ಏಪ್ರಿಲ್ ನಿಂದ ಮಾರುತಿ 800 ಉತ್ಪಾದನೆ ಇಲ್ಲ

ಯುರೋ 4 ವಾಯುಮಾಲಿನ್ಯ ನಿಯಂತ್ರಣಾ ಮಾನದಂಡಕ್ಕೆ ಸರಿಹೊಂದುವಂತೆ ಮಾರುತಿ 800 ಕಾರನ್ನು ಮೇಲ್ದರ್ಜೆಗೆ ಏರಿಸುವ ಯೋಜನೆ ಇಲ್ಲದ ಕಾರಣ ಕಾರು ಉತ್ಪಾದನೆಯನ್ನು ನಿಲ್ಲಿಸುತ್ತಿರುವುದಾಗಿ ಮಾರುತಿ ಸುಜುಕಿ ಇಂಡಿಯಾದ ಚೇರ್ಮನ್ ಆರ್ ಸಿ ಭಾರ್ಗವ ಅವರು ಶುಕ್ರವಾರ ತಿಳಿಸಿದ್ದಾರೆ.
1983ರಲ್ಲಿ ಕಣ್ಣೆತೆರೆದಿದ್ದ ಮಾರುತಿ 800 ಕಾರು 2010 ಏಪ್ರಿಲ್ ನಲ್ಲಿ ಕಣ್ಣು ಮುಚ್ಚಲಿದೆ. ಮಾರುತಿ 800, ಅಲ್ಟೋ, ವ್ಯಾಗನ್ ಆರ್, ಎಸ್ಟಿಲೋ, ಎಸ್ಟಾರ್, ರಿಟ್ಜ್ ಮತ್ತು ಸ್ವಿಫ್ಟ್ ಮಾಡೆಲ್ ಕಾರುಗಳನ್ನು ಉತ್ಪಾದಿಸುತ್ತಿದ್ದ ಮಾರುತಿ ಸುಜುಕಿ ಯುರೋ 4 ವಾಯುಮಾಲಿನ್ಯ ನಿಯಂತ್ರಣಾ ಮಾನದಂಡವನ್ನು ಮುಟ್ಟದ ಕೆಲ ಮಾಡೆಲ್ ಗಳ ಉತ್ಪಾದನೆಯನ್ನು ಕ್ರಮೇಣ ನಿಲ್ಲಿಸಲಿದೆ.
ಬೆಂಗಳೂರು, ಮುಂಬೈ, ಕೊಲ್ಕತಾ, ದೆಹಲಿ, ಚೆನ್ನೈ, ಹೈದರಾಬಾದ್, ಪುಣೆ, ಕಾನ್ಪುರ, ಅಹ್ಮದಾಬಾದ್, ಸೂರತ್ ಮತ್ತು ಆಗ್ರಾ ಮುಂತಾದ ನಗರಗಳಲ್ಲಿ ಏಪ್ರಿಲ್ ನಿಂದ ಪರಿಸರ ಸ್ನೇಹಿ ಭಾರತ್ ಸ್ಟೇಜ್ 4 ಮಾನದಂಡ ಚಲಾವಣೆಗೆ ಬರಲಿದೆ. ಮುಂದಿನ ವರ್ಷದಲ್ಲಿ ಉಳಿದ ನಗರಗಳಲ್ಲಿಯೂ ಈ ಮಾನದಂಡ ಅನ್ವಯವಾಗಲಿದೆ. ನಂತರ ಉಳಿದ ನಗರಗಳಲ್ಲಿಯೂ ಹಳೆ ಮಾಡೆಲ್ ಕಾರು ತಯಾರಿಕೆಗೆ ಬ್ರೇಕ್ ಬೀಳಲಿದೆ.
Pre-order Now at a Special Price. - The Maruti Story by R C. Bhargava @ 30% discount


Click it and Unblock the Notifications