ರೆನೊ ಡಸ್ಟರ್ ರಿವ್ಯೂ: ಅಗ್ಗದ ಎಸ್‌ಯುವಿಗೆ ಜೈಹೋ
ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ತುರ್ತು ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಸ್ಟೆಬಿಲಿಟಿ ಕಂಟ್ರೋಲ್, ಮುಂಭಾಗದಲ್ಲಿ ಎರಡು ಏರ್ ಬ್ಯಾಗ್ ಮತ್ತು ಮೂರು ಪಾಯಿಂಟಿನ ಸೀಟ್ ಬೆಲಟ್ಟ್ ಇತ್ಯಾದಿಗಳಿವೆ. ಇದು ಒಟ್ಟಾರೆ ಫೀಚರುಗಳಾಗಿವೆ. ಕೆಲವು ಆರಂಭಿಕ ಆವೃತ್ತಿಗಳಲ್ಲಿ ಕೆಲವು ಫೀಚರುಗಳು ಮಿಸ್ ಆಗಿರಲಿವೆ.
ಇನ್ನು ನೀವು ಕೇಳಬಹುದಾದ ಪ್ರಮುಖ ಪ್ರಶ್ನೆಯೆಂದರೆ ಮೈಲೇಜ್. ಇತರ ಸ್ಪೋರ್ಟ್ಸ್ ಕಾರುಗಳಿಗಿಂತ ಹಗುರವಾಗಿರುವುದರಿಂದ ಸಹಜವಾಗಿ ಡಸ್ಟರ್ ಮೈಲೇಜ್ ಅತ್ಯುತ್ತಮ. 83.8 ಅಶ್ವಶಕ್ತಿಯ ಎಂಜಿನಿನ ಡೀಸೆಲ್ ಡಸ್ಟರ್ ಪ್ರತಿಲೀಟರಿಗೆ ಸುಮಾರು 20.46 ಕಿ.ಮೀ. ಮೈಲೇಜ್ ನೀಡುತ್ತದೆ.
ಮತ್ತೊಂದು ಡೀಸೆಲ್ ಆವೃತ್ತಿಯು ಪ್ರತಿಲೀಟರಿಗೆ 19.01 ಕಿ.ಮೀ. ಮೈಲೇಜ್ ನೀಡುತ್ತದೆ. ಪೆಟ್ರೋಲ್ ಆವೃತ್ತಿಯು ಪ್ರತಿಲೀಟರಿಗೆ 13.24 ಕಿ.ಮೀ. ಮೈಲೇಜ್ ನೀಡುತ್ತದೆ. ದುಬಾರಿ ಪೆಟ್ರೋಲ್ ದರದ ಕಾಲದಲ್ಲಿ ಈ ಮೈಲೇಜ್ ಕೊಂಚ ನಿರಾಶೆ ಮಾಡಬಹುದು.
ಆಕ್ಸಿಲರೇಷನ್ ಮತ್ತು ಪಿಕಪ್: ಡೀಸೆಲ್ ಡಸ್ಟರ್ ಕಾರಿನಲ್ಲಿ ಕೇವಲ 11.8 ಸೆಕೆಂಡಿನಲ್ಲಿ 100 ಕಿ.ಮೀ. ವೇಗ ಪಡೆಯಬಹುದು. ಇದರ ಗರಿಷ್ಠ ವೇಗ ಗಂಟೆಗೆ 164 ಕಿ.ಮೀ. ಇದು ಆಫ್ ರೋಡಿಗೂ ಸೂಕ್ತವಾದ ಕಾರು. ಇದು 4x2 ಮತ್ತು 4x4 ಡ್ರೈವ್ ಆಯ್ಕೆಯಲ್ಲಿ ದೊರಕುತ್ತದೆ.
ರೆನೊ ಕಾರಿನ ಕರ್ಬ್ ತೂಕ 1235 ಕೆಜಿ. ವೀಲ್ ಬೇಸ್ 2676 ಎಂಎಂ ಇದೆ. ರೆನೊ ಲೊಗಾನ್ ಕಾರಿನಿಂದ ಸ್ಪೂರ್ತಿ ಪಡೆದಂತೆ ಇದರ ಇಂಟಿರಿಯರ್ ಭಾಸವಾಗುತ್ತದೆ. ಈ ಕಾರಿನಲ್ಲಿ ಐದು ಜನರು ಆರಾಮವಾಗಿ ಕುಳಿತುಕೊಳ್ಳಬಹುದಾಗಿದೆ. ರೆನೊ ಲೊಗೊ ಕಾರಿನಂತೆ ಇದರಲ್ಲೂ 3 ಸ್ಪೋಕ್ ಸ್ಟಿಯರಿಂಗ್ ವೀಲ್ ಇದೆ. ಡ್ಯಾಷ್ ಬೋರ್ಡ್ ಸ್ಪೋರ್ಟಿ ವಿನ್ಯಾಸದಿಂದ ಕಂಗೊಳಿಸುತ್ತದೆ. ಎಸಿ ಓಕೆ. ಹಿಂಭಾಗದ ಸೀಟುಗಳಿಗೆ ಪ್ರತ್ಯೇಕವಾಗಿ ಎಸಿ ವೆಂಟ್ಸ್ ಇವೆ.
ಸಂಗ್ರಹ ಸ್ಥಳಾವಕಾಶವೂ ವಿಶಾಲವಾಗಿದೆ. ಇದರ ಇಂಟಿರಿಯರ್ ಸೀಟುಗಳು ಅತ್ಯುತ್ತಮ ಗುಣಮಟ್ಟದ ವಸ್ತುಗಳಿಂದ ನಿರ್ಮಿತವಾಗಿದ್ದು, ಪ್ರೀಮಿಯಂ ಲುಕ್ ನೀಡುತ್ತದೆ.
ಡಸ್ಟರ್ ಇಷ್ಟವಾಗಲು ಇಷ್ಟು ಸಾಲದೇ?


Click it and Unblock the Notifications









