ಸಿಹಿಸುದ್ದಿ.. ಹೋಂಡಾ ಕಾರುಗಳ ಮೇಲೆ ದೊಡ್ಡ ರಿಯಾಯಿತಿ

ಹೋಂಡಾ ಕಂಪನಿ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಹೋಂಡಾ ಸಿಟಿ (ಐದು ಮತ್ತು ನಾಲ್ಕನೇ ಜನರೇಷನ್), ಅಮೇಜ್, ಜಾಝ್ ಮತ್ತು WR-Vನಂತಹ ಆಯ್ದ ಮಾದರಿಗಳ ಮೇಲೆ ಈ ಡಿಸೆಂಬರ್‌ನಲ್ಲಿ ರಿಯಾಯತಿಯನ್ನು ಘೋಷಿಸಿದೆ. ಆಸಕ್ತ ಗ್ರಾಹಕರು, ಕಾರುಗಳ ಮೇಲೆ ಎಕ್ಸ್‌ಚೇಂಜ್ ಬೋನಸ್‌, ನಗದು ರಿಯಾಯಿತಿ, ಲಾಯಲ್ಟಿ ಬೋನಸ್‌ಗಳು ಮತ್ತು ಕಾರ್ಪೊರೇಟ್ ಪ್ರಯೋಜನಗಳನ್ನು ಪಡೆಯಬಹುದು.

ಹೋಂಡಾ WR-V: 72,340 ರೂ.ವರೆಗೆ ಆಫರ್

ಹೋಂಡಾ, ಈ ತಿಂಗಳು WR-Vಯ ಎಲ್ಲಾ ಪೆಟ್ರೋಲ್ ರೂಪಾಂತರಗಳ ಮೇಲೆ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿದೆ. ಇದು 30,000 ರೂ. ಮೌಲ್ಯದ ನಗದು ರಿಯಾಯಿತಿ ಅಥವಾ 35,340 ರೂ. ಮೌಲ್ಯದ ಉಚಿತ ಬಿಡಿಭಾಗಗಳನ್ನು ಒಳಗೊಂಡಿರುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು 20,000 ರೂ. ಮೌಲ್ಯದ ಕಾರು ಎಕ್ಸ್‌ಚೇಂಜ್ ಮೇಲೆ ರಿಯಾಯಿತಿ ಮತ್ತು 7,000 ರೂ. ಹೋಂಡಾ ಕಾರ್ ವಿನಿಮಯ ಬೋನಸ್ ಅನ್ನು ಸಹ ಪಡೆಯಬಹುದು. ಇದಲ್ಲದೆ, ಬ್ರ್ಯಾಂಡ್ WR-Vನಲ್ಲಿ 5,000 ರೂ ಮೌಲ್ಯದ ಲಾಯಲ್ಟಿ ಬೋನಸ್, ಕಾರ್ಪೊರೇಟ್ ರಿಯಾಯಿತಿಯನ್ನು ಸಹ ನೀಡುತ್ತಿದೆ.

ಹೋಂಡಾ WR-V, ಸ್ಟೈಲಿಂಗ್ ಮತ್ತು ವಿಶಾಲವಾದ, ಉತ್ತಮವಾಗಿ-ಪ್ಯಾಕ್ ಮಾಡಲಾದ ಒಳಾಂಗಣವನ್ನು ಹೊಂದಿದೆ. ಈ ಕಾರು, ಮಾರ್ಚ್ 2023 ರವರೆಗೆ ಮಾರಾಟದಲ್ಲಿರಲಿದೆ. WR-Vನಲ್ಲಿ ಎಂಜಿನ್ ಎರಡು ಆಯ್ಕೆಯಲ್ಲಿ ದೊರೆಯಲಿದೆ. 90hp, 1.2-ಲೀಟರ್ ಪೆಟ್ರೋಲ್ ಮತ್ತು 100hp, 1.5-ಡೀಸೆಲ್ ಎಂಜಿನ್ ಒಳಗೊಂಡಿದ್ದು, ಮ್ಯಾನುವಲ್ ಗೇರ್‌ಬಾಕ್ಸ್‌ಗಳೊಂದಿಗೆ ಮಾತ್ರ ಇದೆ. ರಿಯಲ್ ಡ್ರೈವಿಂಗ್ ಎಮಿಷನ್ಸ್ (RDE) ಪರೀಕ್ಷೆ ಮಾನದಂಡಗಳ ಕಾರಣ, ಫೆಬ್ರವರಿ 2023ರಿಂದ ಹೋಂಡಾ ಭಾರತದಲ್ಲಿ ಡೀಸೆಲ್ ಎಂಜಿನ್‌ಗಳನ್ನು ಉತ್ಪಾದಿಸುವುದಿಲ್ಲ ಎಂದು ವರದಿಯಾಗಿದೆ.

ಹೋಂಡಾ ಸಿಟಿ (Gen 5): 72,145 ರೂ.ವರೆಗೆ ರಿಯಾಯಿತಿ

ಈ ಕಾರಿನ ವಿಶಾಲವಾದ ಕ್ಯಾಬಿನ್, ಸಪ್ಲ್ ರೈಡ್ ಗುಣಮಟ್ಟ ಪ್ರೀಮಿಯಂ ವೈಶಿಷ್ಟ್ಯಗಳು ಎಲ್ಲರನ್ನು ಆಕರ್ಷಿಸುತ್ತಿದೆ. Gen 5 ಸಿಟಿ ತನ್ನ ಎಲ್ಲಾ ಪೆಟ್ರೋಲ್ ರೂಪಾಂತರಗಳ ಮೇಲೆ ಒಟ್ಟು 72,145 ರೂ. ರಿಯಾಯಿತಿಯನ್ನು ನೀಡಲಾಗುತ್ತಿದೆ. ಮ್ಯಾನುಯಲ್ ವರ್ಷನ್ ಗಳಲ್ಲಿ ಗ್ರಾಹಕರು 30,000 ರೂ.ವರೆಗೆ ನಗದು ರಿಯಾಯಿತಿ ಅಥವಾ 32,145 ರೂ. ಮೌಲ್ಯದ ಉಚಿತ ಬಿಡಿಭಾಗಗಳು, 20,000 ರೂ. ಮೌಲ್ಯದ ಕಾರ್ ಎಕ್ಸ್‌ಚೇಂಜ್ ಡಿಸ್ಕೌಂಟ್, 7,000 ರೂ. ಹೋಂಡಾ ಕಾರ್ ಎಕ್ಸ್‌ಚೇಂಜ್ ಬೋನಸ್ 8,000 ರೂ. ಕಾರ್ಪೊರೇಟ್ ರಿಯಾಯಿತಿಗಳು ಮತ್ತು 5,000 ರೂ. ಲಾಯಲ್ಟಿಯನ್ನು ಪಡೆಯಬಹುದು.

ಇಷ್ಟೇ ಅಲ್ಲದೆ, CVT ಆವೃತ್ತಿಯು 62,642 ರೂಪಾಯಿಯ ಒಟ್ಟು ರಿಯಾಯಿತಿಯನ್ನು ಒಳಗೊಂಡಿದೆ. ಇದರಲ್ಲಿ 20,000 ರೂ. ನಗದು ರಿಯಾಯಿತಿ ಅಥವಾ 22,642 ರೂ. ಮೌಲ್ಯದ ಉಚಿತ ಬಿಡಿಭಾಗಗಳು, 20,000 ರೂ. ಮೌಲ್ಯದ ಕಾರು ಎಕ್ಸ್‌ಚೇಂಜ್ ರಿಯಾಯಿತಿ, 5,000 ರೂ. ಲಾಯಲ್ಟಿ ಬೋನಸ್, 8,000 ರೂ.ಮೌಲ್ಯದ ಕಾರ್ಪೊರೇಟ್ ರಿಯಾಯಿತಿ, 7,000 ರೂಗಳ ವಿನಿಮಯ ಬೋನಸ್ ಅನ್ನು ಒಳಗೊಂಡಿದೆ. ಆದಾಗ್ಯೂ, ಹಿಂದಿನ ತಿಂಗಳಂತೆ, ಸಿಟಿ ಹೈಬ್ರಿಡ್‌ನಲ್ಲಿ ಯಾವುದೇ ಕೊಡುಗೆಯನ್ನು ನೀಡಿಲ್ಲ.

ಹೋಂಡಾ ಅಮೇಜ್: 43,144 ರೂ.ವರೆಗೆ ರಿಯಾಯಿತಿ

ಹೋಂಡಾದ ಅಮೇಜ್ ಬರೋಬ್ಬರಿ ಒಂಬತ್ತು ವರ್ಷಗಳಲ್ಲಿ ಐದು ಲಕ್ಷ ಯುನಿಟ್‌ ಮಾರಾಟವಾಗಿ ಮೈಲಿಗಲ್ಲನ್ನು ನಿರ್ಮಿಸಿದೆ. ಅಮೇಜ್ 90hp, 1.2-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 100hp (ಆಟೋಮೆಟಿಕ್ 80hp), 1.5-ಲೀಟರ್ ಡೀಸೆಲ್ ಎಂಜಿನ್ ಚಾಲಿತವಾಗಿದ್ದು ಆಟೋಮೆಟಿಕ್ ಗೇರ್‌ಬಾಕ್ಸ್ ಅನ್ನು ಹೊಂದಿದೆ. ಪೆಟ್ರೋಲ್ ಆವೃತ್ತಿಯ ಮೇಲೆ ಒಟ್ಟು 43,144 ರೂಗಳ ರಿಯಾಯಿತಿ ಪಡೆಯಬಹುದು. 10,000 ರೂ. ನಗದು ರಿಯಾಯಿತಿ ಅಥವಾ 12,144 ರೂ. ಮೌಲ್ಯದ ಉಚಿತ ಬಿಡಿಭಾಗಗಳು, 20,000 ರೂ. ಕಾರ್ ಎಕ್ಸ್ಚೇಂಜ್ ಬೋನಸ್, 5,000 ರೂಪಾಯಿಗಳ ಲಾಯಲ್ಟಿ ಬೋನಸ್ ಮತ್ತು 6,000 ರೂಪಾಯಿ ಮೌಲ್ಯದ ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ.

ಹೋಂಡಾ ಜಾಝ್: 37,047 ರೂ.ವರೆಗೆ ಡಿಸ್ಕೌಂಟ್

ಜಾಝ್ ಭಾರತದಲ್ಲಿ ಹೋಂಡಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕೊಡುಗೆಯಾಗಿದೆ. ಶೀಘ್ರದಲ್ಲೇ ದೇಶದಲ್ಲಿ ಇದರ ಮಾರಾಟ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಈ ತಿಂಗಳು, ಜಾಝ್‌ನಲ್ಲಿ ಒಟ್ಟು 37,047 ರೂ. ರಿಯಾಯಿತಿ ನೀಡಲಾಗುತ್ತದೆ. ಇದರಲ್ಲಿ 10,000 ರೂ. ನಗದು ರಿಯಾಯಿತಿ ಅಥವಾ ರೂ 12,047 ಮೌಲ್ಯದ ಉಚಿತ ಬಿಡಿಭಾಗಗಳು, ಕಾರ್ ಎಕ್ಸ್‌ಚೇಂಜ್‌ನಲ್ಲಿ 10,000 ರೂ. ರಿಯಾಯಿತಿ, 7,000 ರೂ. ಎಕ್ಸ್‌ಚೇಂಜ್ ಬೋನಸ್ ಅನ್ನು ಒಳಗೊಂಡಿದೆ. 5,000 ರೂ. ಲಾಯಲ್ಟಿ ಬೋನಸ್ ಮತ್ತು 3,000 ರೂ. ಕಾರ್ಪೊರೇಟ್ ರಿಯಾಯಿತಿಯೂ ಇದ್ದು, ಹ್ಯಾಚ್‌ಬ್ಯಾಕ್ 90hp, 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಹೋಂಡಾ ಸಿಟಿ (Gen 4): 5,000 ರೂ.ವರೆಗೆ ರಿಯಾಯಿತಿ

ಹಿಂದಿನ ತಿಂಗಳಿನಂತೆಯೇ, Gen 4 ಸಿಟಿಯನ್ನು ಕೇವಲ 5,000 ರೂಪಾಯಿಗಳ ಲಾಯಲ್ಟಿ ಬೋನಸ್‌ನೊಂದಿಗೆ ನೀಡಲಾಗುತ್ತಿದೆ. 2014ರಿಂದ ಮಾರಾಟದಲ್ಲಿರುವ ಮಧ್ಯಮ ಗಾತ್ರದ ಸೆಡಾನ್ ಈ ತಿಂಗಳು ಮಾರಾಟವನ್ನು ನಿಲ್ಲಿಸುವ ಸಾಧ್ಯತೆಯಿದೆ. ಇದು 119hp, 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತಿದ್ದು,5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಹೊಂದಿದ್ದು, ಆರಾಮದಾಯಕವಾದ ಪ್ರಯಾಣಕ್ಕೆ ಅನುಲವಾಗುವಂತೆ ವಿಶಾಲವಾದ ಒಳಾಂಗಣ ವಿನ್ಯಾಸ ಗ್ರಾಹಕರನ್ನು ತನ್ನತ್ತ ಆಕರ್ಷಿಸುವಂತೆ ಮಾಡಿದೆ.

Most Read Articles

Kannada
English summary
Good news big discount on honda cars
Story first published: Sunday, December 4, 2022, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X