ಹೊಚ್ಚ ಹೊಸ ರೆನೊಲ್ಟ್ ಡಸ್ಟರ್ 2018 ಕಾರು ಜೂನ್‌ನಲ್ಲಿ ಅನಾವರಣ

Written By:

ನವೀಕರಿಸಿದ ರೆನಾಲ್ಟ್ ಡಸ್ಟರ್ 2018 ಕಾರು ಕೆಲವು ದಿನಗಳ ಹಿಂದೆಯಷ್ಟೇ ಪರೀಕ್ಷಿಸಗಿದ್ದು, ಶೀಘ್ರದಲ್ಲಿಯೇ ತನ್ನ ಚೊಚ್ಚಲ ಪ್ರವೇಶವನ್ನು ಮಾಡಲಿದೆ ಎಂಬ ವರದಿ ಹೊರಬಿದ್ದಿದೆ.

ಹೊಚ್ಚ ಹೊಸ ರೆನೊಲ್ಟ್ ಡಸ್ಟರ್ 2018 ಕಾರು ಜೂನ್‌ನಲ್ಲಿ ಅನಾವರಣ

ನಿಗದಿಪಡಿಸಿದ ಸಮಯಕ್ಕೆ ಈ ಕಾರು ಬಿಡುಗಡೆಗೊಳ್ಳಲಿದೆ ಎನ್ನಲಾಗಿತ್ತು, ಆದರೆ ಈಗ ಬಂದಿರುವ ವಿಚಾರ ಡಸ್ಟರ್ ಪ್ರಿಯರಿಗೆ ಹೆಚ್ಚು ಖುಷಿ ನೀಡಲಿರುವುದಂತೂ ಖಂಡಿತ. ಹೌದು, ಕೆಲವು ತಿಂಗಳುಗಳ ನಂತರ ಅನಾವರಣಗೊಳ್ಳಲಿದೆ ಎನ್ನಲಾಗಿದ್ದ ಈ ಕಾರು ಇದೇ ತಿಂಗಳು ಬಿಡುಗಡೆಗೊಳ್ಳಲಿದೆ.

ಹೊಚ್ಚ ಹೊಸ ರೆನೊಲ್ಟ್ ಡಸ್ಟರ್ 2018 ಕಾರು ಜೂನ್‌ನಲ್ಲಿ ಅನಾವರಣ

ಒಟ್ಟಾರೆ ಸದ್ಯದ ಮಾದರಿಗೆ ಹೋಲುವ ಈ ಕಾರು ಗಮನಾರ್ಹವಾದ ನವೀಕರಣಗಳನ್ನು ಹೊಂದಿರುತ್ತದೆ ಎಂಬ ವಿಚಾರ ಬಲ್ಲ ಮೂಲಗಳನ್ನು ಬಂದಿದೆ.

ಹೊಚ್ಚ ಹೊಸ ರೆನೊಲ್ಟ್ ಡಸ್ಟರ್ 2018 ಕಾರು ಜೂನ್‌ನಲ್ಲಿ ಅನಾವರಣ

ರೆನೊಲ್ಟ್ ಭಾರತದಲ್ಲಿ ಹಳೆಯ ಕಾರಿನ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಳ್ಳುವ ನಿರೀಕ್ಷೆ ಇದ್ದು, ಹೊಸ ಟರ್ಬೊಚಾರ್ಜ್ ಪೆಟ್ರೋಲ್ ಘಟಕವನ್ನು ಈ ಕಾರು ಹೊಂದಿರಲಿದೆ ಎನ್ನಲಾಗಿದೆ.

ಹೊಚ್ಚ ಹೊಸ ರೆನೊಲ್ಟ್ ಡಸ್ಟರ್ 2018 ಕಾರು ಜೂನ್‌ನಲ್ಲಿ ಅನಾವರಣ

ನವೀಕರಣಗೊಳ್ಳಲಿರುವ ಹೊಸ 2018 ರೆನೊಲ್ಟ್ ಡಸ್ಟರ್ ನಿರೀಕ್ಷಿತ ಬದಲಾವಣೆಗಳಾದ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್ಇಡಿ ಹಗಲಿನ ಹೊತ್ತು ಬೆಳಗುವ ದೀಪಗಳು, ನವೀಕರಿಸಿದ ಆಂತರಿಕ ಮತ್ತು ಎಬಿಎಸ್ ಮತ್ತು ಇಬಿಡಿ ಮತ್ತು ಏರ್ ಬ್ಯಾಗ್‌ನಂತಹ ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳನ್ನು ಇರಿಸಲಾಗುತ್ತದೆ.

ಹೊಚ್ಚ ಹೊಸ ರೆನೊಲ್ಟ್ ಡಸ್ಟರ್ 2018 ಕಾರು ಜೂನ್‌ನಲ್ಲಿ ಅನಾವರಣ

ಈ ಕಾಂಪ್ಯಾಕ್ಟ್ ಎಸ್‌ಯುವಿ/ಕ್ರಾಸ್ಒವರ್ ರೆನಾಲ್ಟ್ ಡಸ್ಟರ್ ಕಾರು ತನ್ನ ಸರಿಸಮ ಕಾರುಗಳಿಗೆ ಬಹಳಷ್ಟು ಸ್ಪರ್ಧೆ ನೀಡಲಿದ್ದು, ಮಾರುಕಟ್ಟೆಯನ್ನು ಹೇಗೆ ಬಳಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Read more on ಡಸ್ಟರ್ duster
English summary
the new Renault Duster could be unveiled on June 22 in Paris, ahead of the Frankfurt Motor Show.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark