ಎರ್ಟಿಗಾ ಖದರಿಗೆ ಟೊಯೊಟಾ ಇನ್ನೋವಾ ಬೆದರುವುದೇ?

ಟೊಯೊಟಾ ಕಂಪನಿಯ ಇನ್ನೋವಾ ದೇಶದ ಎಂಪಿವಿ ಮಾರುಕಟ್ಟೆಯಲ್ಲಿ ಅನಭಿಷಿಕ್ತ ರಾಜನಂತೆ ಮೆರೆಯುತ್ತಿದೆ. ಆನೆ ನಡೆದದ್ದೇ ಹಾದಿ ಎಂಬಂತೆ ಮೆರೆಯುತ್ತಿದ್ದ ಈ ಎಂಪಿವಿಗೆ ಪೈಪೋಟಿ ನೀಡಲು ಮಹೀಂದ್ರ ಕ್ಷೈಲೊ, ಷೆವರ್ಲೆ ತವೆರಾ ಮತ್ತು ಟಾಟಾ ಆರಿಯಾ ಸೇರಿದಂತೆ ಯಾವುದೇ ಎಂಪಿವಿಗಳಿಗೆ ಆಗಿರಲಿಲ್ಲ. ಆದರೆ....

ಇನ್ನೋವಾ ಆಟ ಹೆಚ್ಚು ದಿನ ಮುಂದುವರೆಯುವುದೋ ಎಂಬ ಸಂಶಯ ಇದೀಗ ಶುರುವಾಗಿದೆ. ತಿಂಗಳ ಹಿಂದೆ ದೇಶದ ರಸ್ತೆಗೆ ಆಗಮಿಸಿದ ಮಾರುತಿ ಸುಜುಕಿ ಎರ್ಟಿಗಾ, ಟೊಯೊಟಾ ಇನ್ನೋವಾಕ್ಕೆ ಸೆಡ್ಡು ಹೊಡೆಯುವ ನಿರೀಕ್ಷೆಯಿದೆ. ಅದಕ್ಕೆ ಪೂರಕವಾಗಿ ಎರ್ಟಿಗಾವನ್ನು ಒಂದು ತಿಂಗಳಲ್ಲೇ ಸುಮಾರು 32 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ಮಾಡಿಕೊಂಡಿದ್ದಾರೆ.

ದುಬಾರಿ ಇನ್ನೋವಾಕ್ಕಿಂತ ಕಡಿಮೆ ದರದಲ್ಲಿರುವ ಎರ್ಟಿಗಾವೇ ಅತ್ಯುತ್ತಮವೆಂದು ಹೆಚ್ಚಿನ ಗ್ರಾಹಕರಿಗೆ ಅನಿಸುತ್ತಿರುವ ಸೂಚನೆಯೂ ಇದಾಗಿದೆ. ಟೊಯೊಟಾ ಇನ್ನೋವಾ ಸುಮಾರು 20ಕ್ಕಿಂತಲೂ ಹೆಚ್ಚು ಆವೃತ್ತಿಗಳಲ್ಲಿ ದೊರಕುತ್ತದೆ. ಆದರೆ ಎಂಟ್ರಿ ಲೆವೆಲ್ ಇನ್ನೋವಾ ಸೇರಿದಂತೆ ಎಲ್ಲಾ ಆವೃತ್ತಿಗಳ ದರ 10 ಲಕ್ಷ ರುಪಾಯಿಗಿಂತ ಹೆಚ್ಚಿದೆ.

ಆದರೆ ಮಾರುತಿ ಸುಜುಕಿ ಎರ್ಟಿಗಾ ದರ ಬೆಂಗಳೂರಿನಲ್ಲಿ 6.12 ಲಕ್ಷ ರು.ನಿಂದ 9.5 ಲಕ್ಷ ರು.ವರೆಗಿದೆ. ಪೈಪೋಟಿಗೆ ಹೆದರಿ ಇನ್ನೋವಾ ದರ ಕಡಿಮೆ ಮಾಡಿದ್ರೂ ಪ್ರಯೋಜನವಿಲ್ಲ. ಯಾಕೆಂದರೆ ಟೊಯೊಟಾ ಇನ್ನೋವಾ ಅಗ್ಗದ ಆವೃತ್ತಿ ಖರೀದಿಸುವುದಕ್ಕಿಂತ ಮಾರುತಿ ಸುಜುಕಿ ಎರ್ಟಿಗಾ ಹೈಎಂಡ್ ಆವೃತ್ತಿ ಖರೀದಿಸುವುದು ಸೂಕ್ತವೆಂದು ಹೆಚ್ಚಿನ ಜನರ ಅಭಿಪ್ರಾಯ.

ಟೊಯೊಟಾ ಮುಂದೆ ಇನ್ನೋಂದು ಆಯ್ಕೆಯಿದೆ. ಕಂಪನಿಯು ಸಣ್ಣ ಎಂಪಿವಿ ಅವಾಂಝಾವನ್ನು ದೇಶದ ರಸ್ತೆಗೆ ಪರಿಚಯಿಸಬಹುದು. ಈ ಆವೃತ್ತಿ ಈಗಾಗಲೇ ಇಂಡೋನೇಷ್ಯಾದಲ್ಲಿ ಮಾರಾಟವಾಗುತ್ತಿದೆ. ಗಮನಾರ್ಹವೆಂದರೆ ಟೊಯೊಟಾ ಅವಾಂಝಾ ಗಾತ್ರವೂ ಎರ್ಟಿಗಾಕ್ಕಿಂತ ತುಸು ಹೆಚ್ಚಿದೆ.

ಮಾರುತಿ ಸುಜುಕಿ ಎರ್ಟಿಗಾ ಕಾರನ್ನು ನಗರದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ಸೆಡಾನ್ ಕಾರುಗಳಿಗಿಂತ ಹೆಚ್ಚು ಜನರ ಪ್ರಯಾಣ ಸಾಧ್ಯವಿರುವ ಕಾರು ಹುಡುಕುವರಿಗೆ ಇದು ಸಮರ್ಥ ಆಯ್ಕೆ. ಇದರ ಇಂಧನ ದಕ್ಷತೆ ಕೂಡ ಸೆಡಾನ್ ಕಾರುಗಳಷ್ಟೇ ಇದೆ. ಮಾರುತಿ ಎಸ್ಎಕ್ಸ್4 ಕಾರಿನಲ್ಲಿರುವ 1.4 ಲೀಟರ್ ಎಂಜಿನ್ ಹೊಂದಿದೆ.

ಆದರೆ ಇನ್ನೋವಾ ಎಂಪಿವಿ 2.2 ಲೀಟರಿನ ಶಕ್ತಿಶಾಲಿ ಡೀಸೆಲ್ ಎಂಜಿನ್ ಹೊಂದಿದೆ. ಈ ಕಾರಿನ ತೂಕವೂ ಹೆಚ್ಚಿದೆ. ಹೀಗಾಗಿ ಇದರ ಮೈಲೇಜ್ ಕೊಂಚ ಕಡಿಮೆಯಿದೆ. ಆದರೆ ಟೊಯೊಟಾ ಇನ್ನೋವಾ ತನ್ನ ವಿಶಾಲ ಸ್ಥಳಾವಕಾಶ, ಚಾಲನಾ ಆರಾಮದಾಯಕತೆ ಮತ್ತು ಹ್ಯಾಂಡ್ಲಿಂಗ್ ವಿಷಯದಲ್ಲಿ ಗ್ರಾಹಕರನ್ನು ಉಳಿಸಿಕೊಳ್ಳಬಹುದು. ಆದರೂ ಎರ್ಟಿಗಾ ಖದರಿಗೆ ಇನ್ನೋವಾ ತುಸು ಬೆದರುವುದುಂತು ದಿಟ.

More from DriveSpark

Article Published On: Wednesday, May 23, 2012, 10:42 [IST]
English summary
Toyota had an unquestionable hold on the top spot in the MPV segment with its Innova since its launch The Innova appears to have found a new competitor in the form of the Maruti Suzuki Ertiga which was launched just over a month ago. Although there have been other MPVs such as the Mahindra Xylo, Chevrolet Tavera and Tata Aria, none of them have been able to pose serious competition to the Innova.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+