ಸೂಪರ್ಬ್ vs ಕ್ಯಾಮ್ರಿ; ಎರಡು ಕ್ವಾಲಿಟಿ ಕಾರುಗಳ ಟಕ್ಕರ್
ಇತ್ತೀಚೆಗಷ್ಟೇ ಚೆಕ್ ಗಣರಾಜ್ಯದ ಸಂಸ್ಥೆ ಸ್ಕೋಡಾ ಅತಿ ನೂತನ ಸೂಪರ್ಬ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದರೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆಯು ಹೆಚ್ಚಾಗ ತೊಡಗಿದೆ.
Also Read: ರೆನೊ ಕ್ವಿಡ್; ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ
ಭಾರತೀಯ ಮಾರುಕಟ್ಟೆಯಲ್ಲಿ ನೂತನ ಸ್ಕೋಡಾ ಸೂಪರ್ಬ್ ಕಾರಿಗೆ ಈಗಾಗಲೇ ಮಾರಾಟದಲ್ಲಿರುವ ಟೊಯೊಟಾ ಕ್ಯಾಮ್ರಿ ಪ್ರತಿಸ್ಪರ್ಧಿಯಾಗಲಿದೆ. ಈ ಬಗ್ಗೆ ಅಂದವಾದ ಲೇಖನದಲ್ಲಿ ತುಲನೆ ಮಾಡುವ ಪ್ರಯತ್ನವನ್ನು ಮಾಡಲಾಗುವುದು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)
2016 ಸ್ಕೋಡಾ ಸೂಪರ್ಬ್
ಸ್ಟೈಲ್ 1.8 ಟಿಎಸ್‌ಐ ಎಟಿ: 24,80 ಲಕ್ಷ ರು.
ಸ್ಟೈಲ್ 1.8 ಟಿಎಸ್‌ಐ ಎಂಟಿ: 23,52 ಲಕ್ಷ ರು.
ಲೌರಿನ್ ಆಂಡ್ ಕ್ಲೆಮೆಂಟ್ 1.8 ಟಿಎಸ್‌ಐ ಎಟಿ: 27,88 ಲಕ್ಷ ರು.
ಸ್ಟೈಲ್ 2.0 ಟಿಡಿಐ ಎಟಿ: 27,37 ಲಕ್ಷ ರು.
ಲೌರಿನ್ ಆಂಡ್ ಕ್ಲೆಮೆಂಟ್ 2.0 ಟಿಡಿಐ ಎಟಿ: 30,45 ಲಕ್ಷ ರು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)
2015 ಟೊಯೊಟಾ ಕ್ಯಾಮ್ರಿ
2.5 ಲೀಟರ್ ಪೆಟ್ರೋಲ್: 29.11 ಲಕ್ಷ ರು.
ಕ್ಯಾಮ್ರಿ ಹೈಬ್ರಿಡ್: 32.23 ಲಕ್ಷ ರು.

ವಿನ್ಯಾಸ - ಸ್ಕೋಡಾ ಸೂಪರ್ಬ್
ಹಿಂದಿನ ಮಾದರಿಗೆ ಹೋಲಿಸಿದಾಗ ನೂತನ ಸ್ಕೋಡಾ ಸೂಪರ್ಬ್ ಹೆಚ್ಚು ಪ್ರಭಾವಶಾಲಿ ವಿನ್ಯಾಸವನ್ನು ಮೈಗೂಡಿಸಿ ಬಂದಿದೆ. ಒಟ್ಟಾರೆ ವಿನ್ಯಾಸವು ಸ್ಕೋಡಾ ಒಕ್ಟಾವಿಯಾ ಕಾರನ್ನು ಪ್ರತಿಬಂಬಿಸುವಂತಿದೆ. ಮುಂಭಾಗದಲ್ಲಿ ಲಂಬವಾದ ಫ್ರಂಟ್ ಗ್ರಿಲ್, ಮಧ್ಯೆ ಸ್ಕೋಡಾ ಲಾಂಂಛನ, ಬದಿಯಲ್ಲಿ ಚೂಪಾದ ಹೆಡ್ ಲೈಟ್ ಹೆಚ್ಚು ಪರಿಣಾಮಕಾರಿಯೆನಿಸುತ್ತದೆ.

ವಿನ್ಯಾಸ - ಟೊಯೊಟಾ ಕ್ಯಾಮ್ರಿ
ಇನ್ನೊಂದೆಡೆ ಟೊಯೊಟಾ ಕ್ಯಾಮ್ರಿ ಸಹ ಪ್ರಭಾವಶಾಲಿ ವಿನ್ಯಾಸವನ್ನು ಮೈಗೂಡಿಸಿದೆ. ಇದು ಮುಂಭಾಗದಲ್ಲಿ ಪರಿಷ್ಕೃತ ಬಂಪರ್, ಕ್ರೋಮ್ ರೇಖೆ, ಟೊಯೊಟಾ ಲಾಂಛನ ಹಾಗೂ ಸ್ವಭಾವ ರೇಖೆಗಳನ್ನು ಪಡೆದಿದೆ.

ಎಂಜಿನ್ ತಾಂತ್ರಿಕತೆ - ಸ್ಕೋಡಾ ಸೂಪರ್ಬ್
ನೂತನ ಸ್ಕೋಡಾ ಸೂಪರ್ಬ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರೆಯುತ್ತದೆ.
ಪೆಟ್ರೋಲ್
1798 ಸಿಸಿ (ಮ್ಯಾನುವಲ್) - 177 ಅಶ್ವಶಕ್ತಿ - 320 ಎನ್ ಎಂ ತಿರುಗುಬಲ
1798 ಸಿಸಿ (ಆಟೋಮ್ಯಾಟಿಕ್) - 177 ಅಶ್ವಶಕ್ತಿ - 250 ಎನ್ ಎಂ ತಿರುಗುಬಲ
ಡೀಸೆಲ್
1968 ಸಿಸಿ (ಆಟೋಮ್ಯಾಟಿಕ್) - 174 ಅಶ್ವಶಕ್ತಿ - 350 ಎನ್ ಎಂ ತಿರುಗುಬಲ

ಸ್ಕೋಡಾ ಸೂಪರ್ಬ್ - ಗೇರ್ ಬಾಕ್ಸ್
ಪೆಟ್ರೋಲ್ ಮ್ಯಾನುವಲ್: 6 ಸ್ಪೀಡ್
ಪೆಟ್ರೋಲ್ ಆಟೋಮ್ಯಾಟಿಕ್: 7 ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್
ಡೀಸೆಲ್ ಆಟೋಮ್ಯಾಟಿಕ್: 6 ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್

ಎಂಜಿನ್ ತಾಂತ್ರಿಕತೆ - ಟೊಯೊಟಾ ಕ್ಯಾಮ್ರಿ
ಪೆಟ್ರೋಲ್ ಹಾಗೂ ಹೈಬ್ರಿಡ್ ಆವೃತ್ತಿಗಳಲ್ಲಿ ಲಭ್ಯವಾಗುತ್ತಿರುವುದು ಟೊಯೊಟಾ ಕ್ಯಾಮ್ರಿ ಪ್ಲಸ್ ಪಾಯಿಂಟ್ ಆಗಿದೆ.
ಪೆಟ್ರೋಲ್
2.5 ಲೀಟರ್ ಫೋರ್ ಸಿಲಿಂಡರ್
178 ಅಶ್ವಶಕ್ತಿ, 233 ಎನ್‌ಎಂ ತಿರುಗುಬಲ

ಕ್ಯಾಮ್ರಿ ಹೈಬ್ರಿಡ್
2.5 ಲೀಟರ್ ಫೋರ್ ಸಿಲಿಂಡರ್
158 ಅಶ್ವಶಕ್ತಿ, 213 ಎನ್ ಎಂ ತಿರುಗುಬಲ
ಗೇರ್ ಬಾಕ್ಸ್: 6 ಸ್ಪೀಡ್ ಆಟೋಮ್ಯಾಟಿಕ್

ಮೈಲೇಜ್ - ಸ್ಕೋಡಾ ಸೂಪರ್ಬ್
ಪೆಟ್ರೋಲ್: 14.12km/l
ಡೀಸೆಲ್: 18.19km/l

ಮೈಲೇಜ್ - ಟೊಯೊಟಾ ಕ್ಯಾಮ್ರಿ
ಪೆಟ್ರೋಲ್: 12.98km/l
ಡೀಸೆಲ್: 19.16km/l

ವೈಶಿಷ್ಟ್ಯಗಳು - ಸ್ಕೋಡಾ ಸೂಪರ್ಬ್
ಮೂರು ವಿಧಗಳ ಕ್ಲೈಮೇಟ್ ವಲಯ, ಐದು ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಕೆನೆಕ್ಟಿವಿಟಿ, ಸ್ಕೋಡಾ ಮಿರರ್ ಲಿಂಕ್ ಸಿಸ್ಟಂ, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಟೈಲ್ ಲ್ಯಾಂಪ್, ತ್ರಿ ಪವರ್ ಔಟ್ಲೆಟ್, ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್ ಜೊತೆ ಕ್ಯಾಮೆರಾ ಗೈಡನ್ಸ್, ಕ್ರೂಸ್ ಕಂಟ್ರೋಲ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಚಾಲಕ ಸೀಟು ಜೊತೆ ಮೆಮರಿ ಫಂಕ್ಷನ್, ಲೆಥರ್ ಇಂಟಿರಿಯರ್, ಕೂಲ್ಡ್ ಗ್ಲೋವ್ ಬಾಕ್ಸ್ ಇತ್ಯಾದಿ ವೈಶಿಷ್ಟ್ಯಗಳಿಗಳಿರಲಿದೆ.

ವೈಶಿಷ್ಟ್ಯಗಳು - ಟೊಯೊಟಾ ಕ್ಯಾಮ್ರಿ
ರಿಕ್ಲೈನ್ ರಿಯರ್ ಸೀಟು, ರಿಯರ್ ಆರ್ಮ್ ರೆಸ್ಟ್ ಜೊತೆ ಕಂಟ್ರೋಲ್, ಹಿಂದುಗಡೆ ವಿಂಡ್ ಶಿಲ್ಡ್ ಗೆ ಪವರ್ ಸನ್ ಶೇಡ್ , ತ್ರಿ ಝೋನ್ ಕ್ಲೈಮೇಟ್ ಕಂಟ್ರೋಲ್, ಎಲ್ ಇಡಿ ಹೆಡ್ ಲ್ಯಾಂಪ್, 17 ಇಂಚುಗಳ ಅಲಾಯ್ ವೀಲ್, ಬ್ಯಾಕ್ ಮಾನಿಟರ್ ಜೊತೆ ಕಾರ್ನರ್ ಸೆನ್ಸಾರ್, ಔಟ್ ಸೈಡ್ ರಿಯರ್ ವ್ಯೂ ಮಿರರ್ ಜೊತೆ ಮೆಮರಿ ಫಂಕ್ಷನ್, ಫ್ರಂಟ್ ಸೀಟು ವೆಂಟಿಲೇಷನ್ ಸಿಸ್ಟಂ ಮತ್ತು ಪ್ರಯಾಣಿಕರಿಗೆ ಹೊಂದಾಣಿಸಬಹುದಾದ ಹೆಡ್ ರೆಸ್ಟ್ ಇತ್ಯಾದಿ ಸೌಲಭ್ಯಗಳು ದೊರಕಲಿದೆ.

ಸುರಕ್ಷತೆ - ಸ್ಕೋಡಾ ಸೂಪರ್ಬ್
8 ಏರ್ ಬ್ಯಾಗ್,
ಎಬಿಎಸ್,
ಇಬಿಡಿ,
ಹಿಲ್ ಹೋಲ್ಡ್ ಕಂಟ್ರೋಲ್,
ಟ್ರಾಕ್ಷನ್ ಕಂಟ್ರೋಲ್ ಜೊತೆ ಇಎಸ್ ಸಿ

ಸುರಕ್ಷತೆ - ಟೊಯೊಟಾ ಕ್ಯಾಮ್ರಿ
7 ಏರ್ ಬ್ಯಾಗ್,
ಇಂಪಾಕ್ಟ್ ಅಬ್ಸಾರ್ಬಿಂಗ್ ಬಾಡಿ,
ಹಿಲ್ ಸ್ಟ್ಯಾರ್ಟ್ ಅಸಿಸ್ಟ್
ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್

ಅಂತಿಮ ತೀರ್ಪು
ಬೆಲೆ, ಎಂಜಿನ್ ತಾಂತ್ರಿಕತೆ, ಸ್ಟೈಲ್, ವೈಶಿಷ್ಟ್ಯಗಳು ಮತ್ತು ಸುರಕ್ಷತೆಯ ವಿಚಾರದಲ್ಲಿ ತನ್ನ ಪ್ರತಿಸ್ಪರ್ಧಿಯನ್ನು ನೂತನ ಸ್ಕೋಡಾ ಸೂಪರ್ಬ್ ಹಿಂದಿಕ್ಕಿದೆ. ಆದರೆ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಆಯ್ಕೆಯಲ್ಲಿ ಲಭ್ಯವಾಗುತ್ತಿರುವುದು ಹೆಚ್ಚು ಸಕರಾತ್ಮಕ ಅಂಶವಾಗಿ ಪರಿಣಮಿಸಲಿದೆ. ಇದು ಹೆಚ್ಚು ಪರಿಸರ ಸ್ನೇಹಿ ಹಾಗೂ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ. ಒಟ್ಟಿನಲ್ಲಿ ಸ್ಕೋಡಾ ಸೂಪರ್ಬ್ ಮತ್ತು ಟೊಯೊಟಾ ಕ್ಯಾಮ್ರಿ ಒಂದಕ್ಕೊಂದು ಪ್ರಬಲ ಪೈಪೋಟಿಯನ್ನು ಒಡ್ಡುತ್ತಿದೆ.

01. ಡಿಜೈರ್ vs ಜೆಸ್ಟ್; ಕಾಂಪಾಕ್ಟ್ ಸೆಡಾನ್ ಎಎಂಟಿ ಕಾರುಗಳ ರೇಸ್
02. ಟಾಟಾ ಝಿಕಾ vs ಹ್ಯುಂಡೈ ಗ್ರಾಂಡ್ ಐ10; ಗೆಲುವು ಯಾರಿಗೆ


Click it and Unblock the Notifications








