ಏಪ್ರಿಲ್ ನಲ್ಲಿ ಮಾರುತಿ ಅಮೋಘ ಮಾರಾಟ

2009ರ ಏಪ್ರಿಲ್ ನಲ್ಲಿ 71,748 ವಾಹನಗಳನ್ನು ಮಾರಾಟವಾಗಿದ್ದವು. ದೇಶಿಯ ಮಾರುಕಟ್ಟೆಯಲ್ಲಿ 80,034 ಕಾರುಗಳನ್ನು ಮಾರಾಟ ಮಾಡಿದ್ದು ಕಳೆದ ಏಪ್ರಿಲ್ ನಲ್ಲಿ 64,857 ಕಾರುಗಳನ್ನು ಮಾರಾಟ ಮಾಡಿತ್ತು. ಕಂಪನಿಯ ರಫ್ತಿನಲ್ಲಿ ಕೂಡ ಶೇ. 89ರಷ್ಟು ಹೆಚ್ಚಳ ದಾಖಲಾಗಿದೆ. ಕಳೆದ ತಿಂಗಳು 13,024 ವಾಹನಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷದ ಏಪ್ರಿಲ್ ನಲ್ಲಿ 6891 ವಾಹನಗಳನ್ನು ರಫ್ತು ಮಾಡಲಾಗಿತ್ತು.
ಆದರೆ ಮಾರುತಿ 800 ವಾಹನಗಳ ಮಾರಾಟದಲ್ಲಿ ಮಾತ್ರ ಶೇ. 3.71ರಷ್ಟು ಕುಸಿತ ಕಂಡುಬಂದಿದೆ. ಅದರ ನಿರ್ಮಾಣ ನಿಲ್ಲಿಸಿದ್ದು ಮಾರಾಟದಲ್ಲಿ ಇಳಿಕೆಯಾಗಲು ಕಾರಣವಾಗಿದೆ. ಆಲ್ಟೊ, ವ್ಯಾಗನ್ ಆರ್, ಎಸ್ಟಿಲೋ, ಸ್ವಿಫ್ಟ್, ಏ ಸ್ಟಾರ್ ಮತ್ತು ರಿಟ್ಜ್ ಕಾರುಗಳ ಮಾರಾಟದಲ್ಲಿ ಶೇ.20.5ರಷ್ಟು ಹೆಚ್ಚಳವಾಗಿದ್ದು 56,416 ಕಾರುಗಳು ಮಾರಾಟವಾಗಿವೆ. 2009ರ ಏಪ್ರಿಲ್ ನಲ್ಲಿ ಈ ಮಾದರಿಯ 46,817 ಕಾರುಗಳು ಮಾರಾಟವಾಗಿದ್ದವು.
ಮಾರುತಿಯ ಪ್ರಯಾಣಿಕರ ವಾಹನಗಳ ಮಾರಾಟದಲ್ಲಿ ಶೇ 24.03ರಷ್ಟು ಏರಿಕೆ ದಾಖಲಾಗಿದ್ದು, 2010ರ ಏಪ್ರಿಲ್ ನಲ್ಲಿ 79,322 ವಾಹನಗಳು ಮಾರಾಟವಾಗಿದ್ದರೆ, 2009ರ ಏಪ್ರಿಲ್ ನಲ್ಲಿ 63,952 ವಾಹನಗಳು ಮಾರಾಟವಾಗಿದ್ದವು.


Click it and Unblock the Notifications








