ಟಾಟಾ ಝಿಕಾ vs ಹ್ಯುಂಡೈ ಗ್ರಾಂಡ್ ಐ10; ಗೆಲುವು ಯಾರಿಗೆ?
ಟಾಟಾದ ಹೊಸ ಹ್ಯಾಚ್‌ಬ್ಯಾಕ್ ಕಾರು ಝಿಕಾ ಈಗಾಗಲೇ ಭಾರಿ ಪ್ರಚಾರದಲ್ಲಿದ್ದು, ಅತಿ ಶೀಘ್ರದಲ್ಲೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಪ್ರಸ್ತುತ ಕಾರು ಎಂಟ್ರಿ ಲೆವೆಲ್ ಆಲ್ಟೊ ಹಾಗೂ ಕ್ವಿಡ್ ಸೇರಿದಂತೆ ಸ್ವಲ್ಪ ಮೇಲ್ದರ್ಜೆಯಲ್ಲಿ ಗುರುತಿಸಿಕೊಂಡಿರುವ ಹ್ಯುಂಡೈ ಗ್ರಾಂಡ್ ಐ10 ಸವಾಲನ್ನು ಎದುರಿಸುತ್ತಿದೆ.
Also Read: ಟಾಟಾ ಝಿಕಾ ಮೀಡಿಯಾ ಡ್ರೈವ್; ಏನೆಲ್ಲ ನಿರೀಕ್ಷೆ ಮಾಡಬಹುದು?
ಟಾಟಾ ಕೈಟ್ ಎಂಬ ಕೋಡ್ ಹೆಸರಿನಿಂದ ಝಿಕಾ ಎಂಬ ಸೊಗಸಾದ ಕಾರು ರೂಪುಗೊಂಡಿದ್ದು, ಬೆಲೆಯಿಂದ ಹಿಡಿದು ವಿನ್ಯಾಸ, ವೈಶಿಷ್ಟ್ಯ ಹಾಗೂ ಸುರಕ್ಷತೆಯಲ್ಲಿ ತನ್ನ ಛಾಪು ಮೂಡಿಸಲಿದೆ. ಅಂದ ಹಾಗೆ ನೂತನ ಝಿಕಾ ತನ್ನ ಪ್ರತಿಸ್ಪರ್ಧಿ ಗ್ರಾಂಡ್ ಐ10 ಸವಾಲನ್ನು ಹೇಗೆ ಎದುರಿಸಲಿದೆ ಎಂಬುದರ ಬಗ್ಗೆ ಇಲ್ಲಿ ಚರ್ಚಿಸಲಾಗುವುದು.

ವಿನ್ಯಾಸ - ಟಾಟಾ ಝಿಕಾ
ತಾಜಾತನದ ವಿನ್ಯಾಸ ಮೈಗೂಡಿಸಿಕೊಂಡಿರುವ ಟಾಟಾ ಝಿಕಾ ಹೊಸ ಖರೀದಿಗಾರರನ್ನು ಆಕರ್ಷಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಮುಂಭಾಗದಲ್ಲಿ ದಿಟ್ಟವಾದ ಫ್ರಂಟ್ ಗ್ರಿಲ್, ಆಕರ್ಷಕ್ ಹೆಡ್ ಲೈಟ್ ವಿನ್ಯಾಸ, ಬದಿಯಲ್ಲಿ ಸ್ವಭಾವ ರೇಖೆ, ಕಪ್ಪುವ ವರ್ಣದ ಬಿ ಪಿಲ್ಲರ್, ರಿಯರ್ ಸ್ಪಾಯ್ಲರ್ ಹಾಗೂ ರಿಯರ್ ಬಂಪರ್ ಎಲ್ಲವೂ ಆಕರ್ಷಕವಾಗಿದೆ.

ವಿನ್ಯಾಸ - ಹ್ಯುಂಡೈ ಗ್ರಾಂಡ್ ಐ10
ಬಿಡುಗಡೆ ವೇಳೆಯಲ್ಲಿ ಸ್ಟೈಲಿಷ್ ವಿನ್ಯಾಸ ಪಟ್ಟವನ್ನು ಕಾಯ್ದುಕೊಂಡಿರುವ ಗ್ರಾಂಡ್ ಐ10 ಈಗ ಸ್ವಲ್ಪ ಕಳೆಗುಂದಿದೆ ಎಂದರೆ ತಪ್ಪಾಗಲಾರದು. ಬಾಗಿದ ಹೆಡ್ ಲೈಟ್ ವಿನ್ಯಾಸ, ಹೆಡ್ ಲೈಟ್‌ಗೆ ತಾಗಿಕೊಂಡಿರುವ ಫ್ರಂಟ್ ಗ್ರಿಲ್, ಬದಿಯಲ್ಲಿ ಹಾಗೂ ಮೇಲ್ಬಾಗದಲ್ಲಿ ಕಪ್ಪು ವರ್ಣದ ರಬ್ಬರ್ ರೇಖೆ ಸೇರಿದಂತೆ ರಿಯರ್ ಸ್ಪಾಯ್ಲರ್ ಇಲ್ಲೂ ಕಾಣಸಿಗುವುದು.

ವೈಶಿಷ್ಟ್ಯಗಳು - ಟಾಟಾ ಝಿಕಾ
ಝಿಕಾ ಕಾರಿನಲ್ಲಿ ಚಾಲನಾ ಅನುಭವಕ್ಕೆ ಗರಿಷ್ಠ ಆದ್ಯತೆಯನ್ನು ಕೊಡಲಾಗಿದೆ. ಕೆಲವು ಗಮನಾರ್ಹ ವೈಶಿಷ್ಟ್ಯಗಳನ್ನು ಪಟ್ಟಿ ಮಾಡಿದಾದ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸ್ಮಾರ್ಟ್ ಫೋನ್ ಸಂಪರ್ಕಿಸಬಹುದಾದ ಮಾಹಿತಿ ಮನರಂಜನಾ ಪರದೆ, ಬ್ಲೂಟೂತ್, ನೇವಿಗೇಷನ್, ಪವರ್ ವಿಂಡೋ, ಹರ್ಮಾನ್ ಆಡಿಯೋ ಸಿಸ್ಟಂ ಹಾಗೂ 21 ಸ್ಟೋರೆಜ್ ಜಾಗಗಳು ಇದರಲ್ಲಿರಲಿದೆ. ಒಟ್ಟಿನಲ್ಲಿ ಸಂಸ್ಥೆಯ ಜನಪ್ರಿಯ ಜೆಸ್ಟ್ಹ ಹಾಗೂ ಬೋಲ್ಟ್‌ಗೆ ಸಮಾನವಾದ ರೀತಿಯಲ್ಲಿ ಒಳಮೈ ರಚಿಸಲಾಗಿದೆ.

ವೈಶಿಷ್ಟ್ಯಗಳು - ಗ್ರಾಂಡ್ ಐ10
ಹ್ಯುಂಡೈ ಗ್ರಾಂಡ್ ಐ10 ಕಾರಿನಲ್ಲೂ ವೈಶಿಷ್ಟ್ಯಗಳಿಗೆ ಬರವಿಲ್ಲ. 2 ಡಿನ್ ಇನ್ಪೋಟೈನ್ಮೆಂಟ್ ಸಿಸ್ಟಂನಿಂದ ತೊಡಗಿ ಬ್ಲೂಟೂತ್, ರಿಯರ್ ಎಸಿ ವೆಂಟ್ಸ್, ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು, ಕೂಲ್ಡ್ ಗ್ಲೋವ್ ಬಾಕ್ಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಪುಶ್ ಬಟನ್ ಸ್ಟ್ಯಾರ್ಟ್ ಇತ್ಯಾದಿ ಅಗತ್ಯ ವೈಶಿಷ್ಟ್ಯಗಳು ಕಂಡುಬರಲಿದೆ.

ಎಂಜಿನ್ ಮತ್ತು ಗೇರ್ ಬಾಕ್ಸ್ - ಟಾಟಾ ಝಿಕಾ
ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಝಿಕಾ ಆಗಮನವಾಗಲಿದೆ.
ಪೆಟ್ರೋಲ್: 1199ಸಿಸಿ, 3 ಸಿಲಿಂಡರ್ ಎಂಜಿನ್ (84 ಅಶ್ವಶಕ್ತಿ, 114 ಎನ್‌ಎಂ ತಿರುಗುಬಲ),
ಡೀಸೆಲ್: 1047 ಸಿಸಿ, 3 ಸಿಲಿಂಡರ್ ಎಂಜಿನ್ (69 ಅಶ್ವಶಕ್ತಿ, 140 ಎನ್‌ಎಂ ತಿರುಗುಬಲ)
ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್

ಎಂಜಿನ್ ಮತ್ತು ಗೇರ್ ಬಾಕ್ಸ್ - ಹ್ಯುಂಡೈ ಗ್ರಾಂಡ್ ಐ10
ಪೆಟ್ರೋಲ್: 1197 ಸಿಸಿ, 4 ಸಿಲಿಂಡರ್ ಎಂಜಿನ್ (82 ಅಶ್ವಶಕ್ತಿ, 113 ಎನ್‌ಎಂ ತಿರುಗುಬಲ)
ಡೀಸೆಲ್: 1120 ಸಿಸಿ, 3 ಸಿಲಿಂಡರ್ ಎಂಜಿನ್ (70 ಅಶ್ವಶಕ್ತಿ, 160 ಎನ್‌ಎಂ ತಿರುಗುಬಲ)
ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್

ಮೈಲೇಜ್
ಟಾಟಾ ಝಿಕಾ ಅಧಿಕೃತ ಮೈಲೇಜ್ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ವರೆಗಿನ ವರದಿಗಳ ಪ್ರಕಾರ ಟಾಟಾ ಝಿಕಾ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯು ಪ್ರತಿ ಲೀಟರ್ ಗೆ ಅನುಕ್ರಮವಾಗಿ 20 ಕೀ.ಮೀ. ಹಾಗೂ 25 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಅದೇ ಹೊತ್ತಿಗೆ ಹ್ಯುಂಡೈ ಗ್ರಾಂಡ್ ಐ10 ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 19 ಹಾಗೂ 24 ಕೀ.ಮೀ. ಮೈಲೇಜ್ ನೀಡಲಿದೆ.

ಸುರಕ್ಷತೆ
ಭವಿಷ್ಯದಲ್ಲಿ ಭಾರತದಲ್ಲಿ ಚಾಲ್ತಿಗೆ ಬರಲಿರುವ ಢಿಕ್ಕಿ ಪರೀಕ್ಷೆ ಮಾನದಂಡಗಳನ್ನು ಕಾಯ್ದುಕೊಂಡಿರುವ ಟಾಟಾ ಝಿಕಾ ಡ್ಯುಯಲ್ ಏರ್ ಬ್ಯಾಗ್ ಸೌಲಭ್ಯಗಳೊಂದಿಗೆ ಬರಲಿರುವ ನಿರೀಕ್ಷೆಯಿದೆ. ಅದೇ ಹೊತ್ತಿಗೆ ಹ್ಯುಂಡೈ ಗ್ರಾಂಡ್ ಐ10 ಕಾರಿನಲ್ಲಿರುವುದಕ್ಕೆ ಸಮಾನವಾಗಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಲಭ್ಯವಾಗುವ ಸಾಧ್ಯತೆಯಿದೆ.

ಅಂತಿಮ ತೀರ್ಪು
ನಿಸ್ಸಂಶಯವಾಗಿಯೂ ಟಾಟಾ ಝಿಕಾ ಅತಿ ಹೆಚ್ಚಿನ ಭರವಸೆಯನ್ನುಂಟು ಮಾಡಿದ್ದು, ಎಲ್ಲ ಹಂತದಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸುವಷ್ಟು ಶಕ್ತವಾಗಿದೆ. ಟಾಟಾದ ನೂತನ ಹೊರಿಝೋನೆಕ್ಸ್ಟ್ ಸಿದ್ಧಾಂತದಡಿಯಲ್ಲಿ ನೂತನ ಝಿಕಾ ನಿರ್ಮಾಣವಾಗುತ್ತಿದ್ದು, ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ವಿನ್ಯಾಸದಿಂದ ಹಿಡಿದು, ವೈಶಿಷ್ಟ್ಯ, ವಿಶಿಷ್ಟತೆ ಹಾಗೂ ಎಂಜಿನ್ ಕ್ಷಮತೆಯ ವಿಚಾರದಲ್ಲಿ ಟಾಟಾ ಝಿಕಾ ಅತ್ಯುತ್ತಮ ಆಯ್ಕೆಯಾಗಿರಲಿದೆ. ನಮ್ಮ ಡ್ರೈವ್ ಸ್ಪಾರ್ಕ್ ಕೈಗೊಂಡಿರುವ ಟಾಟಾ ಝಿಕಾ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್ ವಿಮರ್ಶೆಗಾಗಿ ಕಾದಿರಿ.

ಕ್ವಿಡ್, ಆಲ್ಟೊ ಸವಾಲನ್ನು ಎದುರಿಸಲು ನೂತನ ಟಾಟಾ ಝಿಕಾ ರೆಡಿ ಮುಂದಕ್ಕೆ ಓದಿ


Click it and Unblock the Notifications








