ಧೂಳು ಮಗಾ ಧೂಳ್: ರೆನೊ ಡಸ್ಟರ್ ಎಸ್‌ಯುವಿ ವಿಮರ್ಶೆ

ರೆನೊ ಫ್ಯಾಕ್ಟರಿಯಿಂದ ದೇಶದ ರಸ್ತೆಯಲ್ಲಿ ಧೂಳೆಬ್ಬಿಸಲು ಬಂದ ಎಸ್‌ಯುವಿ ಡಸ್ಟರ್. ಸ್ಪೋರ್ಟ್ಸ್ ಕಾರೊಂದು ಇಷ್ಟು ಕಡಿಮೆಗೆ ಸಿಗಬಹುದು ಎಂದು ತಿಳಿದಾಗ ನನಗೆ ಅಚ್ಚರಿಯಾದದ್ದು ಸುಳ್ಳಲ್ಲ. 7.19 ಲಕ್ಷ ರು.ಗೆ ಈ ಶಕ್ತಿಶಾಲಿ ಸ್ಪೋರ್ಟ್ಸ್ ಕಾರನ್ನು ಖರೀದಿಸಬಹುದು.

ನೂತನ ರೆನೊ ಡಸ್ಟರ್ ಒಟ್ಟು ಆರು ಆವೃತ್ತಿಗಳಲ್ಲಿ ಲಭ್ಯವಿದೆ. ಅದರಲ್ಲಿ ಎರಡು ಪೆಟ್ರೋಲ್ ಆವೃತ್ತಿ. ನಾಲ್ಕು ಡೀಸೆಲ್ ಆವೃತ್ತಿ. ಈ ಕಾರಿನ ಒಟ್ಟಾರೆ ಉದ್ದ 4315 ಎಂಎಂ. ಇದು 106.6 ಅಶ್ವಶಕ್ತಿಯ 1.6 ಲೀಟರಿನ ಪೆಟ್ರೋಲ್ ಎಂಜಿನ್, 83.8 ಅಶ್ವಶಕ್ತಿಯ 1.5 ಲೀಟರಿನ ಡೀಸೆಲ್ ಎಂಜಿನ್ ಮತ್ತು 103.8 ಅಶ್ವಶಕ್ತಿ ನೀಡುವ 1.5 ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ.

 Renault Duster Review

ಡಸ್ಟರ್ ಅಂದ್ರೆ ಧೂಳು ಎಂದು ಅರ್ಥಮಾಡಿಕೊಳ್ಳಬಹುದು. ರಸ್ತೆಯಲ್ಲಿ ಧೂಳೆಬ್ಬಿಸಲು ಬಂದಿರುವ ಈ ಕಾರು ಒಳ್ಳೆ ಗಾಂಭಿರ್ಯದ ವಿನ್ಯಾಸ ಹೊಂದಿದೆ. ಮಾರುತಿ, ಹ್ಯುಂಡೈ ಮತ್ತು ಟಾಟಾ ಕಾರುಗಳಿಗೆ ಪ್ರಬಲ ಪೈಪೋಟಿಯನ್ನೂ ಇದು ನೀಡಬಹುದು. ಯುರೋಪ್, ಅಲ್ಜೇರಿಯಾ, ಟರ್ಕಿ, ಉಕ್ರೈನ್, ಈಜಿಪ್ಟ್ ಮುಂತಾದ ಹಲವು ದೇಶಗಳಲ್ಲಿ ಈ ಡಸ್ಟರ್ ಕಾರು ಡೆಸಿಕಾ ಹೆಸರಲ್ಲಿ ಮಾರಾಟವಾಗುತ್ತಿದೆ.

ದೇಶದಲ್ಲಿರುವ ಗಜಗಾತ್ರದ ಎಸ್‌ಯುವಿಗಳಿಗೆ ಹೋಲಿಸಿದರೆ ಇದು ಕೊಂಚ ಪುಟ್ಟದಾಗಿದ್ದು, ಇಷ್ಟವಾಗುತ್ತದೆ. ನಿಸ್ಸಾನ್ ಬಿಒ ಪ್ಲಾಟ್ ಫಾರ್ಮ್ ನಲ್ಲಿ ಅಭಿವೃದ್ಧಿಪಡಿಸಿರುವ ಇದರ ಒಟ್ಟಾರೆ ಉದ್ದ 4.31 ಮೀಟರ್ ಇದೆ ಅಷ್ಟೇ. ರೆನೊ ಕೊಲಿಯೊಸ್ ಗಿಂತ ಕೊಂಚ ಕಡಿಮೆ ಉದ್ದವಿದೆ. ಸಿಟಿ ರಸ್ತೆ ಮಾತ್ರವಲ್ಲದೇ ಆಫ್ ರೋಡ್ ಸವಾರಿಗೂ ಇದು ಸೂಕ್ತ ಮತ್ತು ಸಮರ್ಥ.

ಸದೃಢ ಚಕ್ರಗಳು, ಕ್ರೋಮ್ ಗ್ರಿಲ್ ಹೊದಿಕೆ, ಆಕರ್ಷಕ ಪಾರ್ಶ್ವ ವಿನ್ಯಾಸವೆಲ್ಲ ಸೇರಿ ಈ ಎಸ್‌ಯುವಿ ಗಂಭೀರತೆ ಮತ್ತು ಸೌಂದರ್ಯ ಹೆಚ್ಚಾಗಿದೆ. ಜಗತ್ತಿನ ಎಲ್ಲಾ ಭೂಭಾಗಗಳಲ್ಲೂ ರೆನೊ ಡಸ್ಟರ್ ಟೆಸ್ಟ್ ಮಾಡಿದೆ ಎಂದು ಕೆಲವು ವರದಿಗಳು ಹೇಳುತ್ತವೆ. ಕಡಿಮೆ ತೂಕ ಮತ್ತು ಸಣ್ಣಗಾತ್ರದ ಎಸ್‌ಯುವಿಯಲ್ಲಿ ಆರಾಮವಾಗಿ ಡ್ರೈವ್ ಮಾಡಬಹುದಾಗಿದೆ.

ನಮ್ಮ ಜನರಿಗೆ ಇಷ್ಟವಾಗುವ ಅಂಶವೆಂದರೆ ಇದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆಯ್ಕೆಯಲ್ಲೂ ದೊರಕುವುದು. ಇದ್ರಲ್ಲಿ ಪೆಟ್ರೋಲ್ ಚಾಲಿತ ಡಸ್ಟರ್ 1598 ಸಿಸಿ ಐ4 ಡಿಒಎಚ್ ಸಿ ಎಂಜಿನ್ ಹೊಂದಿದೆ. ಇದು 5850 ಆವರ್ತನಕ್ಕೆ 100.3 ಅಶ್ವಶಕ್ತಿ ಮತ್ತು ಗರಿಷ್ಠ 3,750 ಆವರ್ತನಕ್ಕೆ ಗರಿಷ್ಠ 145 ಟಾರ್ಕ್ ಪವರ್ ನೀಡುತ್ತದೆ.

ಡೀಸೆಲ್ ಚಾಲಿತ ಡಸ್ಟರ್ 1461 ಸಿಸಿ ಟರ್ಬೊಚಾರ್ಜರ್ ಐ4 ಎಸ್ಒಎಚ್ ಸಿ ಎಂಜಿನ್ ಹೊಂದಿದೆ. ಈ ಎಂಜಿನ್ ಎರಡು ವಿಭಿನ್ನ ಆಯ್ಕೆಯಲ್ಲಿ ದೊರಕುತ್ತಿದೆ. ಇದು 108.3 ಅಶ್ವಶಕ್ತಿ ಮತ್ತು 83.5 ಅಶ್ವಶಕ್ತಿ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಇವೆರಡ ಟಾರ್ಕ್ ಪವರ್ ಅನುಕ್ರಮವಾಗಿ 200ಎನ್ಎಂ ಮತ್ತು 248 ಎನ್ಎಂ ಇದೆ. ಡಸ್ಟರ್ ಎರಡು ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರಕುತ್ತದೆ.

ಐದು ಸ್ಪೀಡಿನ ಮ್ಯಾನುಯಲ್ ಮತ್ತು ಆರು ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರಕುತ್ತದೆ. ಕ್ಷಮಿಸಿ, ಆಟೋಮ್ಯಾಟಿಕ್ ಆವೃತ್ತಿ ಲಭ್ಯವಿಲ್ಲ.

ರೆನೊ ಬಗ್ಗೆ ನಿಮಗೆ ಪ್ರಮುಖ ವಿಚಾರ ಹೇಳಲು ಮರೆತೆ. ಮುಂದಿನ ಪುಟ ನೋಡಿ

Most Read Articles

Kannada
English summary
Renault Duster Review. Price Rs 7.19 lakh to Rs 11.29 lakh. New Small SUV Duster available in six variants. Renault Duster Mileage, colors, Exterior, Interior, Comfort, Engine, Performance and Overall Review.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X