ಹಮ್ಮರ್ ಕಾರಾಗಿ ಪರಿವರ್ತನೆಗೊಂಡ ಈ ಕಾರು ಯಾವುದು ಗೊತ್ತಾ.?
ದೇಶದಲ್ಲಿ ನಾವು ಬಹುತೇಕವಾಗಿ ಸಂಸ್ಥೆ ಹೊರ ಹಾಕಿದ ವಾಹನಗಳಿಗಿಂತಲೂ ಹೆಚ್ಚಿನದಾಗಿ ಮಾಡಿಫೈ ಆದ ವಾಹನಗಳನ್ನೆ ಕಾಣುತ್ತೇವೆ. ಅದರಲ್ಲಿಯು ಕೇರಳಾದಲ್ಲಂತು ಎಲ್ಲಿ ಕಂಡರಲ್ಲಿ ಮಾಡಿಫೈ ಆದ ವಾಹನಗಳನ್ನು ಕಾಣಬಹುದು. ಇಂದು ನಾವು ಹೇಳಲಿರುವುದು ಕೂಡಾ ಸಾಧಾರಣವಾದ ಮತ್ತು ಗಾತ್ರದಲ್ಲಿ ಚಿಕ್ಕದಾದ ಕಾರು ಹಮ್ಮರ್ ಕಾರಿನ ಹಾಗೆ ಹೇಗೆ ಪರಿವರ್ತನೆಯಾಗಿದೆ ಎಂದು.

ಮಾರುತಿ ಸುಜುಕಿ 800 ಕಾರು ದಶಕಗಳಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಂಡಿದ್ದು, ಇದೀಗ ಸಧ್ಯಕ್ಕೆ ಮಾರಾಟವಾಗುತ್ತಿಲ್ಲ. ಈ ನಿಟ್ತಿನಲ್ಲಿ ಕೆಲವು ಮಾರುತಿ 800 ಕಾರು ಮಾಲೀಕರು ಇದನ್ನು ಉಪಯೋಗಿಸದೆ ಪಕ್ಕಕ್ಕಿಟ್ಟರೆ ಇನ್ನೂ ಕೆಲವರು ಮಾತ್ರ ಇದನ್ನು ಮಾಡಿಫೈ ಮಾಡಿಸಿಕೊಂಡು ಬಳಸುತ್ತಿದ್ದಾರೆ. ಇದರಿಂದಲೇ ನಮಗೆ ಅರಿವಾಗುತ್ತೆ ಎಷ್ಟರ ಮಟ್ಟಿಗೆ ಮಾರುತಿ 800 ಕಾರು ಜನಪ್ರೀಯತೆಯನ್ನು ಪಡೆದುಕೊಂಡಿದೆ ಎಂದು.

ಮಾರುತಿ 800 ಹಮ್ಮರ್ ಆಗಿದ್ದು ಹೀಗೆ...
ರಾಜಸ್ಥಾನದಲ್ಲಿರುವ ಮ್ಯಾಗ್ನೆಟ್ಟೊ 11 ಎಂಬ ಗ್ಯಾರೇಜಿನವರು ಮಾರುತಿ 800 ಕಾರನ್ನು ಈಗಾಗಲೆ ಇನ್ನಿತರೆ ಎಸ್‍ಯುವಿ ಮತ್ತು ಸೆಡಾನ್ ಕಾರುಗಳಂತೆ ಮಾಡಿಫೈ ಮಾಡಲಾಗಿದ್ದು, ಇದೀಗ ಮಾರುತಿ 800 ಕಾರನ್ನು ಮಾದಿಫೈ ಮಾಡಿ ಮೀನಿಯೇಚರ್ ಹಮ್ಮರ್ ಕಾರಿನ ಹಾಗೆ ಬದಲಾಯಿಸಿದ್ದಾರೆ. ಈ ಕಾರಿನ ಮಾರ್ಪಾಡಿನ ಬಗ್ಗೆ ಹೆಚ್ಚು ತಿಳಿಯಲು ಮುಂದಕ್ಕೆ ಓದಿರಿ...
MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಮೊದಲಿಗೆ ಕಾರಿನ ಮುಂಭಾಗದಲ್ಲಿ ಆಫ್ ರೋಡ್ ಮಾದರಿಯಲ್ಲಿ ಹೊಸ ಬಂಪರ್ ಅನ್ನು ನೀಡಿ ಅದನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಇದಕ್ಕೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ ಅನ್ನು ಸಹ ನೀಡಲಾಗಿದೆ. ಮುಂಭಾಗದ ಗ್ರಿಲ್‍ನ ಕೆಳಗೆ ಎಲ್ಇಡಿ ಲೈಟ್ ಅನ್ನು ಸಹ ಬಳಸಲಾಗಿದ್ದು, ಮುಂಭಾಗದಲ್ಲಿ ಆಫ್ ರೋಡಿಂಗ್‍ಗಾಗಿ ಸಂಪೂರ್ಣವಾಗಿ ಸಿದ್ಧಗೊಂಡ ಹಮ್ಮರ್ ಕಾರಿನಂತೆಯೆ ಕಾಣಿಸುತ್ತದೆ.
ಇನ್ನು ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ ಲೈಟ್ ಫ್ರೇಮ್‍ನಿಂದ ಸಜ್ಜುಗೊಳಿಸಿದ ಸ್ಟೀಲ್ ಬಾಗಿಲುಗಳು, ಅಗಲವಾದ ಟೈರ್ ಅನ್ನು ಒದಗಿಸಲಾಗಿದೆ. ಇನ್ನು ಬಹುತೇಕ ಭಾಗಗಳನ್ನು ಸಣ್ಣದಾದ ಟ್ರ್ಯಾಕ್ಟರ್‍ನಿಂದ ಕೆಲ ಉಪಕರಣಗಳನ್ನು ಸಹ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಹಿಂಭಾಗದಲ್ಲಿಯು ಸಹ ಹೊಸ ಬಂಪರ್, ಹೊಸ ಟೈಲ್ ಲೈಟ್ಸ್ ಮತ್ತು ಇಂಡಿಕೇಟರ್ ಅನ್ನು ಒದಗಿಸಲಾಗಿದೆ.
MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಕಾರಿನ ಒಳಭಾಗದಲ್ಲಿರುವ ಡ್ಯಾಶ್‍ಬೋರ್ಡ್ ಅನ್ನು ಸಹ ಸಿಲ್ವರ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಮುಂಭಾಗದಲ್ಲಿರುವ ಸೀಟ್‍ಗಳನ್ನು ಮಾತ್ರ ಮರುವಿನ್ಯಾಸ ಮಾಡಲಾಗಿದೆ ಮತ್ತು ಹಿಂಭಾಗದ ಸೀಟ್‍ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಹಾಗೆಯೆ ಸೀಟ್‍ಗಳನ್ನು ಮೃದುವಾದ ಲೆಧರ್‍ನಿಂದ ಸಜ್ಜುಗೊಳಿಸಲಾಗಿದೆ. ಒಟ್ಟಾರೆಯಾಗಿ ಮಾರುತಿ 800 ಕಾರನ್ನು ಸಂಪೂರ್ಣವಾಗಿ ಹಮ್ಮರ್ ಕಾರಿನಂತೆ ಕಾಣಲು ಗ್ಯಾರೇಜಿನವರಿಗೆ ಸುಮಾರು 1.5 ರಿಂದ 1.8 ಲಕ್ಷ ವೆಚ್ಚವಾಗಿದೆ ಎಂದು ಹೆಳಿಕೊಂಡಿದ್ದಾರೆ.
Source: MAGNETO 11


Click it and Unblock the Notifications








