ವಾಹನ ಮಾಲೀಕರೇ ಇತ್ತ ಗಮನಿಸಿ - ನಂಬರ್ ಪ್ಲೇಟ್‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ?

ದೇಶದೆಲ್ಲೆಡೆ ಕಳೆದು ಹೋದ ವಾಹನಗಳನ್ನು ಪತ್ತೆ ಹಚ್ಚಲು ಪೊಲೀಸರು ಕೆಲವು ಬಾರಿ ವಿಫಲರಾಗುತ್ತಿದ್ದು, ಇನ್ಮುಂದೆ ಕದ್ದ ವಾಹನಗಳನ್ನು ಸುಲಭವಾಗಿ ಪತ್ತೆಹಚ್ಚಲು ಕೆಂದ್ರ ಸರ್ಕಾರವು ಒಂದು ಮಹತ್ವದ ಯೋಜನೆಯೊಂದನು ಜಾರಿಗೆ ತರುತ್ತಿದೆ.

ವಾಹನ ಮಾಲೀಕರೆ ದಯವಿಟ್ಟು ಗಮನಿಸಿ - ನಂಬರ್ ಪ್ಲೆಟ್‍‍‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ.?

ಎಪ್ರಿಲ್ 2019ರಿಂದ ಎಲ್ಲಾ ಹೊಸ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‍ಗಳನ್ನು ಪಡೆದುಕೊಂಡಿರಲಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದರಿಗಳ ಸಚಿವಾಲಯ 'ಎಲ್ಲಾ ಹೊಸ ವಾಹನಗನ್ನು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‍ಗಳೊಂದಿಗೆ ಪೂರ್ವಸಿದ್ಧಗೊಳಿಸಲಾಗುವುದು. ಎಂದು ಇದೇ ಗುರುವಾರ ಹೇಳಿಕೆಯನ್ನು ನೀಡಿದೆ.

ವಾಹನ ಮಾಲೀಕರೆ ದಯವಿಟ್ಟು ಗಮನಿಸಿ - ನಂಬರ್ ಪ್ಲೆಟ್‍‍‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ.?

ಸಚಿವಾಲಯ ಈ ಪರಿಣಾಮಕ್ಕೆ 1989 ರ ಸೆಂಟ್ರಲ್ ಮೋಟಾರ್ ವಾಹನ ನಿಯಮಗಳಿಗೆ ತಿದ್ದುಪಡಿಗಳನ್ನು ಸೂಚಿಸಿದ್ದು, ಮೂರನೇ ನೋಂದಾವಣೆ ಗುರುತು ಸೇರಿದಂತೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‍ಗಳಾನ್ನು ವಾಹನ ತಯಾರಕರು ಏಪ್ರಿಲ್ 1, 2019 ರಿಂದ ಅಥವಾ ನಂತರ ತಯಾರಿಸಲಾದ ವಾಹನಗಳ ಮೂಲಕ ತಮ್ಮ ವಿತರಕರು ಮತ್ತು ಮಾರಾಟಗಾರರು ಅಂತಹ ನೋಂದಣಿಗೆ ಗುರುತು ಹಾಕಬೇಕು ಎಂದು ಸೂಚಿಸುತ್ತದೆ. ಹೆಚ್ಎಸ್ಆರ್‍‍ಪಿ ಪ್ಲೇಟ್ಗಳು ಒದಗಿಸಲು ವಿಫಲವಾದಲ್ಲಿ ಅದು ವಾಹನದ ಮೇಲೆ ಪರಿಣಾಮ ಬೀರುತ್ತವೆ "ಎಂದು ಉಲ್ಲೇಖಿಸಲಾಗಿದೆ.

ವಾಹನ ಮಾಲೀಕರೆ ದಯವಿಟ್ಟು ಗಮನಿಸಿ - ನಂಬರ್ ಪ್ಲೆಟ್‍‍‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ.?

ಇದಲ್ಲದೇ ವಾಹನ ವಿತರಕರು ಹಳೆಯ ವಾಹನಗಳಿಗೆ ಹೆಚ್ಚಿನ ಭದ್ರತಾ ನೋಂದಣಿ ಫಲಕಗಳನ್ನು ಸಹ ಒದಗಿಸಬಹುದಾಗಿದ್ದು, ಮತ್ತು ವಾಹನ ತಯಾರಕರು ಅದರ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳುವಾಗ ಈ ಹೆಜ್ಜೆ ವಾಹನಗಳಲ್ಲಿ ಹೆಚ್ಎಸ್ಆರ್‍‍ಪಿ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್) ವ್ಯಾಪ್ತಿಯನ್ನು ಸುಧಾರಿಸಲು ಸಾಧ್ಯವಿದೆ ಎನ್ನಲಾಗಿದೆ.

ವಾಹನ ಮಾಲೀಕರೆ ದಯವಿಟ್ಟು ಗಮನಿಸಿ - ನಂಬರ್ ಪ್ಲೆಟ್‍‍‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ.?

ಹೆಚ್ಚಿನ ಸುರಕ್ಷತಾ ನೋಂದಣಿ ಫಲಕವು ವಾಹನವನ್ನು ಕಾಪಾಡುವುದರಲ್ಲಿ ಸಹಾಯ ಮಾಡುತ್ತದೆ ಮತ್ತು ಕಳೆದುಹೋದ ಅಥವಾ ಕಳುವಾದ ವಾಹನವನ್ನು ಪತ್ತೆಹಚ್ಚಲು ಸುಲಭವಾಗುತ್ತದೆ.

ವಾಹನ ಮಾಲೀಕರೆ ದಯವಿಟ್ಟು ಗಮನಿಸಿ - ನಂಬರ್ ಪ್ಲೆಟ್‍‍‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ.?

ಈ ನಿಟ್ಟಿನಲ್ಲಿ ಕೇಂದ್ರ ಮೋಟಾರ್ ವಾಹನ ನಿಯಮಗಳನ್ನು 1989ರ ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಸಾರ್ವಜನಿಕರಿಂದ ಪಡೆದ ಆಕ್ಷೇಪಣೆಗಳು ಮತ್ತು ಸಲಹೆಗಳ ಕಾರಣದಿಂದ ನೀಡಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹೇಳಿಕೊಂಡಿದೆ.

MOST READ: ಹಳೆಯ ಕೇಸ್‍ಗಳನ್ನು ಕ್ಲೋಸ್ ಮಾಡಲು ಟ್ರಾಫಿಕ್ ಪೊಲೀಸರಿಂದ ಭರ್ಜರಿ ಆಫರ್.!

ವಾಹನ ಮಾಲೀಕರೆ ದಯವಿಟ್ಟು ಗಮನಿಸಿ - ನಂಬರ್ ಪ್ಲೆಟ್‍‍‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ.?

ಹೊಸ ನೋಂದಣಿ ಪ್ಲೇಟ್‍ಗಳು 15 ವರ್ಷ ಗ್ಯಾರಂಟಿಗಳೊಂದಿಗೆ ಬರುಲಿದ್ದು, ಒಮ್ಮೆ ಎಚ್ಎಸ್ಆರ್‍‍ಪಿ ಮುರಿದರೆ, ಕಳೆದುಹೋಗಿದ್ದಲ್ಲಿ ಅಥವಾ ಆ ಸಮಯದಲ್ಲಿ ಯಾವುದೇ ನೈಸರ್ಗಿಕ ಹಾನಿಯನ್ನು ಅನುಭವಿಸಿದರೆ ಮೊದಲಿಗೆ ಅಳವಡಿಸಿದ ಡೀಲರ್ನಿಂದ ಅದನ್ನು ಬದಲಿಸಬೇಕಾಗುತ್ತದೆ.

ವಾಹನ ಮಾಲೀಕರೆ ದಯವಿಟ್ಟು ಗಮನಿಸಿ - ನಂಬರ್ ಪ್ಲೆಟ್‍‍‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ.?

ಈ ಹೈ ಸೆಕ್ಯುರಿಟಿ ರಿಜಿಸ್ಟ್ರೆಷನ್ ಪ್ಲೇಟ್‍ ಅನ್ನು ನಕಲು ಮಾಡಲಾಗದೆ, ನಂಬರ್ ಪ್ಲೆಟ್‍ನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಕ್ರೋಮಿಯಂ ಹಾಲೊಗ್ರಾಂ ಅನ್ನು ಮತ್ತು ಪ್ಲೇಟ್‍ನ ಮೇಲ್ಭಾಗದಲ್ಲಿ ಹಾಗು ಎಡ ಭಾಗದಲ್ಲಿ ಹಾಟ್-ಸ್ಟ್ಯಾಂಪ್ ಮಾಡಲಾಗಿರುತ್ತದೆ.

Image Courtesy: Chandigarh transport

ವಾಹನ ಮಾಲೀಕರೆ ದಯವಿಟ್ಟು ಗಮನಿಸಿ - ನಂಬರ್ ಪ್ಲೆಟ್‍‍‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ.?

ನಂಬರ್ ಪ್ಲೇಟ್‍ಗಳಲ್ಲಿ ನೀಡಲಾದ ಸ್ಟ್ಯಾಂಪ್ ನೀಲಿ ಬಣ್ಣದಲ್ಲಿ ಅಶೋಕ ಚಕ್ರವನ್ನು ಹೊಂದಿರುತ್ತದೆ. 10-ಅಂಕಿ ಶಾಶ್ವತ ಗುರುತಿನ ಸಂಖ್ಯೆ (ಪಿನ್) ಲೇಸರ್-ಬ್ರಾಂಡ್ ಅನ್ನು ಹೆಚ್‍ಎಸ್ಆರ್‍‍ಪಿಗಳ ಕೆಳ-ಎಡ ಮೂಲೆಯಲ್ಲಿರುತ್ತದೆ ಮತ್ತು ನೋಂದಣಿ ಸಂಖ್ಯೆಯ ಅಕ್ಷರಗಳು ಮತ್ತು ಅಂಕಿಗಳ ಮೇಲೆ ಅನ್ವಯವಾಗುವ ಬಿಸಿ-ಸ್ಟಾಂಪಿಂಗ್‍ನ ಮೇಲೆ 'IND' ಗುರುತನ್ನು ನೀಡಲಾಗಿರುತ್ತದೆ.

ವಾಹನ ಮಾಲೀಕರೆ ದಯವಿಟ್ಟು ಗಮನಿಸಿ - ನಂಬರ್ ಪ್ಲೆಟ್‍‍‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ.?

ಇನ್ನೊಂದು ಪ್ರಮಖ ವಿಚಾರ ಅಂದ್ರೆ, ವಾಹನ ಉತ್ಪಾದಕರೇ ಪೂರೈಸುವ ನಂಬರ್ ಪ್ಲೇಟ್‌ಗಳು ಹೊಸ ಸುರಕ್ಷಾ ನೀತಿ ಅಡಿಯಲ್ಲೇ ಅಭಿವೃದ್ಧಿಪಡಿಸಿದ ಉತ್ಪನ್ನವಾಗಿದ್ದು, ಇದು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯಿಂದ ಪ್ರಮಾಣಿಕೃತಗೊಂಡಿರುತ್ತದೆ.

ವಾಹನ ಮಾಲೀಕರೆ ದಯವಿಟ್ಟು ಗಮನಿಸಿ - ನಂಬರ್ ಪ್ಲೆಟ್‍‍‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ.?

ಜೊತೆಗೆ ವಾಹನಗಳ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿಗೆ ಬ್ರೇಕ್ ಬೀಳಲಿದ್ದು, ಪೂರ್ಣ ಪ್ರಮಾಣದ ಸುರಕ್ಷೆ ಸಿಗಲಿದೆ ಎನ್ನುವುದು ಕೇಂದ್ರ ಸಾರಿಗೆ ಇಲಾಖೆಯ ಅಭಿಪ್ರಾಯವಾಗಿದೆ. ಜೊತೆಗೆ ಹೊಸ ವಾಹನಗಳಿಗಾಗಿ ನಂಬರ್ ಪ್ಲೇಟ್‌ಗಳನ್ನು ಖರೀದಿಸಲು ಹೆಚ್ಚುವರಿ ಬೆಲೆ ತೆರಬೇಕಾಗಿದ್ದ ವಾಹನ ಮಾಲೀಕರಿಗೂ ಇದರಿಂದ ಕೊಂಚ ರಿಲೀಫ್ ಸಿಗಲಿದೆ.

ವಾಹನ ಮಾಲೀಕರೆ ದಯವಿಟ್ಟು ಗಮನಿಸಿ - ನಂಬರ್ ಪ್ಲೆಟ್‍‍‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ.?

ಇನ್ನು ವಾಹನದ ಮೂಲ ಬೆಲೆಯಲ್ಲೇ ನಂಬರ್ ಪ್ಲೇಟ್ ಬೆಲೆಯು ಒಳಗೊಂಡಿರುತ್ತವೆ. ಹೀಗಾಗಿ ಹೊಸ ವಾಹನ ಖರೀದಿಸುವ ಗ್ರಾಹಕರು ನಂಬರ್ ಪ್ಲೇಟ್‌ಗಾಗಿ ಹೆಚ್ಚುವರಿ ಹಣ ತೆರಬೇಕಾದ ಅವಶ್ಯಕತೆ ಇಲ್ಲಾ ಎನ್ನಬುಹುದು.

MOST READ: ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ವಾಹನ ಮಾಲೀಕರೆ ದಯವಿಟ್ಟು ಗಮನಿಸಿ - ನಂಬರ್ ಪ್ಲೆಟ್‍‍‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ.?

ಸದ್ಯ ಮಾರುಕಟ್ಟೆಯಲ್ಲಿ ನಂಬರ್ ಪ್ಲೇಟ್ ಒಂದಕ್ಕೆ ರೂ.900ರಿಂದ ರೂ.40 ಸಾವಿರ ತನಕ ಬೆಲೆಯಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ವಾಹನ ಮಾಲೀಕರನ್ನು ಸುಲಿಗೆ ಮಾಡುತ್ತಿರುವ ಏಜೆನ್ಸಿಗಳಿಗೂ ಇದರಿಂದ ಹೊಡೆತ ಬೀಳಲಿದೆ ಎನ್ನಬಹುದು.

Source: AutocarIndia

Most Read Articles

Kannada
English summary
High security number plates to be pre-fitted on vehicles from April 1. Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more