2017 ಫ್ರಾಂಕ್‌ಫ಼ರ್ಟ್ ಮೋಟಾರ್ ಶೋ : ಹೊಸ ರೆನಾಲ್ಟ್ ಡಸ್ಟರ್ ಅನಾವರಣ

Written By:

ನವೀಕರಿಸಿದ ಹೊರಭಾಗ ಮತ್ತು ಒಳಭಾಗದ ವಿನ್ಯಾಸ ಪಡೆದ ಹೊಸ ಡಸ್ಟರ್ ಕಾರನ್ನು ಪ್ರಸಿದ್ಧ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ 2017ರ ಫ್ರಾಂಕ್‌ಫ಼ರ್ಟ್ ಮೋಟಾರ್ ಶೋನಲ್ಲಿ ಪರಿಚಯಿಸಿದೆ.

2017 ಫ್ರಾಂಕ್‌ಫ಼ರ್ಟ್ ಮೋಟಾರ್ ಶೋ : ಹೊಸ ರೆನಾಲ್ಟ್ ಡಸ್ಟರ್ ಅನಾವರಣ

2017ರ ಫ್ರಾಂಕ್‌ಫ಼ರ್ಟ್ ಮೋಟಾರ್ ಶೋನಲ್ಲಿ ರೆನಾಲ್ಟ್(ಡಸಿಯ)ಕಂಪನಿಯು ಹೊಚ್ಚ ಹೊಸ ಡಸ್ಟರ್ ಕಾರನ್ನು ಅನಾವರಣಗೊಳಿಸಿದ್ದು, ಅತಿ ಹೆಚ್ಚು ವಿನ್ಯಾಸ ಬದಲಾಣೆಗಳನ್ನು ಪಡೆದುಕೊಂಡಿರುವ ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

2017 ಫ್ರಾಂಕ್‌ಫ಼ರ್ಟ್ ಮೋಟಾರ್ ಶೋ : ಹೊಸ ರೆನಾಲ್ಟ್ ಡಸ್ಟರ್ ಅನಾವರಣ

ಈ ಹಿಂದೆ ರೆನಾಲ್ಟ್ ಸಂಸ್ಥೆಯು ಹೊಸ ಡಸ್ಟರ್ ಕಾರಿನ ಕೆಲವು ಚಿತ್ರಗಳನ್ನು ಬಹಿರಂಗಪಡಿಸಿತ್ತು, ಆದರೆ ಒಳಾಂಗಣ ವಿನ್ಯಾಸದ ಬಗ್ಗೆ ಸಂಪೂರ್ಣ ಮಾಹಿತಿಯನ್ನು 2017ರ ಫ್ರಾಂಕ್‌ಫ಼ರ್ಟ್ ಮೋಟಾರ್ ಶೋನಲ್ಲಿ ಬಿಡುಗಡೆಗೊಳಿಸಿದೆ.

2017 ಫ್ರಾಂಕ್‌ಫ಼ರ್ಟ್ ಮೋಟಾರ್ ಶೋ : ಹೊಸ ರೆನಾಲ್ಟ್ ಡಸ್ಟರ್ ಅನಾವರಣ

ಇತ್ತೀಚಿನ ಕಾರುಗಳಲ್ಲಿ ಇರುವಂತಹ ನವೀನ ತಂತ್ರಜ್ಞಾನವನ್ನು ಪಡೆದು ಮರುವಿನ್ಯಾಸಗೊಂಡಿರುವ ಈ ಡಸ್ಟರ್ ಕಾರಿನ ಹೊರಭಾಗ ಮತ್ತು ಮುಂಭಾಗವು ಹೆಚ್ಚು ಹೆಚ್ಚು ಸ್ನಾಯುವಿನ ರೀತಿಯ ವಿನ್ಯಾಸ ಪಡೆದುಕೊಂಡಿದೆ.

2017 ಫ್ರಾಂಕ್‌ಫ಼ರ್ಟ್ ಮೋಟಾರ್ ಶೋ : ಹೊಸ ರೆನಾಲ್ಟ್ ಡಸ್ಟರ್ ಅನಾವರಣ

ಈ ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಕಾರು ಹೆಚ್ಚಿನ ಬೆಲ್ಟ್ ಲೈನ್, ಹೊಸ ರೂಫ್ ಹಳಿಗಳು ಮತ್ತು ಪ್ರೊಮಿನೆಂಟ್ ಸಿಲ್ವರ್ ಫ್ರಂಟ್ ಮತ್ತು ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್‌ಗಳನ್ನು ಹೊಂದಿದೆ.

2017 ಫ್ರಾಂಕ್‌ಫ಼ರ್ಟ್ ಮೋಟಾರ್ ಶೋ : ಹೊಸ ರೆನಾಲ್ಟ್ ಡಸ್ಟರ್ ಅನಾವರಣ

ಒಳಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಸೌಕರ್ಯ ನೀಡಲಾಗಿದ್ದು, ಸಂಪೂರ್ಣವಾಗಿ ಹೊಸದಾಗಿ ಅಳವಡಿಸಲಾಗಿರುವ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆ ನಿಮಗೆ ಖುಷಿಪಡಿಸಲಿರುವುದಂತೂ ಖಂಡಿತ.

2017 ಫ್ರಾಂಕ್‌ಫ಼ರ್ಟ್ ಮೋಟಾರ್ ಶೋ : ಹೊಸ ರೆನಾಲ್ಟ್ ಡಸ್ಟರ್ ಅನಾವರಣ

ಹೊಸ ಡಸ್ಟರ್ ಕಾರು ಹೊಸ ಎಲ್ಇಡಿ ಫ್ರಂಟ್ ಲೈಟ್ ಸಿಗ್ನೇಚರ್ ಸೌಲಭ್ಯವನ್ನು ಪಡೆದು ಬಿಡುಗಡೆಗೊಳ್ಳುತ್ತಿದ್ದು, ಈ ಎಲ್ಇಡಿ ಫ್ರಂಟ್ ಲೈಟ್ ಕಾರಿನ ಅಂದ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಬಹುದು.

2017 ಫ್ರಾಂಕ್‌ಫ಼ರ್ಟ್ ಮೋಟಾರ್ ಶೋ : ಹೊಸ ರೆನಾಲ್ಟ್ ಡಸ್ಟರ್ ಅನಾವರಣ

ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಿರುವ ಈ ರೆನಾಲ್ಟ್ ಡಸ್ಟರ್ ಹಿಂದಿನ ಮಾದರಿಯ ಪ್ಲೇಟ್‌ಫಾರಂ ಆಧಾರಿತವಾಗಿದ್ದು, ಎಂದಿನಂತೆ 1.5 ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಅನಾವರಣಗೊಂಡಿದೆ.

English summary
Renault (Dacia) has unveiled the new Duster at the 2017 Frankfurt Motor Show. The updated compact SUV features updates to the exterior and the interior design.
Story first published: Tuesday, September 12, 2017, 17:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark