ಪರಿಸರ ಪ್ರೇಮಿ ಇಂಧನ ಸ್ನೇಹಿ ಕಾರುಗಳ ಲಗ್ಗೆ

ವೋಕ್ಸ್ ವ್ಯಾಗನ್ ಬಿಡುಗಡೆ ಮಾಡಿರುವ ಪೋಲೋ ಮಾದರಿ 'ಬ್ಲೂಮೋಷನ್' ಎಂಬ ತಂತ್ರಜ್ಞಾನವನ್ನು ಬಳಸುತ್ತಿದೆ. ಇಂಧನ ಉರಿಯುವ ಪ್ರಕ್ರಿಯೆ ಜರುಗುವಾಗ ಯೂರಿಯಾ ಆಗಾಗ ಇಂಜೆಕ್ಟ್ ಆಗುವುದರಿಂದ ಇಂಧನ ಉಳಿತಾಯವಾಗುತ್ತದೆ. ಡೀಸೆಲ್ ಇಂಜಿನ್ ಇರುವ ಪೋಲೋ 1.6 ಲೀಟರ್ ಟಿಡಿಐ ಪ್ರತಿ ಲೀಟರಿಗೆ 25 ಕಿಮೀ ಓಡುತ್ತದೆ. ಅದೇ, 1.8 ಟಿಎಸ್ಐ ಪೆಟ್ರೋಲ್ ಕಾರು ಲೀಟರಿಗೆ 18 ಕಿಮೀ ನೀಡುತ್ತದೆ. ಪೋಲೋ ಕಾರುಗಳು ಇನ್ನೆರಡು ವರ್ಷಗಳಲ್ಲಿ ಭಾರತದ ಕಾರುಪ್ರಿಯರಿಗೆ ಲಭ್ಯವಾಗಲಿವೆ.
ಡೇಮ್ಲರ್ ಕ್ರಿಸ್ಲರ್ ಕೂಡ ಮೊದಲಿನ ಮಾಡೆಲ್ ಗಿಂತ ಹೆಚ್ಚು ಹಗುರವಿರುವ ಮತ್ತು ಹೆಚ್ಚು ಇಂಧನ ಉಳಿಸುವ ಇ350 ಪರಿಸರ ಪ್ರೇಮಿ ಕಾರನ್ನು ಬಿಡುಗಡೆ ಮಾಡಿದೆ. 205 ಬಿಎಚ್ ಪಿ ಇರುವ ಬ್ಲೂ ಟೆಕ್ ಡೀಸೆಲ್ ಇಂಜಿನ್ ಕಾರು ಪ್ರತಿ ಲೀಟರಿಗೆ 18.8 ಕಿಮೀ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಪರಿಸರ ಕಾಳಜಿಯಲ್ಲಿ ತಾನೇನು ಕಡಿಮೆಯಿಲ್ಲ ಎಂದು ಹೇಳಿಕೊಂಡಿರುವ ಟಾಟಾ ಮೋಟರ್ಸ್ ಟಾಟಾ ಇಂಡಿಕಾ ಇವಿ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದೆ. ಈ ಕಾರು ಪ್ರತಿಬಾರಿ ಚಾರ್ಜ್ ಮಾಡಿದಾಗ 200 ಕಿಮೀ ನೀಡಲಿದೆ ಎಂದು ಟಾಟಾ ತಿಳಿಸಿದೆ. ಕಾರು ತಯಾರಿಕಾ ಕಂಪನಿಗಳ ಒಟ್ಟಾರೆ ಪ್ರಯತ್ನದಿಂದ ವಾಯುಮಾಲಿನ್ಯ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.


Click it and Unblock the Notifications








