BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ರಾಜ್ಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶಾದ್ಯಂತ ವಾಹನ ನೋಂದಣಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಪರಿಚಯಿಸಿದ್ದು, ಹೊಸ ಯೋಜನೆ ಅಡಿ ಅಂತಾರಾಜ್ಯ ವಾಹನಗಳ ವರ್ಗಾವಣೆಯನ್ನು ಮತ್ತಷ್ಟು ಸರಳಗೊಳಿಸಲು ಬಿಎಚ್ ಸರಣಿ(BH Series) ನೋಂದಣಿಯನ್ನು ಪರಿಚಯಿಸಿದೆ.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಈ ಹಿಂದಿನ ಮೋಟಾರ್ ವಾಹನಗಳ ಕಾಯ್ದೆಯಲ್ಲಿ ಯಾವುದೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಿ ಅಲ್ಲಿಯೇ ನೆಲೆಯೂರುವ ವಾಹನ ಮಾಲೀಕರು ನಿಗದಿತ ಅವಧಿಯ ನಂತರ ಆ ರಾಜ್ಯದ ನೋಂದಣಿ ಪಡೆದುಕೊಳ್ಳಬೇಕಾಗಿತ್ತು. ಅಲ್ಲದೆ ಅಂತಾರಾಜ್ಯ ವಾಹನ ವರ್ಗಾವಣೆ ಪ್ರಕ್ರಿಯೆಯಲ್ಲಿರುವ ಹಲವಾರು ಗೊಂದಲಗಳಿಂದಾಗಿ ವರ್ಗಾವಣೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿರುವುದಕ್ಕೆ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗಿದೆ.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಅಂತಾರಾಜ್ಯ ವಾಹನಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿರುವ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಮೋಟಾರ್ ವಾಹನ ಕಾಯ್ದೆ 1988ರ ಸೆಕ್ಷನ್ 47ರ ಅಡಿಯಲ್ಲಿ ಕೆಲವು ಹೊಸ ಬದಲಾವಣೆಗಳೊಂದಿಗೆ ಒಂದು ರಾಜ್ಯದ ವಾಹನವನ್ನು ಮತ್ತೊಂದು ರಾಜ್ಯಕ್ಕೆ ವರ್ಗಾವಣೆಗೊಳಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಯತ್ನಿಸಿದೆ.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಯಾವುದೇ ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಆ ವಾಹನ ಮಾಲೀಕರು ಸ್ಥಳಾಂತರಗೊಂಡ ರಾಜ್ಯದಲ್ಲಿ 12 ತಿಂಗಳ ಒಳಗಾಗಿ ಮರು ನೋಂದಾಯಿಸಿಕೊಳ್ಳಬೇಕಾಗಿತ್ತು.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಆದರೆ ರಸ್ತೆ ಸಾರಿಗೆ ಇಲಾಖೆ ಜಾರಿಗೆ ತಂದಿರುವ ಹೊಸ ಭಾರತ್ ಸೀರಿಸ್ ವಾಹನ ನೋಂದಣಿ ವ್ಯವಸ್ಥೆಯು ಅಂತಾರಾಜ್ಯಗಳಿಗೆ ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿ ವಾಹನದ ನೋಂದಣಿಯನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾಯಿಸುವುದನ್ನು ಸುಲಭಗೊಳಿಸಲು ವಾಹನ ಮಾಲೀಕರಿಗೆ ಸಹಕಾರಿಯಾಗಿದೆ.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಬಿಎಚ್ ಸೀರಿಸ್ ನೋಂದಣಿ ಸಂಖ್ಯೆಯ ಮೂಲಕ ವಾಹನ ಮಾಲೀಕರು ಒಂದೇ ಬಾರಿಗೆ ರಸ್ತೆ ತೆರಿಗೆ ಪಾವತಿಸುವ ಮೂಲಕ ದೇಶದ ಯಾವುದೇ ರಾಜ್ಯದಲ್ಲಿ ಸಂಚರಿಸಬಹುದಾಗಿದ್ದು, ಬಿಎಚ್ ಸೀರಿಸ್ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳು ತಡೆರಹಿತವಾಗಿ ಸಂಚರಿಸಲಿವೆ.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಹೊಸ ನೋಂದಣಿ ಪ್ರಕ್ರಿಯೆ ಮತ್ತು ವಿತರಣೆಯು ಮಹಾರಾಷ್ಟ್ರದಲ್ಲಿ ಮೊದಲ ಹಂತವಾಗಿ ಆರಂಭಗೊಂಡಿದ್ದು, ಪೂರ್ವ ಮುಂಬೈನಲ್ಲಿರುವ ಚೆಂಬೂರ್ ನಿವಾಸಿ ರೋಹಿತ್ ಸುತೆ ಎನ್ನುವವರು ಹೋಂಡಾ ಸಿಟಿ ಕಾರಿಗೆ ಮೊದಲ ಬಿಎಚ್ ಸರಣಿ ನೋಂದಣಿ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಹೊಸ ಬಿಎಚ್ ಸೀರಿಸ್ ನೋಂದಣಿಯನ್ನು ಮೊದಲ ಹಂತದಲ್ಲಿ ರಕ್ಷಣಾ ಸಿಬ್ಬಂದಿ ವಾಹನಗಳಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ (ಪಿಎಸ್‌ಯು) ಪರಿಚಯಿಸಲಾಗಿದೆ.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಜೊತೆಗೆ ಐದು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಕಾರ್ಪೊರೇಟ್ ಕಚೇರಿಗಳನ್ನು ಹೊಂದಿರುವ ಖಾಸಗಿ ವಲಯದ ಕಂಪನಿಗಳಿಗೂ ಸಹ ಹೊಸ ನೋಂದಣಿ ಸೌಲಭ್ಯವು ಲಭ್ಯವಿರಲಿದ್ದು, ಹೊಸ ನೋಂದಣಿ ಪ್ರಕ್ರಿಯೆಯೂ ಕಳೆದ ಸೆಪ್ಟೆಂಬರ್ 15ರಿಂದಲೇ ಚಾಲನೆ ಪಡೆದುಕೊಂಡಿತ್ತು.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಈ ಹಿಂದಿನ ಅಂತಾರಾಜ್ಯ ವಾಹನ ನೋಂದಣಿ ವರ್ಗಾವಣೆ ಪ್ರಕ್ರಿಯೆಯು ತುಂಬಾ ಜಟಿಲವಾಗಿದ್ದಲ್ಲದೆ ಮೂಲ ರಾಜ್ಯದಿಂದ ಹೊಸ ರಾಜ್ಯದಲ್ಲಿನ ಮರುನೋಂದಣಿಗೆ ಎನ್‌ಒಸಿ ಪಡೆಯುವುದು ಒಳಗೊಂಡಂತೆ ರಸ್ತೆ ತೆರಿಗೆಯನ್ನು ಮರುಪಾವತಿಸುವ ಅರ್ಜಿಯನ್ನು ಸಹ ಒಳಗೊಂಡಿತ್ತು.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ವಿವಿಧ ರಾಜ್ಯಗಳ ಸರ್ಕಾರದ ಅಭಿಪ್ರಾಯದ ಮೇಲೆ ಹೊಸ ಬಿಎಚ್ ಸರಣಿ ನೋಂದಣಿ ಸಂಖ್ಯೆಯನ್ನು ಪರಿಚಯಿಸಲಾಗಿದ್ದು, ಬಿಎಚ್ ಸರಣಿ ವಾಹನಗಳನ್ನು ಅಂತಾರಾಜ್ಯ ವಾಹನಗಳೆಂದು ಸುಲಭವಾಗಿ ಗುರುತಿಸಬಹುದಾಗಿದೆ.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಯಾವ ವಾಹನಕ್ಕೆ ಎಷ್ಟು ತೆರಿಗೆ?

ಕೇಂದ್ರ ಸಾರಿಗೆ ಇಲಾಖೆಯು BH ಸೀರಿಸ್ ನೋಂದಣಿ ಪಡೆದುಕೊಳ್ಳಲಿರುವ ರೂ.10 ಲಕ್ಷದೊಳಗಿನ ವಾಹನಗಳಿಗೆ ಶೇ. 8 ರಷ್ಟು ತೆರಿಗೆ, ರೂ.10 ಲಕ್ಷದಿಂದ ರೂ.20 ಲಕ್ಷದ ಒಳಗಿನ ವಾಹನಗಳಿಗೆ ಶೇ. 10 ರಷ್ಟು ತೆರಿಗೆ ಮತ್ತು ರೂ. 20 ಲಕ್ಷ ಮೇಲ್ಪಟ್ಟ ವಾಹನಗಳಿಗೆ ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತದೆ.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಡೀಸೆಲ್ ವಾಹನಗಳಿಗೆ ಹೆಚ್ಚುವರಿ ತೆರಿಗೆ!

ಹೌದು, BH ಸೀರಿಸ್ ನೋಂದಣಿ ಪಡೆದುಕೊಳ್ಳಲಿರುವ ವಾಹನಗಳಲ್ಲಿ ಪೆಟ್ರೋಲ್ ಮಾದರಿಗಳಿಂತಲೂ ಡೀಸೆಲ್ ವಾಹನಗಳು ಮೂಲ ತೆರಿಗೆ ದರಕ್ಕಿಂತ ಶೇ. 2 ರಷ್ಟು ಹೆಚ್ಚುವರಿ ತೆರಿಗೆ ಪಡೆದುಕೊಳ್ಳಲಿದ್ದು, ಇವಿ ವಾಹನಗಳಿಗೆ ರಿಯಾಯ್ತಿ ನೀಡಲಾಗಿದೆ.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಎಲೆಕ್ಟ್ರಿಕ್ ವಾಹನಗಳಿಗೆ ವಿನಾಯ್ತಿ

BH ಸೀರಿಸ್ ನೋಂದಣಿ ಪಡೆದುಕೊಳ್ಳಲಿರುವ ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ತೆರಿಗೆ ದರಕ್ಕಿಂತ ಶೇ. 2 ರಷ್ಟು ಕಡಿಮೆ ತೆರಿಗೆ ವಿಧಿಸಲು ನಿರ್ಧರಿಸಿದ್ದು, ಇವಿ ವಾಹನಗಳ ತೆರಿಗೆ ಸ್ತರವು ಬ್ಯಾಟರಿ ಪ್ಯಾಕ್ ಅವಲಂಬಿಸಿ ತೆರಿಗೆ ದರ ನಿರ್ಧಾರವಾಗುತ್ತದೆ.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ಮೋಟಾರ್ ವಾಹನ ಕಾಯ್ದೆಯಲ್ಲಿ ಈ ಹಿಂದೆ ಯಾವುದೇ ಒಬ್ಬ ವ್ಯಕ್ತಿಯು ಹೊಸ ವಾಹನವನ್ನು ನೋಂದಾಯಿಸಿದ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವನ್ನು ಹೊರತುಪಡಿಸಿ ಇತರೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಗರಿಷ್ಠ 12 ತಿಂಗಳುಗಳ ಕಾಲ ಆ ವಾಹನಗಳ ಬಳಕೆ ಮಾಡಲು ಅವಕಾಶವಿತ್ತು.

BH Series: ಬಿಎಚ್​ ಸರಣಿ ನಂಬರ್ ಪ್ಲೇಟ್ ವಿತರಣೆಗೆ ಅಧಿಕೃತ ಚಾಲನೆ..

ನಿಗದಿತ 12 ತಿಂಗಳ ಅವಧಿ ಮುಗಿಯುವ ಮುನ್ನ ಮಾಲೀಕರು ತಮ್ಮ ವಾಹನದ ಮರು ನೋಂದಣಿಯನ್ನು ಕಡ್ಡಾಯವಾಗಿ ವಾಸಿಸಲು ಇರುವ ಬಯಸುವ ರಾಜ್ಯಗಳಲ್ಲಿ ಮರುನೋಂದಣಿ ಮಾಡಿಕೊಳ್ಳಬೇಕಿತ್ತು. ಆದರೆ ಭಾರತ್ ಸಿರೀಸ್‌ (ಬಿಎಚ್-ಸಿರೀಸ್‌) ನೋಂದಣಿ ಹೊಂದಿರುವ ವಾಹನಗಳು ಮತ್ತೆ ನೋಂದಣಿ ಮಾಡಿಕೊಳ್ಳುವ ಅವಶ್ಯಕತೆಯಿರುವುದಿಲ್ಲ.

Most Read Articles

Kannada
English summary
Bharat series numberplates start rolling out in india check more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X