಸೀಟು ಸ್ಥಳಾವಕಾಶ ಅತ್ಯುತ್ತಮವಾಗಿದೆ. ಎರಡನೇ ಸೀಟಿನ ಸಾಲಿನಲ್ಲೂ ಸ್ಥಳಾವಕಾಶ ಅತ್ಯುತ್ತಮವಾಗಿದೆ. ಆದರೆ ಮೂರು ಪ್ರಯಾಣಿಕರು ಕೂತಾಗ ಸೀಟು ಕೊಂಚ ಇಕ್ಕಟ್ಟು ಅನಿಸಬಹುದು. ಇದು ಹೆಚ್ಚಿನ ಕಾರುಗಳಲ್ಲಿ ಅನುಭವಕ್ಕೆ ಬರುವ ವಿಚಾರ.
ಸೀಟಿನ ಮೂರನೇ ಸಾಲಿನಲ್ಲಿ ಕೊಂಚ ಆರಾಮದಾಯಕತೆ ಕಡಿಮೆ ಇದೆ. ಇದರ ಲೆಗ್ ರೂಮ್ ಸ್ಥಳಾವಕಾಶ ಕಡಿಮೆಯಿದೆ. ಇಲ್ಲಿ ದೊಡ್ಡಗಾತ್ರದ ವ್ಯಕ್ತಿಗಳು ಕುಳಿತುಕೊಳ್ಳುವುದು ಕಷ್ಟ.
ಈ ಕಾರಿನಲ್ಲಿ ಅತ್ಯಂತ ಗಮನ ಸೆಳೆಯವ ವಿಷಯವೆಂದರೆ ಬೂಟ್ ಸ್ಥಳಾವಕಾಶ. ಹಿಂಭಾಗದ ಸೀಟನ್ನು ಮಡುಚದೆ ಇದ್ರೂ ಆರಾಮವಾಗಿ ಮೂರು ದೊಡ್ಡ ಸೂಟ್ ಕೇಸುಗಳನ್ನು ಇದರಲ್ಲಿ ಜೋಡಿಸಬಹುದು. ಅಷ್ಟು ವಿಶಾಲ ಲಗೇಜ್ ಸ್ಥಳಾವಕಾಶವಿದೆ. ಎರಡನೇ ಮತ್ತು ಮತ್ತು ಕೊನೆಯ ಸೀಟುಗಳನ್ನು ಮಡುಚಿದ್ರೆ ಸುಮಾರು 11 ದೊಡ್ಡದಾದ ಸೂಟ್ ಕೇಸುಗಳನ್ನು ಜೋಡಿಸಿಡಬಹುದು.
ಇವಾಲಿಯಾ ಅಂದ್ರೆ ಇಷ್ಟೇ ಅಲ್ಲ... ಮುಂದಿನ ಪುಟ ನೋಡಿ.


Click it and Unblock the Notifications









