ರಾಪಿಡ್: ಎಕ್ಸ್ ಟೀರಿಯರ್ ಮತ್ತು ಇಂಟಿರಿಯರ್

By Super

Skoda Rapid
ಎಕ್ಸ್ ಟೀರಿಯರ್: ಸ್ಕೋಡಾ ರಾಪಿಡ್ ಕಾರನ್ನು ಹೊರಗಿನಿಂದ ನೋಡಿದರೆ ವಿನ್ಯಾಸ ಇಷ್ಟವಾಗುತ್ತದೆ. ಇದು ನೋಡಲು ಕೊಂಚ ಸ್ಕೋಡಾ ಲೌರಾ ಕಾರಿನಂತೆ ಇದೆ. ಅಥವಾ ಸ್ಕೋಡಾ ಒಕ್ಟಾವಿಯಾದಂತೆ ಕಾಣಬಹುದು. ಅಲಾಯ್ ವೀಲ್, ಆಕರ್ಷಕ ರೇಡಿಯೆಟರ್ ಗ್ರಿಲ್, ರೂಫ್ ಮೇಲೆ ಆಂಟೆನಾ, ಬಾಡಿ ಬಣ್ಣದ ಹಿಂಭಾಗದ ಮತ್ತು ಮುಂಭಾಗದ ಬಂಪರ್ ಗಳು, ಬಾಡಿ ಬಣ್ಣದ ಡೋರ್ ಹ್ಯಾಂಡಲ್ ಇತ್ಯಾದಿ ವಿಷ್ಯಗಳು ಗಮನ ಸೆಳೆಯುತ್ತವೆ.

ಇಂಟಿರಿಯರ್: ಸ್ಕೋಡಾ ಕಾರುಗಳು ಆರಾಮದಾಯಕತೆಯಿಂದ ಇಷ್ಟವಾಗುತ್ತದೆ. ಜೊತೆಗೆ ಸ್ಕೋಡಾ ಕಾರಿಗಳ ಇಂಟಿರಿಯರ್ ಫಿಟ್ ಮತ್ತು ಫಿನಿಷಿಂಗ್ ಇಷ್ಟವಾಗುತ್ತದೆ. ನೂತನ ರಾಪಿಡ್ ಕಾರು ಕೂಡ ಆರಾಮದಾಯಕತೆ ಮುಂತಾದ ಫೀಚರುಗಳಿಂದ ಗ್ರಾಹಕರಿಗೆ ಇಷ್ಟವಾಗುತ್ತದೆ.

ಸ್ಕೋಡಾ ರಾಪಿಡ್ ಡ್ಯಾಷ್ ಬೋರ್ಡ್ ಸ್ಕೋಡಾ ನೂತನ ಲಾರಾ ಕಾರಿನಂತೆ ಪ್ರೀಮಿಯಂ ಪ್ಲಾಸ್ಟಿಕ್ ನಿಂದ ರಚಿತವಾಗಿದೆ. ಸೀಟುಗಳು ಆರಾಮದಾಯಕ ಪ್ರಯಾಣಕ್ಕೆ ಸೂಕ್ತವಾಗಿದೆ. ಮಧ್ಯ ಭಾಗದಲ್ಲಿರುವ ಕನ್ಸೋಲ್ ಬೇಕಾದ ರೀತಿ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ. ಇನ್ಸುಟ್ರುಮೆಂಟ್ ಕ್ಲಸ್ಟರ್ ಆಕರ್ಷಕ ಹೊಂದಾಣಿಕೆ ಮತ್ತು ಡೈನಾಮಿಕ್ ಫೀಚರುಗಳಿಂದ ಕೂಡಿದೆ.

ರಾಪಿಡ್ ಕಾರಿನೊಳಗೆ ಸಾಕಷ್ಟು ಸ್ಥಳಾವಕಾಶವಿದೆ. ಈ ಸ್ಥಳಾವಕಾಶ ರಾಪಿಡ್ ಪ್ರಯಾಣಿಕರಿಗೆ ಅತ್ಯುತ್ತಮ ಸವಾರಿ ಅನುಭವ ನೀಡುತ್ತದೆ. ಸ್ಕೋಡಾ ರಾಪಿಡ್ 4,386 ಮಿ.ಮೀ. ಉದ್ದ, 1,699 ಮಿ.ಮೀ. ಅಗಲ ಮತ್ತು 1,466 ಮಿ.ಮೀ. ಎತ್ತರವಿದೆ. ಲೆಗ್ ರೂಂನಲ್ಲಿ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಪ್ರಯಾಣಿಕರು ಆರಾಮವಾಗಿ ಕಾಲಿಡಬಹುದಾಗಿದೆ.

More from DriveSpark

Article Published On: Monday, December 5, 2011, 12:30 [IST]
English summary
Skoda Rapid Review. Price in Bangalore. Skoda Rapid Specifications, Engine, Performance, Exterior, Interior, Safety Features..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+