ಅಂತಾರಾಜ್ಯ ವಾಹನಗಳ ವರ್ಗಾವಣೆಯನ್ನು ಸರಳಗೊಳಿಸಲಿದೆ ಹೊಸ ಮಾದರಿಯ ನಂಬರ್ ಪ್ಲೇಟ್

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶಾದ್ಯಂತ ಚಾಲ್ತಿಯಲ್ಲಿ ವಾಹನ ನೋಂದಣಿಯಲ್ಲಿ ಮಹತ್ವದ ಬದಲಾವಣೆ ತರುವ ಕುರಿತು ಹೊಸ ವ್ಯವಸ್ಥೆಯೊಂದರ ಕುರಿತು ಪ್ರಸ್ತಾಪಿಸಿದ್ದು, ಹೊಸ ಪ್ರಸ್ತಾಪವು ಅಂತರರಾಜ್ಯ ವಾಹನಗಳ ವರ್ಗಾವಣೆಯನ್ನು ಮತ್ತಷ್ಟು ಸರಳಗೊಳಿಸಲಿದೆ.

ವಾಹನಗಳ ವರ್ಗಾವಣೆಯನ್ನು ಸರಳಗೊಳಿಸಲಿದೆ ಹೊಸ ಮಾದರಿಯ ನಂಬರ್ ಪ್ಲೇಟ್

ಪ್ರಸ್ತುತ ಮೋಟಾರ್ ವಾಹನಗಳ ಕಾಯ್ದೆಯಲ್ಲಿ ಯಾವುದೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಿ ಅಲ್ಲಿಯೇ ನೆಲೆಯೂರುವ ವಾಹನ ಮಾಲೀಕರು ನಿಗದಿತ ಅವಧಿಯ ನಂತರ ಆ ರಾಜ್ಯದ ನೋಂದಣಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಚಾಲ್ತಿಯಲ್ಲಿ ಅಂತರರಾಜ್ಯ ವಾಹನ ವರ್ಗಾವಣೆ ಪ್ರಕ್ರಿಯೆಯು ಹಲವಾರು ಗೊಂದಲಗಳಿಂದಾಗಿ ವರ್ಗಾವಣೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿರುವುದಕ್ಕೆ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರುವ ಸಿದ್ದತೆ ನಡೆಸಲಾಗುತ್ತಿದೆ.

ವಾಹನಗಳ ವರ್ಗಾವಣೆಯನ್ನು ಸರಳಗೊಳಿಸಲಿದೆ ಹೊಸ ಮಾದರಿಯ ನಂಬರ್ ಪ್ಲೇಟ್

ಹೊಸ ಮಾದರಿಯ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ರಸ್ತೆ ಸಾರಿಗೆ ಸಚಿವಾಲಯವು ಮೋಟಾರ್ ವಾಹನ ಕಾಯ್ದೆ 1988ರ ಸೆಕ್ಷನ್ 47ರ ಅಡಿಯಲ್ಲಿ ಕೆಲವು ಹೊಸ ಬದಲಾವಣೆಗಳೊಂದಿಗೆ ಅಂತರರಾಜ್ಯ ವಾಹನ ವರ್ಗಾವಣೆ ಪ್ರಕ್ರಿಯೆ ಸರಳಗೊಳಿಸುವ ಗುರಿಯನ್ನು ಹೊಂದಿದೆ.

ವಾಹನಗಳ ವರ್ಗಾವಣೆಯನ್ನು ಸರಳಗೊಳಿಸಲಿದೆ ಹೊಸ ಮಾದರಿಯ ನಂಬರ್ ಪ್ಲೇಟ್

ಯಾವುದೇ ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಆ ವಾಹನ ಮಾಲೀಕರು ಸ್ಥಳಾಂತರಗೊಂಡ ರಾಜ್ಯದಲ್ಲಿ 12 ತಿಂಗಳ ಒಳಗಾಗಿ ಮರು ನೋಂದಾಯಿಸಿಕೊಳ್ಳಬೇಕಾಗುತ್ತದೆ.

ವಾಹನಗಳ ವರ್ಗಾವಣೆಯನ್ನು ಸರಳಗೊಳಿಸಲಿದೆ ಹೊಸ ಮಾದರಿಯ ನಂಬರ್ ಪ್ಲೇಟ್

ಆದರೆ ರಸ್ತೆ ಸಾರಿಗೆ ಇಲಾಖೆ ಜಾರಿಗೆ ತರಲು ಉದ್ದೇಶಿಸಿರುವ 'IN'ಸರಣಿಯ ವಾಹನ ನೋಂದಣಿ ವ್ಯವಸ್ಥೆಯು ಅಂತರ್‌ರಾಜ್ಯಗಳಿಗೆ ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿ ವಾಹನದ ನೋಂದಣಿಯನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾಯಿಸುವುದನ್ನು ಸುಲಭಗೊಳಿಸುತ್ತದೆ.

ವಾಹನಗಳ ವರ್ಗಾವಣೆಯನ್ನು ಸರಳಗೊಳಿಸಲಿದೆ ಹೊಸ ಮಾದರಿಯ ನಂಬರ್ ಪ್ಲೇಟ್

‘ಐಎನ್' ಸರಣಿಯ ವಾಹನ ನೋಂದಣಿಯ ಮೂಲಕ ವಾಹನ ಮಾಲೀಕರು ಒಂದೇ ಬಾರಿಗೆ ರಸ್ತೆ ತೆರಿಗೆ ಪಾವತಿಸುವ ಮೂಲಕ ದೇಶದ ಯಾವುದೇ ರಾಜ್ಯದಲ್ಲಿ ಸಂಚರಿಸಬಹುದಾಗಿದೆ. ಐಎನ್ ನೋಂದಣಿಯಿದ್ದರೆ ಆ ರಾಜ್ಯಗಳ ಸಾರಿಗೆ ಇಲಾಖೆಯಲ್ಲಿ ಮರು ನೋಂದಾಯಿಸುವ ಅವಶ್ಯವಿರುವುದಿಲ್ಲ.

ವಾಹನಗಳ ವರ್ಗಾವಣೆಯನ್ನು ಸರಳಗೊಳಿಸಲಿದೆ ಹೊಸ ಮಾದರಿಯ ನಂಬರ್ ಪ್ಲೇಟ್

ಕೇಂದ್ರ ಸಾರಿಗೆ ಇಲಾಖೆಯು ಹೊಸ ಐಎನ್ ನೋಂದಣಿ ಸರಣಿಯನ್ನು ವ್ಯವಸ್ಥೆಯನ್ನು ಪ್ರಾಯೋಗಿಕ ಯೋಜನೆಯಾಗಿ ಪರಿಚಯಿಸುತ್ತಿದ್ದು, ಹೊಸ ಪ್ರಸ್ತಾಪದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಕೇಂದ್ರ ಸಾರಿಗೆ ಇಲಾಖೆಯು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ರ ರವಾನಿಸಿದೆ.

ವಾಹನಗಳ ವರ್ಗಾವಣೆಯನ್ನು ಸರಳಗೊಳಿಸಲಿದೆ ಹೊಸ ಮಾದರಿಯ ನಂಬರ್ ಪ್ಲೇಟ್

‘ಐಎನ್' ಸರಣಿಯನ್ನು ಮೊದಲ ಹಂತದಲ್ಲಿ ರಕ್ಷಣಾ ಸಿಬ್ಬಂದಿ ವಾಹನಗಳಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ (ಪಿಎಸ್‌ಯು) ಮತ್ತು ಐದು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಕಾರ್ಪೊರೇಟ್ ಕಚೇರಿಗಳನ್ನು ಹೊಂದಿರುವ ಖಾಸಗಿ ವಲಯದ ಕಂಪನಿಗಳಿಗೆ ಹೊಸ ನೋಂದಣಿ ಸೌಲಭ್ಯವು ಲಭ್ಯವಾಗಲಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ವಾಹನಗಳ ವರ್ಗಾವಣೆಯನ್ನು ಸರಳಗೊಳಿಸಲಿದೆ ಹೊಸ ಮಾದರಿಯ ನಂಬರ್ ಪ್ಲೇಟ್

ಪ್ರಸ್ತುತ ನೋಂದಣಿ ವರ್ಗಾವಣೆ ಪ್ರಕ್ರಿಯೆಯು ತುಂಬಾ ಜಟಿಲವಾಗಿದ್ದು, ಮಾತೃ ರಾಜ್ಯದಿಂದ ಹೊಸ ರಾಜ್ಯದಲ್ಲಿ ಮರುನೋಂದಣಿಗೆ ಎನ್‌ಒಸಿ ಪಡೆಯುವುದು ಒಳಗೊಂಡಂತೆ ಮೂಲ ರಾಜ್ಯದಿಂದ ರಸ್ತೆ ತೆರಿಗೆಯನ್ನು ಮರುಪಾವತಿಸುವ ಅರ್ಜಿಯನ್ನು ಸಹ ಒಳಗೊಂಡಿದೆ.

ವಾಹನಗಳ ವರ್ಗಾವಣೆಯನ್ನು ಸರಳಗೊಳಿಸಲಿದೆ ಹೊಸ ಮಾದರಿಯ ನಂಬರ್ ಪ್ಲೇಟ್

ಈ ಹಿನ್ನಲೆ ‘ಐಎನ್' ಸರಣಿ ಮೂಲಕ ಒಂದೇ ಬಾರಿ ನೋಂದಣಿ ಮಾಡಿದ್ದಲ್ಲಿ ದೇಶಾದ್ಯಂತ ಯಾವುದೇ ರಾಜ್ಯಗಳಿಗೆ ಮುಕ್ತವಾಗಿ ಸಂಚರಿಸಬಹುದಾಗಿದ್ದು, ಏಕರೂಪದಲ್ಲಿ ಪ್ರತಿ ಎರಡು ವರ್ಷಗಳಿಗೆ ಒಂದು ಬಾರಿ ನೋಂದಣಿಯನ್ನು ಮರುಚಾಲನೆಗೊಳಿಸುವ ಸೌಲಭ್ಯ ಒಳಗೊಂಡಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ವಾಹನಗಳ ವರ್ಗಾವಣೆಯನ್ನು ಸರಳಗೊಳಿಸಲಿದೆ ಹೊಸ ಮಾದರಿಯ ನಂಬರ್ ಪ್ಲೇಟ್

ಹೊಸ ವ್ಯವಸ್ಥೆಯಿಂದ ರಾಜ್ಯಗಳ ಜಿಎಸ್‌ಟಿ ಪಾಲಿಗೆ ಹೊಡೆತ?

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರಸ್ತಾಪಿಸಿರುವ ಹೊಸ ಮಾದರಿಯ ನೋಂದಣಿ ಪ್ರಕ್ರಿಯೆಯಿಂದ ಬರುವ ಆದಾಯದಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಮಟ್ಟದ ಜಿಎಸ್‌ಟಿ ಪಾಲು ಹೋಗಲಿದೆ ಎನ್ನುವ ಚರ್ಚೆಗಳು ಆರಂಭವಾಗಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯದ ಆಧಾರದ ಮೇಲೆ ಹೊಸ ಬದಲಾಣೆಯೊಂದಿಗೆ ಐಎನ್ ಸರಣಿ ನಂಬರ್ ಪ್ಲೇಟ್ ಪರಿಚಯಿಸುವುದು ಮಾತ್ರ ಖಚಿತವಾಗಿದೆ.

Most Read Articles

Kannada
English summary
MoRTH Proposes New All-India Vehicle Registration Policy. Read in Kannada.
Story first published: Thursday, April 29, 2021, 20:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X