ರೆನೊ ಡಸ್ಟರ್ vs ನಿಸ್ಸಾನ್ ಟೆರನೊ; ಯಾವ ಕಾರು ಅತ್ಯುತ್ತಮ?

By Nagaraja

ಮೊದಲನೆಯ ಕಾರು ಈಗಾಗಲೇ ಬಿಡುಗಡೆಯಾಗಿದ್ದು, ದೇಶ ರಸ್ತೆಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ರಿ ಬ್ಯಾಡ್ಜ್ ಪಡೆದುಕೊಂಡಿರುವ ಎರಡನೇ ಕಾರು ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದು, ಕೆಲವೇ ದಿನಗಳೊಳಗೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ.

ಹೌದು, ನಾವು ಮಾತನಾಡುತ್ತಿರುವುದು ಮಾರುಕಟ್ಟೆಯಲ್ಲಿ ಈಗಾಗಲೇ ಧೂಳೆಬ್ಬಿಸಿರುವ ರೆನೊ ಡಸ್ಟರ್ ಹಾಗೂ ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ನಿಸ್ಸಾನ್ ಟೆರನೊ ಕಾರಿನ ಬಗ್ಗೆ. ಸಾಮಾನ್ಯ ನಾಗರಿಕನ ದೃಷ್ಟಿಕೋನದಲ್ಲಿ ನೋಡಲು ಎರಡು ಕಾರುಗಳು ಸಮಾನವಾಗಿದೆ. ಹೌದು, ನಿಮ್ಮ ಊಹೆ ತಪ್ಪಿಲ್ಲ, ರೆನೊ ಡಸ್ಟರ್ ರಿ ಬ್ಯಾಡ್ಜ್ ಪಡೆದುಕೊಂಡು ಟೆರನೊ ರೂಪದಲ್ಲಿ ದೇಶಕ್ಕೆ ಪರಿಚಯವಾಗುತ್ತಿದೆ. ಆದರೆ ಹೆಚ್ಚು ಐಷಾರಾಮಿ ಫೀಚರ್‌ಗಳನ್ನು ಒಳಗೊಂಡಿರುವ ಟೆರನೊ ದೇಶದ ಗ್ರಾಹಕರಿಗೆ ನೂತನ ಅನುಭವನ್ನಂತೂ ನೀಡಲಿದೆ.

ಅಷ್ಟಕ್ಕೂ ರೆನೊ ಡಸ್ಟರ್ ಹಾಗೂ ನಿಸ್ಸಾನ್ ಟೆರನೊ ಕಾಂಪಾಕ್ಟ್ ಎಸ್‌ಯುವಿ ನಡುವಣ ವೈಶಿಷ್ಟ್ಯಗಳೇನು? ಎಂಬುದಕ್ಕೆ ಈ ಲೇಖನ ಮೂಲಕ ಉತ್ತರ ಕಂಡುಹುಡುಕುವ ಪ್ರಯತ್ನ ಮಾಡಲಾಗುತ್ತಿದೆ.

ರೆನೊ ಡಸ್ಟರ್ ಎಕ್ಸ್‌ಟೀರಿಯರ್

ರೆನೊ ಡಸ್ಟರ್ ಎಕ್ಸ್‌ಟೀರಿಯರ್

ಯುರೋಪ್‌ನಲ್ಲಿ ಡೇಸಿಯಾ ಲೊಗೊದಲ್ಲಿ ಮಾರಾಟವಾಗುತ್ತಿರುವ ರೆನೊ ಡಸ್ಟರ್ ಕಳೆದೊಂದು ವರ್ಷದೊಳಗೆ ದೇಶದ ಎಸ್‌ಯುವಿ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಇದರ ಫ್ರಂಟ್ ಗ್ರಿಲ್ ಅನುಗುಣವಾದ ಹೆಡ್‌ಲೈಟ್ ಆಕರ್ಷಕವಾಗಿದೆ.

ನಿಸ್ಸಾನ್ ಟೆರನೊ ಎಕ್ಸ್‌ಟೀರಿಯರ್

ನಿಸ್ಸಾನ್ ಟೆರನೊ ಎಕ್ಸ್‌ಟೀರಿಯರ್

ಇನ್ನೊಂದೆಡೆ ಸೆಪ್ಟೆಂಬರ್ 1ರಿಂದ ಬುಕ್ಕಿಂಗ್ ಆರಂಭಗೊಳ್ಳುವ ನಿಸ್ಸಾನ್ ಹೆಚ್ಚು ಪ್ರೀಮಿಯಂ ಲುಕ್ ಪಡೆದುಕೊಂಡಿದೆ. ಇದು ಎದುರುಗಡೆಯಿಂದ ಡಬಲ್ ಲೆಯರ್ ಗ್ರಿಲ್ ಪಡೆದುಕೊಂಡಿದೆ. ಹಾಗಿದ್ದರೂ ದರವನ್ನು ಹೋಲಿಸಿದಾಗ 10 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ರೆನೊ ಡಸ್ಟರ್ ರಿಯರ್ ಮತ್ತು ಸೈಡ್ ಲುಕ್

ರೆನೊ ಡಸ್ಟರ್ ರಿಯರ್ ಮತ್ತು ಸೈಡ್ ಲುಕ್

ಇದರ ಬಿ ಪಿಲ್ಲರ್ ಹಾಗೂ ರೂಫ್ ರೈಲರ್ ಪ್ರಮುಖ ಆಕರ್ಷಣೆಯಾಗಿದೆ. ಬಿ ಪಿಲ್ಲರ್‌ಗೆ ಬಾಡಿ ಕಲರ್ ಟಚ್ ನೀಡಿದ್ದರೆ ರೂಫ್ ರೈಲ್‌ಗೆ ಬೆಳ್ಳಿ ಹಾಗೂ ಕಪ್ಪು ಬಣ್ಣ ಬಳಿಯಲಾಗಿದೆ. ಇನ್ನು ಬ್ರೇಕ್ ಲೈಟ್ಸ್ ಸಾಮಾನ್ಯ ವಿನ್ಯಾಸವನ್ನು ಪಡೆದುಕೊಂಡಿದೆ.

ನಿಸ್ಸಾನ್ ಟೆರನೊ ರಿಯರ್ ಮತ್ತು ಸೈಡ್ ಲುಕ್

ನಿಸ್ಸಾನ್ ಟೆರನೊ ರಿಯರ್ ಮತ್ತು ಸೈಡ್ ಲುಕ್

ಮತ್ತೊಂದೆಡೆ ಕಪ್ಪು ವರ್ಣದ ಬಿ ಪಿಲ್ಲರ್ ಪಡೆದುಕೊಂಡಿರುವ ನಿಸ್ಸಾನ್ ಟೆರನೊ ದೇಹಕ್ಕೆ ಸಮಾನವಾದ ರೂಫ್ ರೈಲ್ ಪಡೆದುಕೊಂಡಿದೆ. ಹಾಗೆಯೇ ಡಸ್ಟರ್‌ಗಿಂತ ವಿಭಿನ್ನವಾದ ವಿಭಜಿತ ಬ್ರೇಕ್ ಲೈಟ್ ಇದರಲ್ಲಿದೆ. ಬ್ರೇಕ್ ಲೈಟ್‌ನ ಒಂದು ಭಾಗ ಹಿಂದುಗಡೆಯ ಬಾಗಿಲನ್ನು ಹೊಂದಿಕೊಂಡಿರಲಿದೆ.

ರೆನೊ ಡಸ್ಟರ್ ಇಂಟಿರಿಯರ್

ರೆನೊ ಡಸ್ಟರ್ ಇಂಟಿರಿಯರ್

ಸೆಂಟರ್ ಕನ್ಸೋಲ್ ಮೇಲ್ಗಡೆಯಾಗಿ ವೃತ್ತಾಕಾರದ ಡ್ಯುಯಲ್ ಸೆಂಟರ್ ಏರ್ ವೆಂಟ್ಸ್ ಲಗತ್ತಿಸಲಾಗಿದೆ. ಹಾಗೆಯೇ ಸ್ಟೀರಿಂಗ್ ವೀಲ್ ತ್ರಿ ಸ್ಪೋಕ್ ವಿನ್ಯಾಸ ಪಡೆದುಕೊಂಡಿದೆ.

ನಿಸ್ಸಾನ್ ಡಸ್ಟರ್ ಇಂಟಿರಿಯರ್

ನಿಸ್ಸಾನ್ ಡಸ್ಟರ್ ಇಂಟಿರಿಯರ್

ಡಸ್ಟರ್‌ಗಿಂತ ಭಿನ್ನವಾದ ನಿಸ್ಸಾನ್ ಟೆರನೊ, ಆಯತಾಕಾರದ ಎಸಿ ವೆಂಟ್ಸ್ ಪಡೆದುಕೊಂಡಿದೆ. ಇದಕ್ಕೆ ಕ್ರೋಮ್ ಫಿನಿಶಿಂಗ್ ಟಚ್ ಕೂಡಾ ನೀಡಲಾಗಿದೆ. ಸ್ಟೀರಿಂಗ್ ವೀಲ್ ಕೂಡಾ ಪರಿಷ್ಕೃತಗೊಳಿಸಲಾಗಿದ್ದು, ಬೆಳ್ಳಿ ಬಣ್ಣದ ಪ್ಲಾಸ್ಟಿಕ್ ಕವರ್ ಲಗತ್ತಿಸಲಾಗಿದೆ. ಒಟ್ಟಿನಲ್ಲಿ ಹೆಚ್ಚು ಪ್ರೀಮಿಯಂ ಟಚ್ ನೀಡುವ ಪ್ರಯತ್ನ ಮಾಡಲಾಗಿದೆ.

ಎಂಜಿನ್

ಎಂಜಿನ್

ಹಾಗಿದ್ದರೂ ಡಸ್ಟರ್‌ನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಮಾನದಂಡಗಳನ್ನು ಟೆರನೊ ಕೂಡಾ ಹೊಂದಿರಲಿದೆ. ಇದು 104 ಅಶ್ವಶಕ್ತಿ ಉತ್ಪಾದಿಸುವ 1.6 ಲೀಟರ್ ಪೆಟ್ರೋಲ್ (ಎಕ್ಸ್‌ಎಲ್), 85 ಅಶ್ವಶಕ್ತಿ ಉತ್ಪಾದಿಸುವ1.5 ಲೀಟರ್ ಡೀಸೆಲ್ (ಎಕ್ಸ್‌ಇ, ಎಕ್ಸ್‌ಎಲ್-ಡಿ ಮತ್ತು ಎಕ್ಸ್-ಡಿ ಪ್ಲಸ್) ಮತ್ತು 110 ಅಶ್ವಶಕ್ತಿ ಉತ್ಪಾದಿಸುವ 1.5 ಲೀಟರ್ ಡೀಸೆಲ್ (ಎಲ್‌ಎಕ್ಸ್-ಡಿ, ಎಕ್ಸ್‌ವಿ-ಡಿ ಮತ್ತು ಎಕ್ಸ್‌ವಿ-ಡಿ ಪ್ರೀಮಿಯಂ) ಎಂಜಿನ್ ಪಡೆದುಕೊಳ್ಳಲಿದೆ.

More from DriveSpark

Article Published On: Friday, August 30, 2013, 7:04 [IST]
English summary
Nissan is set to commence bookings for the Terrano from September 1st. Details about the Duster inspired compact SUV resulting from the Renault-Nissan alliance are limited as of now. More will be revealed about the car before launch that will take place sometime during the first week of October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+