ಭಾರತೀಯರ ಮನ ಗೆಲ್ಲದ ಹೊಂಡಾ ಸಿವಿಕ್ ಹೈಬ್ರಿಡ್

ಉದಾಹರಣೆಗೆ ಹೊಂಡಾ ಸಿವಿಕ್ ಹೈಬ್ರಿಡ್ ಮಾಡೆಲ್ ಗಮನಿಸಿ. ಈ ಕಾರು ಭಾರತದ ಯಾವ ಹೊಂಡಾ ಶೋ ರೂಂನಲ್ಲೂ ಸಿಗುತ್ತಿಲ್ಲ. ಕೆಲವು ವಾರದ ಹಿಂದೆ ಸಿವಿಕ್ ಹೈಬ್ರಿಡ್ ಮಾಡಲ್ ಮಾರುಕಟ್ಟೆಗೆ ಬಂದಾಗ ಭಾರಿ ಸುದ್ದಿ ಆಗಿತ್ತು. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ವಿದೇಶದಲ್ಲಿ ಭರ್ಜರಿ ಮಾರಾಟ ಆಯಿತು. 10 ದಿವಸಗಳಲ್ಲಿ ಕಾರುಗಳೆಲ್ಲ ಸೋಲ್ಡ್ ಔಟ್. ಕಾರಿನ ಮುಖ ಬೆಲೆಯ ಮೇಲೆ 8 ಲಕ್ಷ ರೂಪಾಯಿ ಬೆಲೆ ಇಳುವರಿ ಮಾರಾಟ ಪ್ರಮುಖ ಆಕರ್ಷಣೆ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಭಾರತದ ಮಾರುಕಟ್ಟೆಗೆ ಈ ಹೈಬ್ರಿಡ್ ಕಾರು ಬಂದಿದ್ದು ಕೇವಲ 350 ಪೀಸುಗಳು. ಭಾರತದಲ್ಲಿ ಬಿಡುಗಡೆ ಆದ ಮೊದಲ ಐದು ತಿಂಗಳ ಅವಧಿಯಲ್ಲಿ ಮಾರಾಟವಾಗಿದ್ದು ಕೇವಲ 60 ಕಾರು. ಸಿವಿಕ್ ಹೈಬ್ರಿಡ್ ಕಾರು ನಿಜಕ್ಕೂ ಒಂದು ಒಳ್ಳೆ ಕಾರು. ಅತ್ಯಾಧುನಿಕ ಹೈಬ್ರಿಡ್ ತಂತ್ರಜ್ಞಾನ, ವಿದ್ಯುತ್ ಮೋಟಾರು ಮತ್ತು ಪೆಟ್ರೋಲ್ ಇಂಜಿನ್ನು. ಎಲ್ಲಕ್ಕಿಂತ ಮುಖ್ಯವಾಗಿ ಲೀಟರ್ ಗೆ 22 ಕಿಮೀ. ಈ ಗಿನ ಕಾಲದಲ್ಲಿ ಯಾವ ಕಾರು ಇಷ್ಟು ಮೈಲೇಜು ಕೊಡತ್ತೆ?
ಕಾಸಿಗೆ ತಕ್ಕಂತೆ ಕಜ್ಜಾಯ. ಇಂಥ ಕಾರಿನ ಬೆಲೆ 21 ಲಕ್ಷ ರೂಪಾಯಿಗಳಾಗಿರುವುದು ಸ್ವಾಭಾವಿಕ. ಈ ಸುದ್ದಿ ಓದಿ ನೀವು ಮರುಳಾಗಿ ಸಿವಿಕ್ ಖರೀದಿಸಲು ಶೋರೂಮಿಗೆ ಹೋಗಬೇಡಿ. ಅಲ್ಲಿ ಕಾರುಗಳ ಸ್ಟಾಕ್ ಇಲ್ಲ. ಈಗ ಬುಕ್ ಮಾಡಿದರೆ 3-4 ತಿಂಗಳು ಕಾಯಬೇಕು. ಕಾರು ಆಮದಾಗಿ ಬರಬೇಕು. ಯೋಚನೆ ಮಾಡಿದರೆ, ಇಂಥ ಕಾರಿಗೆ ಇಂಥ ಗತಿ ಬಂತಲ್ಲ ಎಂದು ಒಂದೊಂದು ಸಲ ಬೇಜಾರಾಗತ್ತೆ. ಭಾರತದ ರಸ್ತೆಗಳು, ಗ್ರಾಹಕನ ಅಭಿರುಚಿ, ಇಂಧನ ಉಳಿಕೆ ಮುಂತಾದ ಲಾಭಗಳನ್ನು ಪರಿಗಣಿಸಿದರೆ ಈ ಕಾರು ಭಾರತದಲ್ಲಿ ಸೂಪರ್ ಡೂಪರ್ ಸಕ್ಸಸ್ ಆಗಬೇಕಿತ್ತು. ಆದರೆ, ಇಂಥ ಕಾರುಗಳಿಗೆ ತೆರಿಗೆ ಕಡಿಮೆ ಮಾಡವ ಯೋಚನೆ ನಮ್ಮ ಸರಕಾರಗಳಿಗಿಲ್ಲ. ಹಾಗೆ ಮಾಡಿದ್ದಿದ್ದರೆ ಪರಿಸರ ಕಾಪಾಡುವ ಜವಾಬ್ದಾರಿ ನಿಟ್ಟಿನಲ್ಲಿ ಇತರೆ ಕಾರು ಉತ್ಪಾದಕ ಕಂಪನಿಗಳಿಗೆ ಲೈಟಾಗಿ ಚುರುಕು ಮುಟ್ಟಿಸಬಹುದಿತ್ತು.


Click it and Unblock the Notifications








