ಶೀಘ್ರದಲ್ಲಿ ಕಣ್ಮುಚ್ಚಲಿದೆ ಮಾರುತಿ 800 ಕಾರು

ಮಾರುತಿ-800 ಜತೆಗೆ ಸಂಸ್ಥೆ ತನ್ನ ಮತ್ತೊಂದು ಅತಿ ಹಳೆಯ ಮಾಡೆಲ್ ಬಹುಪಯೋಗಿ ಓಮ್ನಿ ವ್ಯಾನ್ ಉತ್ಪಾದನೆಯನ್ನು ಸಹ ನಿಲ್ಲಿಸಲು ನಿರ್ಧರಿಸಿದೆ. ಆರಂಭದ ಹಂತದಲ್ಲಿ ಮುಂದಿನ ವರ್ಷ ದೇಶದ 11 ನಗರಗಳಲ್ಲಿ ಈ ವಾಹನಗಳ ಪೂರೈಕೆ ನಿಲ್ಲಿಸಲಾಗುವುದು. ಈ ನಗರಗಳಲ್ಲಿ ಭಾರತ್ 6ನೇ ಹಂತದ ಮಾಲಿನ್ಯ (ಯೂರೋ-4 ಮಾಲಿನ್ಯ ನಿಯಮಕ್ಕೆ ಸಮಾನ) ನಿಯಮಗಳನ್ನು ಅಳವಡಿಸಿಕೊಳ್ಳಲಾಗುವ ಕಾರಣ ಇಲ್ಲಿ ಈ ವಾಹನಗಳ ಪೂರೈಕೆ ನಿಲ್ಲಲಿದೆ.
ಯೂರೋ ನಾಲ್ಕರ ಹಂತದ ನಿಯಮಗಳು ಒಮ್ಮೆ ದೇಶವಿಡಿ ಜಾರಿಯಾಗುತ್ತಿದ್ದಂತೆಯೇ (ಇದು, 2005-16ರಲ್ಲಿ ಸಾಧ್ಯವಾಗಬಹುದು) ಮಾರುತಿ-800 ಮತ್ತು ಮಾರುತಿ ಓಮ್ನಿ ಮಾರಾಟಕ್ಕೆ ಯೋಗ್ಯವಲ್ಲದ ವಾಹನಗಳಾಗಿಬಿಡುತ್ತವೆ. ಹಾಗಾಗಿ ಅವನ್ನು ತೆರೆಮರೆಗೆ ಸರಿಸುವುದು ಅನಿವಾರ್ಯವಾಗುತ್ತದೆ ಎಂದು ಮಾರುತಿ ಸುಜುಕಿ ಸಂಸ್ಥೆ ಅಧ್ಯಕ್ಷ ಆರ್ ಸಿ. ಭಾರ್ಗವ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಹೇಗಿದ್ದರೂ ಈ ನಗರಗಳಲ್ಲಿ ಉತ್ತಮ ಮಾದರಿಯ ಕಾರುಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಈ ಕಾರುಗಳ ಮಾರಾಟ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳು ನಮ್ಮ ಸಣ್ಣ ಕಾರುಗಳಿಗೆ ಪ್ರಶಸ್ತ ಮಾರುಕಟ್ಟೆಯಾಗಿವೆ. ಅಲ್ಲಿ ವಾಹನಗಳ ಮಾರಾಟ ಎಂದಿನಂತೆ ಸಾಗಲಿದೆ ಎಂದು ಭಾರ್ಗವ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications








