ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

Written By:

'ಭಾರತದ ವರ್ಷದ ಕಾರು 2013' ಹಾಗೂ 'ವರ್ಷದ ಬೈಕ್ 2013' ಗೌರವಕ್ಕೆ ಅನುಕ್ರಮವಾಗಿ ರೆನೊ ಡಸ್ಟರ್ ಹಾಗೂ ಕೆಟಿಎಂ ಡ್ಯೂಕ್ 200 ಪಾತ್ರವಾಗಿದೆ. ಈ ಮೂಲಕ ಡಸ್ಟರ್ ಹಾಗೂ ಕೆಟಿಎಂ ಅತಿ ಜನಪ್ರಿಯ ಎಂಬುದನ್ನು ನಿರೂಪಿಸಿದೆ.

ಗುರುವಾರ ನಡೆದ ಸಮಾರಂಭದಲ್ಲಿ ಜೆಕೆ ಟೈರ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಉಪಧ್ಯಕ್ಷರಾದ ರಘುಪತಿ ಸಿಂಘಾನಿಯಾ ಪ್ರಶಸ್ತಿ ಪ್ರದಾನ ಮಾಡಿದರು.

ವರ್ಷದ ಕಾರು (ICOTY) ಹಾಗೂ ವರ್ಷದ ಬೈಕ್ (IMOTY) ತೀರ್ಪುಗಾರರ ಮಂಡಳಿಗೆ ಪ್ರಶಸ್ತಿ ಆಯ್ಕೆ ಬಹಳ ಕಠಿಣವೆನಿಸಿತ್ತು. ಹಾಗಿದ್ದರೂ ದಿ ಹಿಂದೂ ಬ್ಯುಸಿನೆಸ್ ಲೈನ್ ಸೇರಿದಂತೆ ಎಂಟು ಮಾನಿಟಿರಿಂಗ್ ತೀರ್ಪು ಮಂಡಳಿ ನಡೆಸಿದ ಸಮೀಕ್ಷೆಯಲ್ಲಿ ಮುಂದಿನ ವರ್ಷದ ಕಾರು ಹಾಗೂ ಬೈಕ್ ಆಯ್ಕೆ ಮಾಡಲಾಯಿತು. ಕಳೆದ ಐದು ವರ್ಷಗಳಿಂದ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಶಸ್ತಿಗೆ ನಾಮನಿರ್ದೇಶನ ಪಡೆಯಲು ಫೇಸ್‌ಲಿಫ್ಟ್ ಹೊರತುಪಡಿಸಿದ ನೂತನ ಕಾರು, ಬೈಕ್‌ಗಳನ್ನು ಆಯ್ಕೆ ಮಾಡಲಾಗಿತ್ತು. ಹಾಗೆಯೇ ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣವಾದ ಹಾಗೂ ಸಂಪೂರ್ಣವಾಗಿ ಸ್ಥಳೀಯವಾಗಿ ಜೋಡಣೆಯಾದ ಕಾರು ಬೈಕ್‌ಗಳ ಆರಿಸಲಾಗಿತ್ತು. ಈ ವಿಭಾಗದಲ್ಲಿ ಕಂಪ್ಲಿಟ್ಲಿ ಬಿಲ್ಟ್ ಯುನಿಟ್ (ಸಿಬಿಯು) ಪ್ರಶಸ್ತಿಗೆ ನಾಮನಿರ್ದೇಶನಗೊಂಡಿಲ್ಲ. ಹಾಗೆಯೇ ನವೆಂಬರ್ 30ಕ್ಕೂ ಮುಂಚಿತವಾಗಿ ಭಾರತೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾದ ಕಾರು, ಬೈಕ್‌ಗಳನ್ನು ಮಾತ್ರ ಪರಿಣಸಲಾಗಿತ್ತು.

ಭಾರತೀಯ ಪರಿಸ್ಥಿತಿಗಳಲ್ಲಿ ದರ, ಇಂಧನ ದಕ್ಷತೆ, ವಿನ್ಯಾಸ, ಆರಾಮದಾಯ, ಸುರಕ್ಷತೆ, ನಿರ್ವಹಣೆ, ಪ್ರಾಯೋಗಿಕ ಸಾಧ್ಯತೆ, ತಾಂತ್ರಿಕ ನಾವೀನ್ಯತೆ ಹಾಗೂ ಹೊಂದಾಣಿಕೆಗಳನ್ನು ಪರಿಗಣಿಸಿ ಪ್ರಶಸ್ತಿ ಮಾನದಂಡ ನಿಗದಿಪಡಿಸಲಾಗಿತ್ತು. ಹಾಗೆಯೇ ICOTY ಹಾಗೂ IMOTY ಸಹಾಯ ಸಂಸ್ಥೆಯಾದ ಜೆಕೆ ಟೈರ್ ಪ್ರಶಸ್ತಿ ಸಮಾರಂಭದ ಪ್ರಮುಖ ಪ್ರಾಯೋಜಕರಾಗಿದ್ದವು.

ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಒಟ್ಟು 20 ಕಾರುಗಳು 2013 ಪ್ರಶಸ್ತಿಗಾಗಿ ನಾಮ ನಿರ್ದೇಶನಗೊಂಡಿದ್ದವು. ಈ ಪೈಕಿ 11 ಫೈನಲಿಸ್ಟ್‌ಗಳನ್ನು ತೀರ್ಪುಗಾರರು ಆರಿಸಿದ್ದರು. ಅವುಗಳೆಂದರೆ ಷೆವರ್ಲೆ ಸೈಲ್ ಯುವಿ-ಎ, ಹ್ಯುಂಡೈ ಎಲಂಟ್ರಾ, ಮಹೀಂದ್ರ ಕ್ವಾಂಟೊ, ಮಾರುತಿ ಸುಜುಕಿ ಆಲ್ಟೊ 800, ಮಾರುತಿ ಸುಜುಕಿ ಎರ್ಟಿಗಾ, ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ನಿಸ್ಸಾನ್ ಇವಾಲಿಯಾ, ರೆನೊ ಡಸ್ಟರ್, ರೆನೊ ಪಲ್ಸ್, ರೆನೊ ಸ್ಕಾಲಾ ಹಾಗೂ ಟಾಟಾ ಸಫಾರಿ ಸ್ಟ್ರೋಮ್.

ಇದರಂತೆ ಸ್ಪರ್ಧಾತ್ಮಕ ದರದಲ್ಲಿ ರಸ್ತೆಗಿಳಿದಿರುವ ಯೂನಿಕ್ ವಿನ್ಯಾಸದ ರೆನೊ ಡಸ್ಟರ್ ಪ್ರಶಸ್ತಿಗೆ ಅರ್ಹವಾಗಿದೆ. ಹಾಗೆಯೇ ವಿಶ್ವಾಸಾರ್ಹತೆ, ಇಂಧನ ದಕ್ಷತೆ, ಉತ್ತಮ ಗುಣಮಟ್ಟ ಹಾಗೂ ಹ್ಯಾಂಡ್ಲಿಂಗ್ ವಿಷಯದಲ್ಲಿ ಡಸ್ಟರ್ ವಿಶೇಷವೆನಿಸಿದೆ.

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಎರ್ಟಿಗಾ ಪ್ರಸ್ತುತ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸ್ಪಲ್ವದರಲ್ಲೇ ಪ್ರಶಸ್ತಿ ಕಳೆದುಕೊಂಡಿದೆ. ಹಾಗೆಯೇ ಮಾರುತಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈನ ಎಲಂಟ್ರಾ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಅದೇ ರೀತಿ ಬೈಕ್ ವಿಭಾಗದಲ್ಲಿ ಕೆಟಿಎಂ ಡ್ಯೂಕ್ 200 ಆವೃತ್ತಿಗೆ ತಮ್ಮ ಸಮೀಪದ ಸ್ಪರ್ಧಾಳುಗಳಿಂದ ಕಠಿಣ ಪೈಪೋಟಿ ಎದುರಾಗಿತ್ತು. ಈ ಪೈಕಿ ಬಜಾಜ್ ಪಲ್ಸರ್ 200 ಎನ್‌ಎಸ್, ಡಿಸ್ಕವರ್ 125 ಎಸ್‌ಟಿ, ಹೊಂಡಾ ಡ್ರೀಮ್ ಯುಗ, ಸಿಬಿಆರ್150ಆರ್, ಸುಜುಕಿ ಹಯಾಟೆ, ಹೀರೊ ಇಗ್ನಿಟರ್, ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500, ಹ್ಯೊಸಂಗ್ ಜಿಟಿ250ಆರ್, ಟಿವಿಎಸ್ ಫೀನಿಕ್ಸ್ ಪ್ರಮುಖ ಲಿಸ್ಟ್‌ನಲ್ಲಿದ್ದವು.

ಇದರಂತೆ ಪಲ್ಸರ್ 200ಎನ್‌ಎಸ್ ಕೆಲವೇ ಅಂತರಗಳಲ್ಲಿ ಕೆಟಿಎಂಗೆ ಸೋಲೊಪ್ಪಿಕೊಂಡಿತು. ಹಾಗೆಯೇ ಡ್ರೀಮ್ ಯುಗ ಮೂರನೇ ಸ್ಥಾನ ಹರಸಿಕೊಂಡಿತು. ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಕೆಟಿಎಂ ಡ್ಯೂಕ್ ಭಾರತೀಯ ಪರಿಸ್ಥಿತಿಗೆ ಅನುಯೋಜ್ಯವಾಗಿದೆ. ಇದರ ಆಕ್ರಮಣಕಾರಿ ಆಧುನಿಕ ವಿನ್ಯಾಸ, ಪವರ್‌ಫುಲ್ 200ಸಿಸಿ, 25.5 ಸಿಸಿ ಎಂಜಿನ್ ಎಲ್ಲ ಹಂತದಲ್ಲಿಯೂ ಕ್ಲಾಸ್ ಬೈಕ್ ಎನಿಸಿಕೊಂಡಿದೆ.

ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

2013 ವರ್ಷದ ಕಾರು-ಬೈಕ್ ಪ್ರಶಸ್ತಿಗೆ ಅರ್ಹವಾದ ರನೊ ಡಸ್ಟರ್ ಹಾಗೂ ಕೆಟಿಎಂ ಡ್ಯೂಕ್

ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ 20ರಷ್ಟು ಕಾರುಗಳನ್ನು ಹಿಂದಿಕ್ಕಿ ಅಗ್ರ ಸ್ಥಾನದಲ್ಲಿ ಪಡೆದುಕೊಂಡ ರೆನೊ ಡಸ್ಟರ್ ಆಕರ್ಷಕ ಲುಕ್

ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

ಹಾಗೆಯೇ ವರ್ಷದ ಬೈಕ್ 2013 ಪ್ರಶಸ್ತಿ ಸ್ಪರ್ದೆಯಲ್ಲಿ ರಾಯಲ್ ಎನ್‌ಫೀಲ್ಡ್‌ಗಳಂತಹ ಪ್ರತಿಷ್ಠಿತ ಬೈಕ್‌ಗಳನ್ನು ಹಿಂದಿಕ್ಕಿದ ಕೆಟಿಎಂ ಡ್ಯೂಕ್ ಜಲಕ್

ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

ವರ್ಷದ ಕಾರು 2013 ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ದೇಶಿಯ ಅತಿ ದೊಡ್ಡ ಕಾರು ಕಂಪನಿಯಾದ ಮಾರುತಿ ಸುಜುಕಿಯ ಎರ್ಟಿಗಾ.

ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

ಮಾರುತಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈನ ಎಲಂಟ್ರಾ ಮೂರನೇ ಸ್ಥಾನ ಗೆದ್ದುಕೊಂಡಿದೆ.

ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

ವರ್ಷದ ಬೈಕ್ 2013 ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಪಲ್ಸರ್ 200 ಎನ್‌ಎಸ್

ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

ವರ್ಷದ ಬೈಕ್ 2013 ಸ್ಪರ್ಧೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಹೊಂಡಾ ಡ್ರೀಮ್ ಯುಗಾ

ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

ಭಾರತೀಯ ಪರಿಸ್ಥಿತಿಗಳಲ್ಲಿ ದರ, ಇಂಧನ ದಕ್ಷತೆ, ವಿನ್ಯಾಸ, ಆರಾಮದಾಯ, ಸುರಕ್ಷತೆ, ನಿರ್ವಹಣೆ, ಪ್ರಾಯೋಗಿಕ ಸಾಧ್ಯತೆ, ತಾಂತ್ರಿಕ ನಾವೀನ್ಯತೆ ಹಾಗೂ ಹೊಂದಾಣಿಕೆಗಳನ್ನು ಪರಿಗಣಿಸಿ ಪ್ರಶಸ್ತಿ ಮಾನದಂಡ ನಿಗದಿಪಡಿಸಲಾಗಿತ್ತು.

ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಒಟ್ಟು 20 ಕಾರುಗಳು 2013 ಪ್ರಶಸ್ತಿಗಾಗಿ ನಾಮ ನಿರ್ದೇಶನಗೊಂಡಿದ್ದವು.

ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

ಇದರಂತೆ ಸ್ಪರ್ಧಾತ್ಮಕ ದರದಲ್ಲಿ ರಸ್ತೆಗಿಳಿದಿರುವ ಯೂನಿಕ್ ವಿನ್ಯಾಸದ ರೆನೊ ಡಸ್ಟರ್ ಪ್ರಶಸ್ತಿಗೆ ಅರ್ಹವಾಗಿದೆ. ಹಾಗೆಯೇ ವಿಶ್ವಾಸಾರ್ಹತೆ, ಇಂಧನ ದಕ್ಷತೆ, ಉತ್ತಮ ಗುಣಮಟ್ಟ ಹಾಗೂ ಹ್ಯಾಂಡ್ಲಿಂಗ್ ವಿಷಯದಲ್ಲಿ ಡಸ್ಟರ್ ವಿಶೇಷವೆನಿಸಿದೆ.

ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

ಅದೇ ರೀತಿ ಬೈಕ್ ವಿಭಾಗದಲ್ಲಿ ಕೆಟಿಎಂ ಡ್ಯೂಕ್ 200 ಆವೃತ್ತಿಗೆ ತಮ್ಮ ಸಮೀಪದ ಸ್ಪರ್ಧಾಳುಗಳಿಂದ ಕಠಿಣ ಪೈಪೋಟಿ ಎದುರಾಗಿತ್ತು.

ಡಸ್ಟರ್-ಡ್ಯೂಕ್‌ಗೆ ವರ್ಷದ ಕಾರು-ಬೈಕ್ ಪ್ರಶಸ್ತಿ

ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಕೆಟಿಎಂ ಡ್ಯೂಕ್ ಭಾರತೀಯ ಪರಿಸ್ಥಿತಿಗೆ ಅನುಯೋಜ್ಯವಾಗಿದೆ. ಇದರ ಆಕ್ರಮಣಕಾರಿ ಆಧುನಿಕ ವಿನ್ಯಾಸ, ಪವರ್‌ಫುಲ್ 200ಸಿಸಿ, 25.5 ಸಿಸಿ ಎಂಜಿನ್ ಎಲ್ಲ ಹಂತದಲ್ಲಿಯೂ ಕ್ಲಾಸ್ ಬೈಕ್ ಎನಿಸಿಕೊಂಡಿದೆ

English summary
The 2013 Indian Car Of The Year and Bike Of The Year have been announced. In a glittering ceremony on Thursday, the Renault Duster SUV was selected as the 2013 Indian Car Of The Year. The KTM Duke 200 has been named as the 2013 Bike Of The Year.
Story first published: Saturday, December 22, 2012, 9:51 [IST]
Please Wait while comments are loading...

Latest Photos