ಮಲೆಷಿಯಾದಲ್ಲಿ ಬಿಡುಗಡೆಯಾದ ಹೋಂಡಾ ಸಿಟಿ ಹೈಬ್ರಿಡ್ ಕಾರು

Written By:

ಭಾರತದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಯು ಮೆಲೆಷಿಯಾದಲ್ಲಿ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೂ ಲಗ್ಗೆಯಿಡಲಿದ್ದು, ಹೊಸ ಕಾರು ಮಾದರಿಯ ಮಾಹಿತಿ ಇಲ್ಲಿದೆ.

ಮಲೆಷಿಯಾದಲ್ಲಿ ಬಿಡುಗಡೆಯಾದ ಹೋಂಡಾ ಸಿಟಿ ಹೈಬ್ರಿಡ್ ಕಾರು

ಜಪಾನ್ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹೋಂಡಾ ಸಂಸ್ಥೆಯೂ ಮಲೆಷಿಯಾ ಮಾರುಕಟ್ಟೆಗೆ ಹೈಬ್ರಿಡ್ ಆವೃತ್ತಿಯನ್ನು ಪರಿಚಯಿಸಿದ್ದು, ಹೊಸ ಕಾರು ಮಾದರಿಯೂ ಇಂಟಲಿಜೆಂಟ್ ಡ್ಯುಯಲ್ ಕ್ಲಚ್(ಐ-ಡಿಸಿಡಿ) ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಮಲೆಷಿಯಾದಲ್ಲಿ ಬಿಡುಗಡೆಯಾದ ಹೋಂಡಾ ಸಿಟಿ ಹೈಬ್ರಿಡ್ ಕಾರು

ಬಿಡುಗಡೆಯಾಗಿರುವ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಯೂ ಅತ್ಯುತ್ತಮ ಇಂಧನ ಕಾರ್ಯಕ್ಷಮತೆಯನ್ನು ಕೂಡಾ ಹೊಂದಿದ್ದು, ಹೋಂಡಾದ ಮತ್ತೊಂದು ಹೈಬ್ರಿಡ್ ಆವೃತ್ತಿ ಜಾ ಕಾರು ಮಾದರಿಯ ಬಹುತೇಕ ಅಂಶಗಳನ್ನು ಸಿಟಿ ಮಾದರಿಯಲ್ಲೂ ಅಳವಡಿಸಲಾಗಿದೆ.

ಮಲೆಷಿಯಾದಲ್ಲಿ ಬಿಡುಗಡೆಯಾದ ಹೋಂಡಾ ಸಿಟಿ ಹೈಬ್ರಿಡ್ ಕಾರು

ಎಂಜಿನ್

1.5-ಲೀಟರ್ ಐ-ವಿಟೆಕ್ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಎಂಜಿನ್ ಹೊಂದಿರುವ ಹೋಂಡಾ ಸಿಟಿ ಕಾರು, ಲಿಥಿಮ್ ಅಯಾನ್ ಹೈಬ್ರಿಡ್ ಬ್ಯಾಟರಿಯೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಮಲೆಷಿಯಾದಲ್ಲಿ ಬಿಡುಗಡೆಯಾದ ಹೋಂಡಾ ಸಿಟಿ ಹೈಬ್ರಿಡ್ ಕಾರು

ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಯು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಎಂಜಿನ್ ಜೊತೆ ಜೊತೆಯಾಗಿ ಕಾರ್ಯನಿರ್ವಹಣೆಯಿಂದಾಗಿ 135ಬಿಎಚ್‌ಪಿ ಮತ್ತು 170ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಮಲೆಷಿಯಾದಲ್ಲಿ ಬಿಡುಗಡೆಯಾದ ಹೋಂಡಾ ಸಿಟಿ ಹೈಬ್ರಿಡ್ ಕಾರು

ಇದಲ್ಲದೇ 7-ಸ್ಪೀಡ್ ಆಟೋಮ್ಯಾಟಿಕ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಹೊಂದಿರುವ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಯು, ಪ್ರತಿ ಲೀಟರ್‌ಗೆ 25.6 ಕಿ.ಮಿ ಮೈಲೇಜ್ ನೀಡುತ್ತವೆ. ಇದರೊಂದಿಗೆ 6.8-ಇಂಚು ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ವ್ಯವಸ್ಥೆಯಿದೆ.

ಮಲೆಷಿಯಾದಲ್ಲಿ ಬಿಡುಗಡೆಯಾದ ಹೋಂಡಾ ಸಿಟಿ ಹೈಬ್ರಿಡ್ ಕಾರು

ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಯಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸುಧಾರಿತ ತಂತ್ರಜ್ಞಾನ ಅಳವಡಿಕೆ ಹಿನ್ನೆಲೆ ಬೆಲೆಗಳು ಕೊಂಚ ದುಬಾರಿಯಾಗಿವೆ. ಹೀಗಾಗಿ ಮೆಲೆಷಿಯಾದಲ್ಲಿ ಬಿಡುಗಡೆಯಾದ ಕಾರಿನ ಬೆಲೆಯೂ ಭಾರತೀಯ ಬೆಲೆಗಳ ಪ್ರಕಾರ 13 ಲಕ್ಷಕ್ಕೆ ಬಿಡುಗಡೆಯಾಗಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೂ ಹೋಂಡಾ ಸಿಟಿ ಹೈಬ್ರಿಡ್ ಲಗ್ಗೆಯಿಡುವುದು ಖಚಿತವಾಗಿದೆ.

English summary
Read in Kannada about Honda City Hybrid Launched In Malaysia.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark