ಮಾರುತಿಗೆ ಉತ್ಪಾದನೆ ಹೆಚ್ಚಳದ ಗುರಿ

ಹೈದರಾಬಾದ್ ನಲ್ಲಿ ಸುದ್ದ್ದಿಗಾರರೊಂದಿಗೆ ಮಾತನಾಡಿದ ಮಾರುತಿಯ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಐ.ವಿ ರಾವ್ ಅವರು ಕಂಪೆನಿಯ ಮನೇಸರ್ ಘಟಕದ ಉತ್ಪಾದನೆಯನ್ನು 2,50,000 ಘಟಕಗಳಷ್ಟು ಹೆಚ್ಚಿಸುವ ಕಾರ್ಯ 2012 ರಲ್ಲಿ ಪೂರ್ಣಗೊಳ್ಳಲಿದೆ ಎಂದರು. ಮಾರುತಿಯ ಸ್ವಿಫ್ಟ್ ಮತ್ತು ಸ್ವಿಫ್ಟ್ ಡಿ ಸೈರ್ ಕಾರುಗಳನ್ನು ಕೊಳ್ಳಲು ಗ್ರಾಹಕರು ಬಹಳ ದಿನಗಳ ಕಾಯಬೇಕಾಗುವುದು ಎಂದ ಅವರು ಉದ್ಯಮ ತಜ್ಞರ ಪ್ರಕಾರ ಈ ವರ್ಷ ಕಾರು ಮಾರುಕಟ್ಟೆ ಶೇ.10-12 ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದರು.
ಈ ಪ್ರಕಾರ ಕಂಪೆನಿ ಕನಿಷ್ಠ 1,00,000 ಕಾರುಗಳನ್ನು ಹೆಚ್ಚುವರಿಯಾಗಿ ಉತ್ಪಾದಿಸಬೇಕಿದೆ ಎಂದರು. ಮಾರುತಿಯ ಗುರ್ ಗಾಂವ್ ಮತ್ತು ಮನೇಸರ್ ನ ಎರಡೂ ಘಟಕಗಳು ವಾರ್ಷಿಕ 8 ಲಕ್ಷ ಕಾರು ತಯಾರಿಸುವ ಸಾಮರ್ಥ್ಯ ಹೊಂದಿದ್ದು ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿವೆ ಎಂದು ಅವರು ಹೇಳಿದರು. ಕಳೆದ ಹಣಕಾಸು ವರ್ಷದಲ್ಲಿ ಮಾರುತಿ 1,40,000 ಕಾರುಗಳನ್ನು ಯೂರೋಪ್ ಗೆ ರಫ್ತು ಮಾಡಿದ್ದು ಈ ವರ್ಷವೂ ಅಷ್ಟೇ ಸಂಖ್ಯೆಯ ಕಾರುಗಳನ್ನು ರಫ್ತು ಮಾಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.


Click it and Unblock the Notifications








