ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ದೇಶದ ಪ್ರಮುಖ ನಗರಗಳಲ್ಲಿನ ಟ್ಯಾಕ್ಸಿ ಮತ್ತು ಸಾರ್ವಜನಿಕ ಸೇವೆಯ ವಾಹಗಳಲ್ಲಿ ಪ್ರಯಾಣಿಸುವವರ ಸುರಕ್ಷತೆಯ ಅನುಸಾರವಾಗಿ ಕೆಂದ್ರ ಸರ್ಕಾರವು ಹೊಸ ನಿಯಮವನ್ನು ಜಾರಿ ಮಾಡಲಿದ್ದು, 2019 ಜನವರಿ 1 ರಿಂದ ಈ ನಿಯಮಗಳು ಜಾರಿಯಾಗಲಿದೆ. ಹಾಗಾದರೆ ಆ ನಿಯಮವೇನು ಮತ್ತು ಅದರಿಂದಾಗುವ ಉಪಯೋಗವನ್ನು ತಿಳಿಯಲು ಮುಂದಕ್ಕೆ ಓದಿರಿ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಜನವರಿ 1, 2019 ರಿಂದ ನೋಂದಣಿಯಾಗುವ ಎಲ್ಲ ಸಾರ್ವಜನಿಕ ಸೇವೆ ವಾಹನಗಳಲ್ಲಿ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ ಮತ್ತು ಪ್ಯಾನಿಕ್‌ ಬಟನ್‌ ಕಡ್ಡಾಯವಾಗಿ ಅಳವಡಿಸಬೇಕು ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಆದೇಶಿಸಲಾಗಿದ್ದು, ಈ ಕುರಿತು ಎಲ್ಲ ರಾಜ್ಯಗಳ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಾರಿಗೆ ಆಯುಕ್ತರುಗಳಿಗೆ ಸುತ್ತೋಲೆ ಕಳುಹಿಸಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಈ ವರ್ಷದ ಜುಲೈನಲ್ಲಿ ಸೆಂಟ್ರಲ್ ಮೋಟರ್ ವಾಹನಗಳ ನಿಯಮಕ್ಕೆ ಡ್ರಾಫ್ಟ್ ತಿದ್ದುಪಡಿಗಳನ್ನು ಗಮನಿಸಿದ ನಂತರ ಸಾರಿಗೆ ಇಲಾಖೆಯು ರಾಷ್ಟ್ರೀಯ ಪರವಾನಗಿಗಳನ್ನು ಪಡೆಯುವ ಎಲ್ಲಾ ವಾಣಿಜ್ಯ ವಾಹನಗಳಿಗೆ ಫಾಸ್ಟ್ ಟ್ಯಾಗ್‍ಗಳು ಮತ್ತು ವಾಹನ ಟ್ರ್ಯಾಕಿಂಗ್ ಸಿಸ್ಟಮ್ ಸಾಧನಗಳನ್ನು ಕಡ್ಡಾಯವಾಗಿ ಮಾಡಿತ್ತು.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ವಿ. ಸೂ: ಪಬ್ಲಿಕ್ ಸರ್ವೀಸ್ ವಾಹನಗಳಲ್ಲಿ (ವೆಹಿಕಲ್ ಪ್ಲೇಸ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್ಜೆನ್ಸಿ ಬಟನ್) ಆರ್ಡರ್, 2018 ಸೆಂಟ್ರಲ್ ಮೋಟಾರ್ ವೆಹಿಕಲ್ಸ್ ರೂಲ್ಸ್, 1989 ರ ಅಡಿಯಲ್ಲಿ ಸೂಚಿಸಲಾದ ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಿಗೆ ಅನ್ವಯಿಸುತ್ತದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಡಿ.31 2018 ಕ್ಕಿಂತಾ ಹಿಂದೆ ನೋಂದಣಿಯಾದ ಪಬ್ಲಿಕ್‌ ಸರ್ವೀಸ್ ವಾಹನಗಳಿಗೆ ವಿಎಲ್‌ಟಿ ಡಿವೈಸ್‌ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆಯಿಂದ ವಿನಾಯಿತಿ ನೀಡಲಾಗಿದೆ. 2019 ಜ.1ರಿಂದ ನೋಂದಣಿಯಾಗುವ ಎಲ್ಲ ಪಬ್ಲಿಕ್‌ ಸರ್ವೀಸ್ ವಾಹನಗಳಲ್ಲಿ ಈ ಉಪಕರಣಗಳ ಅಳವಡಿಕೆ ಕಡ್ಡಾಯ ಎಂದು ಸೂಚಿಸಲಾಗಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಸಂಚಾರದ ವೇಳೆ ವಾಹನಗಳ ಮೇಲೆ ನಿಗಾ ಇಡಲು ಆಯಾ ರಾಜ್ಯಗಳು ತಮ್ಮದೇ ಕಂಟ್ರೋಲ್‌ ರೂಂ ಸ್ಥಾಪಿಸಬೇಕಾಗಿದ್ದು, ವಿಳಂಬವಾದರೆ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ ಉತ್ಪಾದಕರ ಸೇವೆ ಪಡೆಯಬಹುದು ಎನ್ನಲಾಗಿದೆ.

MOST READ: ಚಾಲಕ ಮಿತ್ರರೇ ಇತ್ತ ಗಮನಿಸಿ, ಜನವರಿ 1, 2019 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್..!!

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಈ ನಿಯಮವನ್ನು ಜನವರಿ 1, 2019ರ ನಂತರ ನೋದಣಿಯಾಗುವ ವಾಹನಗಳಿಗೆ ಇದು ಕಡ್ಡಾಯವಾಗಿದ್ದು, ಡಿಸೆಂಬರ್ 31, 2018 ರವರೆಗೆ ನೋಂದಣಿಯಾಗುವ ಹೊಸ ವಾಹನಗಳಿಗೂ ಈ ಆದೇಶ ಕಡ್ಡಾಯಗೊಳಿಸುವ ಸಂಬಂಧ ಆಯಾ ರಾಜ್ಯ ಸರ್ಕಾರಗಳೇ ನಿರ್ಧಾರ ಕೈಗೊಳ್ಳಬಹುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ದೆಹಲಿಯ ನಿರ್ಭಯಾ ಪ್ರಕರಣ ನಂತರ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ 23 ಆಸನಕ್ಕಿಂತ ಅಧಿಕ ಆಸನ ಸಾಮರ್ಥ್ಯ ಇರುವ ಬಸ್‌ಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಕಡ್ಡಾಯಗೊಳಿಸಿತ್ತು.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

2016-17ಸಾಲಿನಲ್ಲಿ ಆದೇಶವೊಂದನ್ನು ಹೊರಡಿಸಿದ್ದ ಕೇಂದ್ರ ಸರ್ಕಾರ 2018 ಏ.1ರಿಂದ ದೇಶಾದ್ಯಂತ ಆಟೋ ಹೊರತುಪಡಿಸಿ ಉಳಿದ ಎಲ್ಲ ಪ್ಯಾಸೆಂಜರ್‌ ವಾಹನಗಳಿಗೆ ವೆಹಿಕಲ್‌ ಟ್ರ್ಯಾಕಿಂಗ್‌ ಡಿವೈಸ್‌ (ವಿಟಿಯು ಅಥವಾ ಜಿಪಿಎಸ್‌) ಮತ್ತು ಪ್ಯಾನಿಕ್‌ ಬಟನ್‌ ಕಡ್ಡಾಯಗೊಳಿಸಿತ್ತು. ಆದರೆ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕಮಾಂಡ್‌ ಮತ್ತು ಕಂಟ್ರೋಲ್‌ ಕೇಂದ್ರಗಳು ಇಲ್ಲದ ಪರಿಣಾಮ ಈ ಆದೇಶ 2019 ಏಪ್ರಿಲ್‌ 1ಕ್ಕೆ ಮುಂದೂಡಲಾಗಿತ್ತು.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಈ ನಡುವೆ ಕೇಂದ್ರ ಸರ್ಕಾರ, ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ ಉತ್ಪಾದಕರೊಂದಿಗೆ ನಡೆದ ಸಭೆಯಲ್ಲಿ ರಾಜ್ಯಗಳಲ್ಲಿ ಕಂಟ್ರೋಲ್‌ ರೂಂ ಸ್ಥಾಪನೆಗೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಉಪಯೋಗ ಏನು?

ವಾಹನಗಳಲ್ಲಿ ಜಿಪಿಎಸ್‌ ಅಥವಾ ವಿಎಲ್‌ಟಿ ಡಿವೈಸ್‌ ಅಳವಡಿಕೆಯಿಂದ ಆ ವಾಹನದ ಸಂಚಾರದ ಮಾಹಿತಿ, ರಹದಾರಿ ನಿಯಮ ಉಲ್ಲಂಘಿಸುತ್ತಿರುವ ವಾಹನಗಳ ಪತ್ತೆ ಸುಲಭವಾಗಲಿದೆ. ಪ್ಯಾನಿಕ್‌ ಬಟನ್‌ ಅಳವಡಿಕೆಯಿಂದ ಪ್ರಯಾಣಿಕರ ಸುರಕ್ಷತೆ ಸಾಧ್ಯವಾಗುತ್ತದೆ.

MOST READ: ವಾಹನ ಮಾಲೀಕರೇ ಇತ್ತ ಗಮನಿಸಿ - ನಂಬರ್ ಪ್ಲೇಟ್‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ?

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಉದಾಹರಣೆಗೆ ಪ್ರಯಾಣದ ವೇಳೆ ಪ್ಯಾನಿಕ್‌ ಬಟನ್‌ ಒತ್ತಿದರೆ, ಯಾವ ವಾಹನದಲ್ಲಿ ಬಟನ್‌ ಒತ್ತಲಾಗಿದೆ. ಆ ವಾಹನ ಯಾವ ಮಾರ್ಗದಲ್ಲಿ ಸಂಚರಿಸುತ್ತಿದೆ ಎಂಬ ವಿವರ ಕಂಟ್ರೋಲ್‌ ರೂಂನಲ್ಲಿ ಲಭ್ಯವಾಗಲಿದೆ. ಈ ವೇಳೆ ತಕ್ಷಣ ನೆರವಿಗೆ ಧಾವಿಸಬಹುದು.

Source: hindustantimes

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಆಟೋ ಚಾಲಕರೇ ಇತ್ತ ಗಮನಿಸಿ..!

ದೇಶದಲ್ಲಿ ದಿನಂಪ್ರತಿ ಹತ್ತಾರು ಭೀಕರ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಬಹುತೇಕ ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳು ಇಲ್ಲದ ಹಿನ್ನೆಲೆಯಲ್ಲಿ ಅಪಘಾತದ ತೀವ್ರತೆ ಹೆಚ್ಚುತ್ತಿದ್ದು, ವಾಹನ ಚಾಲನೆ ವೇಳೆ ಮಾಡುವ ಸಣ್ಣಪುಟ್ಟ ಚಾಲನಾ ದೋಷಗಳೇ ದುರಂತಗಳಿಗೆ ಪ್ರಮುಖ ಕಾರಣವಾಗುತ್ತಿವೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

2017ರಲ್ಲಿ ಸುಮಾರು 1.50 ಲಕ್ಷ ಭೀಕರ ರಸ್ತೆ ಅಪಘತಾತಗಳು ಸಂಭವಿಸಿದ್ದು, ಅವುಗಳಲ್ಲಿ 29,351 ಆಟೋ ರಿಕ್ಷಾಗಳು ಅಪಘಾತಾಕ್ಕೆ ಈಡಾಗಿದೆ. ನಡೆದ ಅಷ್ಟು ಅಪಘಾತಗಳ ಪೈಕಿ ಸುಮಾರು 6,762 ಮಂದಿ ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಇಲಾಖೆಯು ಶೀಘ್ರದಲ್ಲೆ ದೇಶದಲ್ಲಿನ ಆಟೋ ಚಾಲಕರಿಗೆ ಶಾಕಿಂಗ್ ವಿಚಾರವನ್ನು ನೀಡಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಹೌದು, 2019ರ ಅಕ್ಟೋಬರ್ ತಿಂಗಳ ಪ್ರಾರಂಭದಿಂದ ದೇಶದಲ್ಲಿರುವ ಎಲ್ಲಾ ಆಟೋ ರಿಕ್ಷಾಗಳು ಕೆಲವು ಕಡ್ಡಾಯ ಸುರಕ್ಷಾ ಸಾಧನಗಳನ್ನು ಹೊಂದಿರಬೇಕಾಗಿದ್ದು, ಈ ನಿಟ್ಟಿನಲ್ಲಿ ಆಟೋ ರಿಕ್ಷಾ ತಯಾರಕ ಸಂಸ್ಥಗಳು ತಾವು ಉತ್ಪಾದಿಸುವ ಆಟೋ ರಿಕ್ಷಾಗಳಲ್ಲಿ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಉಪಕರಣಗಳನ್ನು ಅಳವಡಿಸಬೇಕಾಗಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ರಸ್ತೆ ಸಾರಿಗೆ ಇಲಾಖೆಯ ಪ್ರಕಾರ 2019ರ ಅಕ್ಟೊಬರ್ ತಿಂಗಳಿನಿಂದ ರಸ್ತೆಯಲ್ಲಿ ಸಂಚರಿಸುವ ಪ್ರತಿ ಆಟೋ ಮಾದರಿಗಳು ಬಾಗಿಲುಗಳು ಅಥವಾ ಪ್ರಯಾಣಿಕರು ನಿಯಂತ್ರಣ ತಪ್ಪಿ ಕೆಳಗೆ ಬೀಳದಿರುವ ಹಾಗೆ ಸಲಕರಣೆಗಳನ್ನು ಪಡೆದುಕೊಂಡಿರಬೇಕಿದ್ದು, ಅಟೋ ರಿಕ್ಷಾ ಚಾಲಕರು ಸೀಟ್‍ಬೆಲ್ಟ್ ಅನ್ನು ಸಹ ಧರಿಸಬೇಕಾಗಿರುತ್ತದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಸೀಟ್ ಬೆಲ್ಡ್ ಕಡ್ದಾಯವಲ್ಲದೇ ಡ್ರೈವರ್ ಸೀಟ್ ಮತ್ತು ಪ್ರಯಾಣಿಕರ ಸೀಟ್ ಉದ್ದಳತೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಇದಕ್ಕೆ ಕಾರಣ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಟ್ಯಾಕ್ಸಿಗಳು ಬಂದರೂ ಬಹುತೇಕರು ಆಟೋ ರಿಕ್ಷಾಗಳನ್ನು ಆಯ್ಕೆ ಮಾಡುತ್ತಿರುವುದರಿಂದ ಸುರಕ್ಷೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಹೊಸ ಆಟೋ ರಿಕ್ಷಾಗಳು ಚಾಲಕ ಮತ್ತು ಪ್ರಯಾಣಿಕರು ಕೂರವ ಜಾಗದಲ್ಲಿ ವಿಶಾಲವಾದ ಲೆಗ್‍ರೂಂ'ಗೆ ಸರಿಹೊಂದುವ ಜಾಗವನ್ನು ನೀಡಬೇಕಾಗಿದೆ. ಇದರ ಜೊತೆಗೆ ವಿಶೇಷವಾದ ಹೆಡ್‍ಲ್ಯಾಂಪ್‍ಗಳನ್ನು ಸಹ ನೀಡಬೇಕಿದ್ದು, ಪ್ರಸ್ತುತ ಸಿಂಗಲ್ ಯೂನಿಟ್ ಅನ್ನು ಬಳಸುತ್ತಿರುವ ಜಾಗದಲ್ಲಿ ಎರಡು ಹೆಡ್‍ಲ್ಯಾಂಪ್‍ಗಳನ್ನು ಅಳವಡಿಸಬೇಕಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಭಾರತದ ಪ್ರಮುಖ ನಗರ ಪ್ರದೇಶಗಳಲ್ಲಿ ಕೊನೆಯ ಮೈಲಿ ಸಂಪರ್ಕಕ್ಕೆ ಆಟೋ ರಿಕ್ಷಾಗಳು ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದ್ದು, ಆಟೋ ರಿಕ್ಷಾಗಳು ಅನುಕೂಲಕರ ಮತ್ತು ಆರ್ಥಿಕವಾಗಿರುತ್ತವೆಯಾದರೂ ಈಗಾಗಲೇ ಅದರ ಸುರಕ್ಷತೆಯ ಮೇಲೆ ಲೆಕ್ಕವಿಲ್ಲದಷ್ಟು ಚರ್ಚೆಗಳು ನಡೆದಿವೆ. ಆಟೋ ರಿಕ್ಷಾಗಳ ಮಾರಾಟವು ವರ್ಷಕ್ಕೆ 5-6 ಲಕ್ಷಗಳ ನಡುವೆ ನಿಲ್ಲುತ್ತಿದ್ದು, ಬಜಾಜ್ ಆಟೋ ಆಟೋ ರಿಕ್ಷಾ ವಿಭಾಗದಲ್ಲಿ ಪ್ರಮುಖ ಪಾಲು ಹೊಂದಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ದೇಶದಲ್ಲಿನ ಹಲವಾರು ಪ್ರಮುಖ ನಗರಗಳಲ್ಲಿ ಅದೆಷ್ಟೋ ಟಾಕ್ಸಿ ಸಂಸ್ಥೆಗಳು ತಲೆ ಎತ್ತಿದರೂ ಆಟೋರಿಕ್ಷಾಗಳಿರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ ಅಂದ್ರೆ ತಪ್ಪಾಗುವುದಿಲ್ಲ. ಆದ್ರೆ ಸದ್ಯ ಮಾರುಕಟ್ಟೆಯಲ್ಲಿ 4 ಸ್ಟ್ರೋಕ್ ಆಟೋಗಳು ಬಂದರೂ ಸಹ ಇನ್ನು ಕೆಲವು ಆಟೋರಿಕ್ಷಾ ಚಾಲಕರು 2 ಸ್ಟ್ರೋಕ್ ವಾಹನವನ್ನೇ ಬಳಕೆ ಮಾಡುತ್ತಿರುವುದು ಮಾತ್ರ ಬೇಸರದ ಸಂಗತಿ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಈ ನಿಟ್ಟಿನಲ್ಲಿ ಆಟೊ ರಿಕ್ಷಾ ತಯಾರಕ ಸಂಸ್ಥಗಳಾದ ಬಜಾಜ್ ಆಟೋ ಮತ್ತು ಮಹೀಂದ್ರಾ ಮಾಲಿನ್ಯವನ್ನು ತಡೆಗಟ್ಟಲು ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ತಯಾರಿಸುವ ಯೋಜನೆಯಲ್ಲಿದ್ದು, ಮಹೀಂದ್ರಾ ಸಂಸ್ಥೆಯು ಈಗಾಗಲೇ ತಮ್ಮ ಟ್ರಿಯೋ ಆಟೊರಿಕ್ಷಾಗಳನ್ನು ಬಿಡುಗಡೆಗೊಳಿಸಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ದೇಶದ ಪ್ರಮುಖನಗರಗಳಲ್ಲಿ ಇಂಧನ ಆಧಾರಿತ ಆಟೋರಿಕ್ಷಾಗಳು ಕಡಿಮೆಯಾದಲ್ಲಿ ವಾಯು ಮಾಲಿನ್ಯವು ಸಹ ಕಡಿಮೆ ಆಗುತ್ತದೆ ಎನ್ನುವ ಆಲೋಚನೆಯೊಂದಿಗೆ ಮಹೀಂದ್ರಾ ಸಂಸ್ಥೆಯು ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಪರಿಚಯಿಸಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಮಹೀಂದ್ರಾ ಸಂಸ್ಥೆಯು ಟ್ರಿಯೊ ಮತ್ತು ಟ್ರಿಯೊ ಯಾರಿ ಎಂಬ ಎರಡು ಎಲೆಕ್ಟ್ರಿಕ್ ಆಟೊರಿಕ್ಷಾಗಳನ್ನು ಬಿಡುಗಡೆಗೊಳಿಸಿದ್ದು, ಟ್ರಿಯೋ ವಾಹನದಲ್ಲಿ ಮೂವರು ಮತ್ತು ಟ್ರಿಯೊ ಯಾರಿ ವಾಹನದಲ್ಲಿ ಐದು ಮಂದಿ ಕೂತು ಪ್ರಯಾಣಿಸಬಹುದಾಗಿದೆ. ಮಹೀಂದ್ರಾ ಎಲೆಕ್ಟ್ರಿಕ್ ಆಟೋಗಳು ಎಕ್ಸ್ ಶೋರಂ ಬೆಂಗಳೂರಿನ ಪ್ರಕಾರ ರೂ. 2.22 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಐಪಿ 67 ರೇಟೆಡ್ ಬ್ಯಾಟರಿ ಬಾಕ್ಸ್ ಉತ್ತಮ ಬ್ಯಾಟರಿ ಸುರಕ್ಷತೆಯನ್ನು ಒದಗಿಸುತ್ತದೆ, ಹಿಂಭಾಗದ ಇನ್‍ಬ್ಯುಲ್ಟ್ ಕ್ರ್ಯಾಶ್ ಗಾರ್ಡ್ ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರನ್ನು ರಕ್ಷಿಸುತ್ತದೆ. ಈ ವೈಶಿಷ್ಟ್ಯಗಳು ಮಾಲೀಕರನ್ನು ಮತ್ತು ಚಾಲಕರನ್ನು 20-25% ರಷ್ಟು ಲಾಭ ಗಳಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ನೀಡುತ್ತದೆ. ಟ್ರಿಯೊ ಪ್ರತಿ ಕಿ.ಮಿಗೆ 0.50 ರೂ. ವೆಚ್ಚವನ್ನು ನಿರ್ವಹಿಸುತ್ತಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಇದರಲ್ಲಿ ಅಳವಡಿಸಲಾಗಿರುವ ಲೀಥಿಯಂ ಐಯಾನ್ ಬ್ಯಾಟರಿಗಳಿಗೆ 5 ವರ್ಷಗಳ ಕಾಲ ಜೀರೋ ಮೈಂಟೈನೆನ್ಸ್ ಹೊಂದಿರಲಿದೆ ಮತ್ತು ಟ್ರಿಯೊ ಆಟೋ ಬ್ರೇಕ್ ಹಾಕಿದ ಸಮಯದಲ್ಲಿ ಇದರಲ್ಲಿನ ಕೈನೆಟಿಕ್ ಎನರ್ಜಿ ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂನ ಮುಖಾಂತರ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಇನ್ನು ಮಹೀಂದ್ರಾ ಟ್ರಿಯೊ ಯಾರಿ ವಾಹನದಲ್ಲಿ ಅಳವಡಿಸಲಾದ 3.69 ಕಿಲೋವ್ಯಾಟ್ಸ್ ಲೀಥಿಯಂ ಐಯಾನ್ ಬ್ಯಾಟರಿ 2ಕಿಲೋ ವ್ಯಾಟ್ಸ್ ಪೀಕ್ ಪವರ್ ಮತ್ತು 17.5 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಒಂದು ಬಾರಿಯ ಚಾರ್ಜ್‍ಗೆ ಸುಮಾರು 80 ಕಿಲೋಮೀಟರ್ ಪ್ರಯಾಣಿಸಬಹುದಾದ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Kannada
English summary
Panic button, vehicle tracking in public transport from January 1. Read in Kannada
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more