ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಈಗಿನ ಕಾಲದಲ್ಲಿ ಒಂದು ಸ್ವಂತ ಕಾರು ಖರೀದಿ ಮಾಡುವುದು ಅಷ್ಟು ಕಷ್ಟಕರವಾದ ಕೆಲಸವೇನಲ್ಲ. ಏಕೆಂದರೆ ಈಗ ಮಾರುಕಟ್ಟೆಯಲ್ಲಿ ರೂ. 2.50 ಲಕ್ಷದಿಂದಲೆ ಕಾರುಗಳು ಖರೀದಿಗೆ ಲಭ್ಯವಿದ್ದು, ಕಾರುಗಳ ವೈಶಿಷ್ಟ್ಯತೆಗಳ ಆಧಾರಗಳ ಮೇಲೆ ಕಾರುಗಳು ಖರೀದಿಗೆ ಲಭ್ಯವಿದೆ.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಆದರೆ ಈ ಹಿಂದೆ ಕಾರು ಖರೀದಿ ಮಾಡುವುದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ಏಕೆಂದರೆ ಹಿಂದಿನ ಕಾಲದಲ್ಲಿ ಕಾರು ಖರೀದಿ ಮಾಡಬೇಕಿದ್ದರೆ ಹಣ ಕೂಡಿಡಬೇಕಾಗಿದ್ದು, ಇನ್ನು ದೇಶದಲ್ಲಿ ಉತ್ತಮವಾದ ಹೆಚ್ಚಿನ ಸುರಕ್ಷಾ ಸಾಧನಗಳುಳ್ಳ ಕಾರುಗಳು ಇಲ್ಲವಾದ ಕಾರಣ ಇದ್ದ ಕಡಿಮೆ ಬೆಲೆಯಲ್ಲಿ ದೊರೆಯುವ ಕಾರುಗಳನ್ನು ಖರೀದಿ ಮಾಡಬೇಕಾಗಿತ್ತು.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಅದರಲ್ಲಿಯು 1970 ಮತ್ತು 80ರ ದಶಕದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಕಾಲಿಟ್ತಿತ್ತು. ಹಲವರು ಮಾರುತಿ ಸುಜುಕಿ ಕಾರುಗಳನ್ನೆ ತಮ್ಮ ಮೊದಲ ಕಾರುಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಮತ್ತು ಆ ಮೊದಲ ಕಾರಿನಲ್ಲಿ ಸುತ್ತಾಡಿದ ಒಂದೆರಡೂ ರೈಡ್‍ಗಳು ಕೂಡ ಹಲವರಿಗೆ ಇನ್ನು ಮರೆಯಲಾಗದ ನೆನಪಾಗಿ ಉಳಿದಿರುತ್ತದೆ.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಮಾರುತಿ ಸುಜುಕಿ ಸಂಸ್ಥೆಯು ಭಾರತದಲ್ಲಿ ಅಂಬಾಸಿಡರ್ ಮತ್ತು ಫಿಯೆಟ್ ಕಾರುಗಳು ಶುರುವಾದ ಸಮಯದಲ್ಲೆ ಕಾಲಿಟ್ಟಿದ್ದು, ನಂತರ ಹೆಚ್ಚಿನ ಮಾರಾಟದ ಶ್ರೇಣಿ ಇಂದ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿತು.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಮಾರುತಿ ಸುಜುಕಿ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಮೊದನಲೆಯ ಕಾರಾಗಿ ಮಾರುತಿ 800 ಹ್ಯಾಚ್‍ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ದಿನ ಕಳೆದಂತೆ ಆಲ್ಟೋ 800, ವ್ಯಾಗನ್ ಆರ್, ಸ್ವಿಫ್ಟ್, ಡಿಜೈರ್, ಬಲೆನೊ, ಸಿಯಾಜ್ ಮತ್ತು ಬ್ರೆಝಾ ಕಾರುಗಳನ್ನು ಬಿಡುಗಡೆಗೊಳಿಸಿ ಬೆಸ್ಟ್ ಸೆಲ್ಲಿಂಗ್ ಕಾರು ಕಂಪೆನಿ ಎಂಬ ಬಿರುದನ್ನು ಪಡೆದುಕೊಂಡಿದೆ.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಕೆಲವು ದಿನಗಳ ಹಿಂದಷ್ಟೆ ಮಾರುತಿ ಸುಜುಕಿ ಸಂಸ್ಥೆಯು ಮಾರುಕಟ್ಟೆಗೆ ಕಾಲಿಟ್ಟು 35 ವರ್ಷ ಆದ ಸಂಭ್ರಮದಲ್ಲಿ ಮುಂಬೈ ನಗರದಲ್ಲಿನ ಫೋರ್ಟ್‍‍ಪಾಯಿಂಟ್ ಆಟೋಮೋಟಿವ್ ಮಾರುತಿ ಡೀಲರ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಮಾರುತಿ ಕ್ಲಾಸಿಕ್ ಡೇ' ಕಾರ್ಯಕ್ರಮವು ಹಲವು ವಿಶೇಷತೆಗಳಿಗೆ ಕಾರಣವಾಯಿತು.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಜನಪ್ರಿಯ ಕಾರುಗಳಾದ ಮೊದಲನೆಯ ತಲೆಮಾರಿನ ಮಾರುತಿ 800, ಮಾರುತಿ ವ್ಯಾನ್ ಮತ್ತು ಮಾರುತಿ ಜಿಪ್ಸಿ ಕಾರುಗಳನ್ನು ನೋಡಲು ಸಾವಿರಾರು ಜನ ಸೇರಿದ್ದರಲ್ಲದೇ, ಹಳೆ ಕಾರುಗಳಿಂದ ನಡೆದ ಸ್ಪೆಷಲ್ ಡ್ರೈವ್ ಹೊಸ ಅನುಭವಕ್ಕೆ ಕಾರಣವಾಗಿತ್ತು.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಕಾರುಗಳನ್ನ ಪರಿಚಯಿಸಿ ಯಶಸ್ವಿಯಾದ ಮಾರುತಿ ಉದ್ಯೋಗ್ ಸಂಸ್ಥೆಯು ಕಾಲಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇಂದಿಗೂ ಭಾರತದಲ್ಲಿ ನಂಬರ್1 ಕಾರು ಮಾರಾಟ ಸಂಸ್ಥೆಯಾಗಿ ಮುಂದುವರೆದಿದೆ.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಆದರೆ ಸಧ್ಯದ ಆಟೋಮೊಬೈಲ್ ಜಗತ್ತಿನಲ್ಲಿ ಹಲವಾರು ಬದಲಾವಣೆಗಳು ಆಗುತ್ತಿದ್ದು, ಒಂದು ಕಾಲದಲ್ಲಿ ಕಾರುಪ್ರಿಯರ ಹಾಟ್ ಫೇವರಿಟ್ ಆಗಿದ್ದ ಜಿಪ್ಸಿ, ಮರುತಿ 800 ಮತ್ತು ಮಾರುತಿ ಓಮ್ನಿ ಕಾರುಗಳು ಮುಂದಿನ ಕೆಲವೆ ದಿನಗಳಲ್ಲಿ ಮಾರುಕಟ್ಟೆಯಿಂದ ನಿರ್ಗಮಿಸುವ ಪರಿಸ್ಥಿತಿ ಎದುರಾಗಿದೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಮಾರುತಿ ಸುಜುಕಿ ಸಂಸ್ಥೆಯು ತನ್ನ ವಾಹನ ಉತ್ಪಾದನೆಯಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಮುಂಬರುವ 2019ರಿಂದ ಕಡ್ಡಾಯವಾಗಲಿರುವ ಬಿಎಸ್ 6 ನಿಯಮ ಅನುಸಾರವಾಗಿ ಕಾರುಗಳ ಎಂಜಿನ್ ಮಾದರಿಯನ್ನು ಪರಿಷ್ಕರಣೆ ಮಾಡಬೇಕಿದೆ. ಹೀಗಿರುವಾಗ ಅಗ್ಗದ ಬೆಲೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿಯ ಬಹುಪಾಲು ಕಾರು ಉತ್ಪನ್ನ ಮಾರಾಟಕ್ಕೆ ಸಂಕಷ್ಟ ಎದುರಾಗಿದೆ.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ದೇಶಿಯ ಮಾರುಕಟ್ಟೆಯಲ್ಲಿ ಈ ಹಿಂದೆ 1983ರಲ್ಲಿ ಬಿಡುಗಡೆಗೊಂಡಿದ್ದ ಆಲ್ಟೋ 800 ಕಾರುಗಳು ಭಾರೀ ಜನಪ್ರಿಯತೆಯೊಂದಿಗೆ ಆಟೋ ಉದ್ಯಮದಲ್ಲಿ ಇಂದಿಗೂ ಬೇಡಿಕೆಯ ಕಾರು ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದು, ಇತ್ತೀಚೆಗೆ ಆಟೋ ಉದ್ಯಮದಲ್ಲಿ ಬದಲಾಗುತ್ತಿರುವ ಪ್ರಮುಖ ಬೆಳವಣಿಗೆಯಿಂದಾಗಿ ಓಮ್ನಿ, ಜಿಪ್ಸಿ ಮತ್ತು ಆಲ್ಟೋ 800 ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಕುತ್ತು ಬಂದಿದೆ.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ದೇಶದಲ್ಲಿ ಪ್ರಯಾಣಿಕ ಸುರಕ್ಷತೆಯ ಉದ್ದೇಶದಿಂದ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಮಾರುತಿ ಸುಜುಕಿ ನಿರ್ಮಾಣದ ಪ್ರಮುಖ ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಆದ್ರೆ ಕಾರುಗಳಲ್ಲಿನ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಮಾರುತಿ ಸುಜುಕಿ ಸಂಸ್ಥೆಗೆ ಇದೀಗ ಹಿನ್ನೆಡೆಯಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಜನಪ್ರಿಯ ಕಾರುಗಳೇ ರೇಟಿಂಗ್‌ನಲ್ಲಿ ಸೊನ್ನೆ ಸುತ್ತಿವೆ ಎಂದ್ರೆ ನೀವು ನಂಬಲೇಬೇಕು.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಇಷ್ಟೆ ಅಲ್ಲದೆ ಮಾರುತಿ ಸುಜುಕಿ ಸಂಸ್ಥೆಯು ಇದೇ ವರ್ಷ ಇದೇ ಡಿಸೆಂಬರ್‍‍ನಿಂದ ಜಿಪ್ಸಿ ಕಾರುಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಬಂದ್ ಮಾಡಲು ನಿರ್ಧರಿಸಲಾಗಿದ್ದು, 2019ರ ಮಾರ್ಚ್ ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಉತ್ಪಾದನಾ ಚಟುವಟಿಕೆಯನ್ನು ನಿಲ್ಲಿಸುವುದಾಗಿ ಖಚಿತಪಡಿಸಿದೆ.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಕಳೆದ ತಿಂಗಳು ಹಿಂದಷ್ಟೆ ನಡೆದಿದ್ದ ಮಾರುತಿ ಸುಜುಕಿ ನಿರ್ಮಾಣದ 15 ಪ್ರಮುಖ ಕಾರುಗಳು ಈ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹತ್ತಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷತೆ ಇಲ್ಲದಿರುವುದು ಖರೀದಿಗೆ ಯೋಗ್ಯವಲ್ಲದ ಎಂಬುವುದು ಸಾಬೀತಾಗಿದೆ.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಕಾರುಗಳು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 4, 3, 2, 1, 0 ಸ್ಟಾರ್ ರೇಟಿಂಗ್ ಬಂದಲ್ಲಿ ಅನುಕ್ರಮವಾಗಿ ಉತ್ತಮ, ಖರೀದಿಗೆ ಯೋಗ್ಯ, ಸಾಧರಣ, ಅಸುರಕ್ಷಿತ ಕಾರು ಮಾದರಿ ಎಂದು ಕರೆಯಲಾಗುತ್ತದೆ.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಇದರಲ್ಲಿ ಮಾರುತಿ ಸುಜುಕಿ ನಿರ್ಮಾಣದ ಸೆಲೆರಿಯೊ, ಇಗ್ನಿಸ್, ಸ್ವಿಫ್ಟ್, ಡಿಜೈರ್, ಎರ್ಟಿಗಾ, ಬಲೆನೊ, ವಿಟಾರಾ ಬ್ರೆಝಾ, ಸಿಯಾಜ್ ಮತ್ತು ಎಸ್-ಕ್ರಾಸ್ ಕಾರುಗಳು ಮಾತ್ರವೇ ಉತ್ತಮವಾದ ಸುರಕ್ಷಾ ರೇಟಿಂಗ್ ಪಡೆದುಕೊಂಡಿದ್ದು, ಇನ್ನುಳಿದ ಆಲ್ಟೊ, ವ್ಯಾಗನ್ ಆರ್, ಒಮ್ನಿ, ಇಕೊ, ಜಿಪ್ಸಿ ಮತ್ತು ರಫ್ತು ಮಾದರಿಯಾದ ಜಿಮ್ನಿ ಕಾರು ರೇಟಿಂಗ್ ಪಾಯಿಂಟ್‌ನಲ್ಲಿ ಸೊನ್ನೆ ಪಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿವೆ.

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ವಾಸ್ತಾವವಾಗಿ ಸೊನ್ನೆ ರೇಟಿಂಗ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಲು ವಿದೇಶಿ ಮಾರುಕಟ್ಟೆಗಳಲ್ಲಿ ಅನುಮತಿಯೇ ಇಲ್ಲದಿರುವ ಸಂದರ್ಭದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಆಲ್ಟೊ, ವ್ಯಾಗನ್ ಆರ್, ಓಮ್ನಿ ಮತ್ತು ಜಿಪ್ಸಿ ಕಾರುಗಳನ್ನ ಹಾಟ್ ಚಿಪ್ಸ್‌ನಂತೆ ಮಾರಾಟ ಮಾಡುತ್ತಿರುವುದು ಕಳವಳಕಾರಿ ಸಂಗತಿ ಅಂದ್ರೆ ತಪ್ಪಾಗುದಿಲ್ಲ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಗುಡ್ ಬೈ ಹೇಳಲಿರುವ ಮಾರುತಿ ಕಾರುಗಳಿಗೆ ಹೀಗೊಂದು ಸ್ಪೆಷಲ್ ಡ್ರೈವ್

ಕನಿಷ್ಠ ಮಟ್ಟದ ಸುರಕ್ಷೆತೆಯನ್ನು ನೀಡಲು ಹಿಂದೆ ಮುಂದೆ ನೋಡುವ ಮಾರುತಿ ಸುಜುಕಿಗೆ ಇದೀಗ ಸಂಕಷ್ಟ ಎದುರಾಗಿದ್ದು, 2019ರಿಂದ ಜಾರಿಗೆ ಬರಲಿರುವ ಹೊಸ ಕಾಯ್ದೆಯಿಂದ ಸೊನ್ನೆ ರೇಟಿಂಗ್ ಪಡೆದಿರುವ ಕಾರುಗಳು ಮೂಲೆಗುಂಪಾಬೇಕಾದ ಅನಿವಾರ್ಯತೆಗಳಿವೆ.

Most Read Articles

Kannada
English summary
Maruti Gypsy, 800, Omni first gen owners celebrate 35 years of Maruti. Read In Kannada
Story first published: Wednesday, December 19, 2018, 16:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more