ದಟ್ಸನ್ ರೆಡಿ ಗೊ ಸಣ್ಣ ಕಾರು ಆಗಮನಕ್ಕೆ ಸಿದ್ಧ; ನೀವು ರೆಡಿನಾ?
ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಕಾಂಪಾಕ್ಟ್ ಬಹು ಬಹಳಕೆಯ ವಾಹನಗಳನ್ನು ದೇಶಕ್ಕೆ ಪರಿಚಯಿಸಿರುವ ದಟ್ಸನ್ ಮಗದೊಂದು ಆಕರ್ಷಕ ಕ್ರಾಸೋವರ್ ಶೈಲಿಯ ಕಾರನ್ನು ಬಿಡುಗಡೆ ಮಾಡಲಿದೆ.
Also Read: ರೆನೊ ಕ್ವಿಡ್ ಚಾಲನಾ ವಿಮರ್ಶೆ ಪುಟ್ಟ ಕಾರಿನ ಹಿರಿಮೆ!
ಈಗಾಗಲೇ ಚರ್ಚೆಯಲ್ಲಿರುವ ರೆಡಿ ಗೊ ಅತಿ ಶೀಘ್ರದಲ್ಲೇ ದೇಶದ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆಯೇ ರೆಡಿ ಗೊ ಟೆಸ್ಟಿಂಗ್ ವೇಳೆ ಕ್ಯಾಮೆರಾ ಕಣ್ಣುಗಳಿಗೆ ಸೆರೆ ಸಿಕ್ಕಿರುವುದು ಮತ್ತಷ್ಟು ಕುತೂಹಲವನ್ನು ಎಡೆ ಮಾಡಿಕೊಟ್ಟಿದೆ.

ನಿಸ್ಸಾನ್‌ನ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್, ರೆನೊ ಕ್ವಿಡ್ ನಿರ್ಮಾಣವಾಗಿರುವ ಅದೇ ಸಿಎಂಎಫ್-ಎ ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣವಾಗುತ್ತಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ರೆನೊ ಕ್ವಿಡ್ ಬಿಡುಗಡೆಯಾದ ಬೆನ್ನಲ್ಲೇ ಭಾರಿ ಬೇಡಿಕೆ ಗಿಟ್ಟಿಸಿಕೊಂಡಿತ್ತು.

ಇದರಲ್ಲೂ ಕ್ವಿಡ್ ನಲ್ಲಿ ಬಳಕೆಯಾಗಿರುವುದಕ್ಕೆ ಸಮಾನವಾದ 800 ಸಿಸಿ ಎಂಜಿನ್ ಬಳಕೆಯಾಗಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ. ಇದು 72 ಎನ್ ಎಂ ತಿರುಗುಬಲದಲ್ಲಿ 54 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಸಂಸ್ಥೆಯು ನಿಕಟ ಭವಿಷ್ಯದಲ್ಲಿ 5 ಸ್ಪೀಡ್ ಎಎಂಟಿ ಆಯ್ಕೆಯನ್ನು ನೀಡುವ ಇರಾದೆಯನ್ನು ಹೊಂದಿದೆ.

ನೂತನ ರೆಡಿ ಗೊ ಸಹ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಮಾರುತಿ ಆಲ್ಟೊ 800 ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಈ ಮೂಲಕ ಗೊ ಹಾಗೂ ಗೊ ಪ್ಲಸ್ ಗೆ ಲಭ್ಯವಿರುವ ಕಳಪೆ ಮಾರಾಟಕ್ಕೆ ಉತ್ತೇಜನ ನೀಡುವ ಇರಾದೆಯಲ್ಲಿದೆ.

ದೆಹಲಿಯಲ್ಲಿ ಜನವರಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿರುವ ರೆಡಿ ಗೊ ತದಾ ಬಳಿಕ ಮಾರ್ಚ್ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸಲಿದೆ.

ಮೂರು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆ ಮಾಡುವ ಮೂಲಕ ದೇಶದ ಸಣ್ಣ ಕಾರು ವಿಭಾಗದಲ್ಲಿ ಹೊಸ ಹವಾ ಸೃಷ್ಟಿ ಮಾಡುವುದು ಸಂಸ್ಥೆಯ ಇರಾದೆಯಾಗಿದೆ. ಅಂತೆಯೇ ಇದರ ದಟ್ಸನ್ ಡಿ ಕಟ್ ಗ್ರಿಲ್ ಪ್ರಮುಖ ಆಕರ್ಷಣೆಯಾಗಲಿದೆ.

ಆದರೆ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಹಿಂದೆ ರೆಡಿ ಗೊ ಕಾನ್ಸೆಪ್ಟ್ ಕಾರಿನಲ್ಲಿ ಕಾಣಿಸಿಕೊಂಡಿರುವ ಎಲ್‌ಇಡಿ ಟೈಲ್ ಲೈಟ್ ಮತ್ತು ಎಲ್‌ಇಡಿ ರನ್ನಿಂಗ್ ಲೈಟ್ಸ್ ಗಳಂತಹ ವೈಶಿಷ್ಟ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ.

ಅವಿಶ್ವಸನೀಯ ಬೆಲೆಯಲ್ಲಿ ರೆನೊ ಕ್ವಿಡ್ ಬಿಡುಗಡೆ ಆಲ್ಟೊ ಸದ್ದಡಗಿತೇ ?


Click it and Unblock the Notifications








