ಕಾರು ವಿಮರ್ಶೆ: ಸ್ಕೋಡಾ ರಾಪಿಡ್ ಕಾರು ಹೇಗಿದೆ ಸಾರ್?

By: * ಪಿ. ಸಿ.
<ul id="pagination-digg"><li class="next"><a href="/car-reviews/skoda-rapid-exterior-interior-review-aid0134.html">Next »</a></li></ul>
Skoda Rapid Sedan Car Review
ಸ್ಕೋಡಾ ಕಂಪನಿಯ ಕಾರುಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಜರ್ಮನಿಯ ಕಾರು ತಯಾರಿಕಾ ಕಂಪನಿ ಸ್ಕೋಡಾ 2008ರಲ್ಲಿ ಫಾಬಿಯಾ ಹ್ಯಾಚ್ ಬ್ಯಾಕ್ ಕಾರನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿತ್ತು. ಕೆಲವು ತಿಂಗಳ ಹಿಂದೆ ಕಂಪನಿಯು ಸ್ಕೋಡಾ ಲೌರಾ ವಿಆರ್ಎಸ್ ಆವೃತ್ತಿಯನ್ನು ಹೊರತಂದಿತ್ತು.

ಇತ್ತೀಚೆಗೆ ಸ್ಕೋಡಾ ಹೊರತಂದ ಕಾರಿನ ಹೆಸರು ರಾಪಿಡ್. ಇದು ಅಗ್ಗದ ಸೆಡಾನ್ ಕಾರು. ಇದನ್ನು ಕಂಪನಿಯು ಫೋಕ್ಸ್ ವ್ಯಾಗನ್ ವೆಂಟೊ ಪ್ಲಾಟ್ ಫಾರ್ಮ್ ನಲ್ಲಿಯೇ ಹೊರತಂದಿತ್ತು. ಫಾಬಿಯಾ ಮತ್ತು ನೂತನ ಲೌರಾ ಕಾರಿನ ನಡುವೆ ಇದ್ದ ಗ್ಯಾಪಿಗೆ ರಾಪಿಡ್ ಸೇರಿಕೊಂಡಿದೆ. ಯಾಕೆಂದರೆ ಇದು ಮಧ್ಯಮ ಗಾತ್ರದ ಸೆಡಾನ್ ಕಾರು.

ಸ್ಕೋಡಾ ಫಾಬಿಯಾ ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ಅಂದರೆ ರಾಪಿಡ್ ಆಕ್ಟಿವ್, ಆಂಬಿಷನ್ ಮತ್ತು ಎಲಿಗೆನ್ಸ್. ಈ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ದೊರಕುತ್ತಿದೆ. ಇದು 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದೆ. ಪೆಟ್ರೋಲ್ ಆವೃತ್ತಿ 6 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಆಯ್ಕೆಯಲ್ಲಿ ದೊರಕುತ್ತಿದೆ.

ಇದು ಹೋಂಡಾ ಸಿಟಿ, ಫಿಯೆಟ್ ಲಿನಿಯಾ, ಫೋರ್ಡ್ ಫಿಯೆಸ್ಟಾ ಮತ್ತು ಟಾಟಾ ಮಾಂಝಾ ಕಾರುಗಳಿಗೆ ಪೈಪೋಟಿ ನೀಡಲಿದೆ. ಸ್ಕೋಡಾ ರಾಪಿಡ್ ಕಾರಿನಲ್ಲಿ ಯಾವೆಲ್ಲ ವಿಶೇಷತೆಗಳಿವೆ ಎಂದು ನೋಡೋಣ. ಇದು ಸಂಪೂರ್ಣ ರಾಪಿಡ್ ವಿಮರ್ಶೆ.

ಎಂಜಿನ್: ಸ್ಕೋಡಾ ರಾಪಿಡ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ಅಂದರೆ 1.6 ಲೀಟರ್ ಪೆಟ್ರೋಲ್ ಮತ್ತು 1.6 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ಇವು ಅತ್ಯುತ್ತಮ ಕಾರ್ಯಕ್ಷಮತೆ, ಶಕ್ತಿ ಮತ್ತು ಟಾರ್ಕ್ ಪವರ್ ಹೊಂದಿರುವ ಎಂಜಿನ್.

ಕಾರ್ಯಕ್ಷಮತೆ: 1.6 ಲೀಟರಿನ ಪೆಟ್ರೋಲ್ ಎಂಜಿನ್ ರಾಪಿಡ್ 105 ಪಿಎಸ್ ಮತ್ತು 153 ಟಾರ್ಕ್ ಪವರ್ ನೀಡುತ್ತದೆ. ಡೀಸೆಲ್ ಎಂಜಿನ್ ಕಾರು ಗರಿಷ್ಠ 105 ಪಿಎಸ್ ಮತ್ತು 250 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ. ಸ್ಕೋಡಾ ರಾಪಿಡ್ ಅತ್ಯುತ್ತಮವಾದ ಮೆಕ್ ಪೆರ್ಸನ್ ಸಸ್ಪೆನ್ಷನ್ ಹೊಂದಿದೆ.

ಸ್ಕೋಡಾ ರಾಪಿಡ್ ಕಾರಿನಲ್ಲಿ 10.7 ಸೆಕೆಂಡಿನಲ್ಲಿ ಪ್ರತಿಗಂಟೆಗೆ 0 – 100 ಕಿ.ಮೀ. ವೇಗ ಪಡೆದುಕೊಳ್ಳಬಹುದಾಗಿದೆ. ಸ್ಕೋಡಾ ರಾಪಿಡ್ ಸೆಡಾನ್ ಕಾರಿನಲ್ಲಿ ಪ್ರತಿಗಂಟೆಗೆ ಸ್ಪೋರ್ಟ್ ಕಾರಿನಂತೆ 188 ಕಿ.ಮೀ. ವೇಗದಲ್ಲಿ ಪ್ರಯಾಣಿಸಬಹುದಾಗಿದೆ.

ಇಷ್ಟೇನಾ ಎಂದು ಕೇಳದಿರಿ, ಮುಂದಿನ ಪುಟದಲ್ಲಿದೆ ರಾಪಿಡ್ ಇನ್ನೊಂದು ಮುಖ

<ul id="pagination-digg"><li class="next"><a href="/car-reviews/skoda-rapid-exterior-interior-review-aid0134.html">Next »</a></li></ul>
English summary
Skoda Rapid Review. Price in Bangalore. Skoda Rapid Specifications, Engine, Performance, Exterior, Interior, Safety Features..
Story first published: Monday, December 5, 2011, 12:33 [IST]
Please Wait while comments are loading...

Latest Photos