ಅಂಚೆ ಕಚೇರಿಗಳ ಮೂಲಕ ನ್ಯಾನೋ ಬುಕಿಂಗ್

ಈ ಸಂಬಂಧ ಟಾಟಾ ಮೋಟಾರ್ಸ್ ಮತ್ತ್ತು ಭಾರತೀಯ ಅಂಚೆ ಇಲಾಖೆ ಒಪ್ಪಂದ ಮಾಡಿಕೊಂಡುದ್ದು, ಟಾಟಾ ನ್ಯಾನೋ ಕಾರುಗಳ ಬುಕಿಂಗನ್ನು ದೇಶದ 141 ಪ್ರಧಾನ ಅಂಚೆ ಕಚೇರಿಗಳಲ್ಲಿ ಮಾಡಬಹುದಾಗಿದೆ.
ನ್ಯಾನೋ ಕಾರುಗಳನ್ನು ಕೊಳ್ಳಲು ಸಾಲ ಸೌಲಭ್ಯಕ್ಕಾಗಿಯೂ ಅಂಚೆ ಕಚೇರಿಗಳ ಮೂಲಕ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ನ್ಯಾನೋ ಕಾರು ಕಾಯ್ದಿರಿಸು ಅರ್ಜಿ ಬೆಲೆ 300 ರುಪಾಯಿಗಳು. ಶೀಘ್ರದಲ್ಲೇ ಈ ಸೇವೆಯನ್ನು ದೇಶದ ಇತರೆ ಅಂಚೆ ಕಚೇರಿಗಳಿಗೂ ವಿಸ್ತರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
(ಏಜೆನ್ಸೀಸ್)


Click it and Unblock the Notifications








