ಇನ್ನೋವಾ ಬಾನೆಟ್ ಮೇಲೆ ಪೇಜಾವರಶ್ರೀ ಬೈಠಕ್

ಶ್ರೀಗಳು ಕಾರಿನ ಮೇಲೆ ಯಾವ ಸಂದರ್ಭದಲ್ಲಿ ಕುಳಿತರೆಂಬ ಮಾಹಿತಿ ಸದ್ಯ ಲಭ್ಯವಿಲ್ಲ. ಆದರೆ ಆ ಕಾರಿನ ನಂಬರ್ ಪ್ಲೇಟ್ ಮೇಲ್ಗಡೆ ಎಸ್ ಪಿಎಂ ಎಂಬಕ್ಷರ ಮತ್ತು ಕಾರಿನ ಮೇಲ್ಗಡೆ ವಿಐಪಿ ಮಿಣುಕು ದೀಪವೂ ಇರುವುದರಿಂದ ಇದು ಫೇಕ್ ಚಿತ್ರವಲ್ಲ ಎಂದು ಖಚಿತವಾಗಿ ಹೇಳಬಹುದು.
ಚಿತ್ರ ನೋಡಿದರೆ ಪೇಜಾವರ ಶ್ರೀಗಳು ಕಾರಿನ ಬಾನೆಟ್ ಮೇಲೆ ಕೂತು ಬೈಠಕ್ ನಡೆಸಿದ ರೀತಿ ಕಾಣುತ್ತದೆ. ಅಥವಾ ಭಕ್ತಾದಿಗಳೊಂದಿಗೆ ಸಂವಹನ ನಡೆಸುತ್ತಿರಬಹುದು. ಶ್ರೀ ಕೃಷ್ಣ ಹೆಸರಿನ ಟೊಯೊಟಾ ಇನ್ನೋವಾ ಕಾರನ್ನು ಸ್ವಾಮೀಜಿ ಹೆಚ್ಚಾಗಿ ನಿತ್ಯ ಪ್ರಯಾಣಕ್ಕೆ ಬಳಸುತ್ತಾರೆ. ಫೇಸ್ ಬುಕ್ ನಲ್ಲಿ ಸ್ವಾಮೀಜಿ ಕುಳಿತ ಕಾರನ್ನು ನೋಡಿದಾಗ ಇನ್ನೋವಾ ಕಾರಿನ ಕುರಿತು ಕನ್ನಡ ಡ್ರೈವ್ ಸ್ಪಾರ್ಕ್ ಓದುಗರಿಗೆ ಹೆಚ್ಚಿನ ಮಾಹಿತಿ ನೀಡಬೇಕೆಂದು ನಮಗನಿಸಿದೆ.
ಇನ್ನೋವಾ ಎಂಪಿವಿ ಹೆಚ್ಚಿನ ಜನರಿಗೆ ಇಷ್ಟದ ಬ್ರಾಂಡು. ಟೊಯೊಟಾ ಕಂಪನಿಯ ಇನ್ನೋವಾ ಮಲ್ಟಿಪರ್ಪೊಸ್ ವೆಹಿಕಲ್ ಹತ್ತು ಹಲವು ಆವೃತ್ತಿಗಳಲ್ಲಿ ದೊರಕುತ್ತದೆ. ಇದು ದೊಡ್ಡ ಕುಟುಂಬ ಸವಾರಿಗೆ ಸೂಕ್ತವಾದ ಕಾರು. ರಾಜಕಾರಣಿಗಳು, ಸ್ವಾಮೀಜಿಗಳು, ಉದ್ಯಮಿಗಳಿಗೆ ಈ ಎಂಪಿವಿ ಇಷ್ಟ.


Click it and Unblock the Notifications








