2009ನೇ ವರ್ಷದ ಕಾರು ಮತ್ತು ಮೋಟಾರ್ ಬೈಕ್

ಕಾರು ಮತ್ತು ದ್ವಿಚಕ್ರವಾಹನಗಳ ಮಾರಾಟದ ಪ್ರಮಾಣ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಸನ್ನಿವೇಶದಲ್ಲಿ ಈ ಪ್ರಶಸ್ತಿ ಭಾರೀ ಭಾರೀ ಪ್ರತಿಷ್ಠೆಯ ಪ್ರಶ್ನೆಯಾಗಿ ಏರ್ಪಟ್ಟಿತ್ತು. ಭಾರತದ ಆಟೋಮೊಬೈಲ್ಸ್ ಮ್ಯಾಗಝಿನ್ ಗಳು ಮತ್ತು ಜೆಕೆ ಟೈರ್ಸ್ ಜಂಟಿಯಾಗಿ ಈ ಪ್ರಶಸ್ತಿಯನ್ನು ನೀಡಿವೆ. ಭಾರತದ ಪ್ರಮುಖ ಆಟೋಮೊಬೈಲ್ ಮ್ಯಾಗಝಿನ್ ಗಳಾದ ಓವರ್ ಡ್ರೈವ್, ಕಾರ್ ಇಂಡಿಯಾ, ಬಿಬಿಸಿ ಟಾಪ್ ಗೇರ್ ಮತ್ತು ಆಟೋ ಇಂಡಿಯಾದ ಪತ್ರಕರ್ತರು ಆಯ್ಕೆ ಸಮಿತಿಯಲ್ಲಿದ್ದರು.
2008ರಲ್ಲಿ ಬಿಡುಗಡೆಯಾದ ಕಾರು ಮತ್ತು ಬೈಕುಗಳು ಮಾತ್ರ ಈ ಪ್ರಶಸ್ತಿಗೆ ಅರ್ಹತೆ ಪಡೆಯುತ್ತವೆ. ಇದರಿಂದಾಗಿ ಕೆಲವೇ ಮಾಡೆಲ್ ಬೈಕುಗಳು ಸ್ಪರ್ಧಾಕಣದಲ್ಲಿದ್ದವು. ಇವುಗಳಲ್ಲಿ ಯಮಹಾ ವೈಝಡ್ಎಫ್-ಆರ್15, ಎಫ್ ಝಡ್16 ಮತ್ತು ಹೊಂಡಾ ಸ್ಟನ್ನರ್ ಅಂತಿಮ ಹಂತ ತಲುಪಿದ್ದವು. ಕಾರ್ ವಿಭಾಗದಲ್ಲಿ ಮಾರಾಟ ತಗ್ಗಿದ್ದರೂ ಕಳೆದ ವರ್ಷ ತಯಾರಿಕೆ ಪ್ರಮಾಣವೇನೂ ಕುಸಿದಿರಲಿಲ್ಲ. ಇದರಿಂದಾಗಿ, ನಾಲ್ಕು ಚಕ್ರಗಳ ವಾಹನ ವಿಭಾಗದಲ್ಲಿ ಭಾರೀ ಸ್ಪರ್ಧೆ ಏರ್ಪಟ್ಟಿತ್ತು. ವೋಕ್ಸ್ ವ್ಯಾಗನ್ ಜೆಟ್ಟಾ, ಹ್ಯುಂಡೈ ಐ20, ಟಾಟಾ ಇಂಡಿಕಾ ವಿಸ್ಟಾ, ಸ್ಕೋಡಾ ಫೇಬಿಯಾ, ಟೊಯೋಟಾ ಅಲ್ಟಿಸ್ ಮತ್ತು ಮಾರುತಿ ಎ-ಸ್ಟಾರ್ ಕೊನೆಯ ಹಂತ ತಲುಪಿದ್ದವು.
ಹೊಂಡಾ ಕಾರು ಕೇವಲ ಆರು ಅಂಕಗಳ ಅಂತರದಿಂದ ಹ್ಯುಂಡೈ ಐ20 ಕಾರನ್ನು ಹಿಂದೆ ಹಾಕಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಹೊಂಡಾ ಗಳಿಸಿದ್ದು 58 ಅಂಕಗಳು. ಹೊಂಡಾಗಿಂತ ಹತ್ತು ಅಂಕ ಕಡಿಮೆ ಪಡೆದ ಫೇಬಿಯಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ದ್ವಿಚಕ್ರ ವಾಹನ ವಿಭಾಗದಲ್ಲಿ ಯಮಹಾ YZF-R15 44 ಅಂಕಗಳೊಂದಿಗೆ ಪ್ರಶಸ್ತಿ ಹಿಡಿದೆತ್ತಿದೆ. FZ16 37 ಅಂಕ ಗಳಿಸಿದರೆ, ಸ್ಟನ್ನರ್ 21 ರನ್ ಗಳಿಸಿದೆ.
ಹ್ಯುಂಡೈ ಐ10, ಹೊಂಡಾ ಸಿವಿಕ್ ಮತ್ತು ಮಾರುತಿ ಸುಝುಕಿ ಸ್ವಿಫ್ಟ್ ಕಾರುಗಳು ಮತ್ತು ಬಜಾಜ್ ಪಲ್ಸರ್ 220 DTS Fi ಬೈಕು 2008ನೇ ಸಾಲಿನ ಪ್ರಶಸ್ತಿಯನ್ನು ಪಡೆದಿದ್ದವು.


Click it and Unblock the Notifications








