ಭಾರತಕ್ಕೆ ಟೊಯೋಟಾ ಲ್ಯಾಂಡ್ ಕ್ರೂಯಿಸರ್

By Super

Toyota muscle machines head to India
ಭಾರತದ ಆರ್ಥಿಕ ಸ್ಥಿತಿ ತಗ್ಗು ದಿನ್ನೆ, ರಸ್ತೆ ತಡೆಗಳನ್ನು ಎದುರಿಸುತ್ತಿದ್ದರೆ ಭಾರತಕ್ಕೆ ಅಡಿಯಿಡುತ್ತಿರುವ ವಿದೇಶಿ ವಾಹನಗಳು ಸಪಾಟಾದ ರಸ್ತೆಯ ಮೇಲೆ ಭರ್ರನೆ ಸಾಗುತ್ತಿವೆ. ಭಾರತ ಸರ್ಕಾರ ಆಮದು ನೀತಿಯನ್ನು ಸಡಿಲಿಸಿರುವುದ ಲಾಭ ಪಡೆದಿರುವ ಟೊಯೋಟಾ ಕಾರು ತಯಾರಕ ಕಂಪನಿ ಲ್ಯಾಂಡ್ ಕ್ರೂಯಿಸರನ್ನು ಇಲ್ಲಿ ತರಲು ತುದಿಗಾಲ ಮೇಲೆ ನಿಂತಿದೆ.

ಸದ್ಯಕ್ಕೆ ಭಾರತದಲ್ಲಿ ಮಾರಾಟವಾಗುತ್ತಿರುವ ಏಕೈಕ ಲ್ಯಾಂಡ್ ಕ್ರೂಯಿಸರ್ ಪ್ರಡೋ. ಇದು ಪೆಟ್ರೋಲ್ ಮೇಲೆ ಮಾತ್ರ ಅವಲಂಬಿತವಾಗಿರುವುದರಿಂದ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಿದೆ. ಆದ್ದರಿಂದ ಟೊಯೋಟಾ ಡೀಸೆಲ್ ಎಂಜಿನ್ ಇರುವ ಲ್ಯಾಂಡ್ ಕ್ರೂಯಿಸರನ್ನು ಭಾರತಕ್ಕೆ ತರಲು ಹವಣಿಸುತ್ತಿದೆ.

ಇದರ ಜೊತೆಗೆ ಟೊಯೋಟಾ ಫಾರ್ಚುನರ್ ಕೂಡ ಇಗ್ನಿಷನ್ ಚಾಲೂ ಮಾಡಿ ಗೇರ್ ಬದಲಿಸಿಕೊಂಡು ಆಮದಾಗಲು ಸಜ್ಜಾಗಿ ನಿಂತಿದೆ. ಈ ಫಾರ್ಚುನರ್ ಕಾರು ಐಷಾರಾಮಿ ಕಾರುಗಳ ಪೈಕಿ ಹೊಂಡಾ ಸಿಆರ್ವಿಗೆ ಸ್ಪರ್ಧೆ ನೀಡಲಿದೆ ಎಂಬುದು ಕಾರು ಪಂಡಿತ ತರ್ಕ. ಪೆಟ್ರೋಲ್ ಎಂಜಿನ್ ಗಳಿಗೆ ಆಮದು ಸುಂಕ ಜಾಸ್ತಿ ವಿಧಿಸಿರುವುದರಿಂದ ಡೀಸೆಲ್ ಎಂಜಿನ್ ಗಳನ್ನು ಆಮದು ಮಾಡಿಕೊಳ್ಳುವುದೇ ಜಾಣತನವಾಗಿ ಕಾಣುತ್ತಿದೆ. ಇದರೊಂದಿಗೆ, ಎಲ್ಲ ಸೌಕರ್ಯಗಳಿರುವ ಮತ್ತೊಂದು ಪುಟಾಣಿ ಕಾರನ್ನು ಕೂಡ ಭಾರತಕ್ಕೆ ತರಲು ಟೊಯೋಟಾ ಕಾತರದಿಂದ ಕಾಯುತ್ತಿದೆ.

More from DriveSpark

Article Published On: Wednesday, February 18, 2009, 13:59 [IST]
English summary
Toyota is all set to bring in its Land Cruisers into Indian shores. For now the only car from the Land Cruiser family sold in India is the Prado. ಭಾರತಕ್ಕೆ ಟೊಯೋಟಾ ಲ್ಯಾಂಡ್ ಕ್ರೂಯಿಸರ್ ಬರಲಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+