ಸಂಚಲನ ಮೂಡಿಸಿದ ರೆನೊ ಕ್ವಿಡ್ ಎಂಟ್ರಿ; ಮಾರುತಿಗೆ ಟಕ್ಕರ್

Written By:

ದೇಶದ ವಾಹನೋದ್ಯಮದಲ್ಲಿ ಭಾರಿ ಸಂಚಲನ ಮೂಡಿಸಿರುವ ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ, ಹೊಚ್ಚ ಹೊಸ ಕಾರೊಂದನ್ನು ಅನಾವರಣಗೊಳಿಸಿದೆ.

ನೂತನ ರೆನೊ ಕ್ವಿಡ್ ಸಣ್ಣ ಕಾರು ದಶಕಗಳಿಂದಲೂ ದೇಶದ ರಸ್ತೆಯಲ್ಲಿ ಸದ್ದು ಮಾಡುತ್ತಿರುವ ಮಾರುತಿ ಸುಜುಕಿ ಆಲ್ಟೊ ಸೇರಿದಂತೆ ಹ್ಯುಂಡೈ ಸಣ್ಣ ಕಾರುಗಳಿಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ.

To Follow DriveSpark On Facebook, Click The Like Button
ಸಣ್ಣ ಕಾರು

ಸಣ್ಣ ಕಾರು

ಈ ಮೊದಲೇ ಸಣ್ಣ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ರೆನೊ, ಚೆನ್ನೈನಲ್ಲಿ ನಡೆದ ಭರ್ಜರಿ ಸಮಾರಂಭದಲ್ಲಿ ಕ್ವಿಡ್ ಸಣ್ಣ ಕಾರನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ.

ಬೆಲೆ

ಬೆಲೆ

ರೆನೊ ಕ್ವಿಡ್ ಸಣ್ಣ ಕಾರು ಅಂದಾಜು ಮೂರರಿಂದ ನಾಲ್ಕು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಎಂಟ್ರಿ ಲೆವೆಲ್ ಕಾರು

ಎಂಟ್ರಿ ಲೆವೆಲ್ ಕಾರು

ಭಾರತ ವಾಹನೋದ್ಯಮದಲ್ಲಿ ಎಂಟ್ರಿ ಲೆವೆಲ್ ಕಾರಿಗೆ ಅತಿ ಹೆಚ್ಚಿನ ಬೇಡಿಕೆಯಿದ್ದು, ಈ ಮೂಲಕ ಅತಿ ಹೆಚ್ಚು ಮಾರಾಟವಾಗುವ ಸಣ್ಣ ಕಾರು ವಿಭಾಗಕ್ಕೆ ರೆನೊ ಎಂಟ್ರಿ ಕೊಡುತ್ತಿದೆ.

ಎಂಜಿನ್

ಎಂಜಿನ್

ಸದ್ಯ ಎಂಜಿನ್ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ, 800 ಸಿಸಿ ಎಂಜಿನ್ ಆಳವಡಿಕೆಯಾಗುವ ಸಾಧ್ಯತೆಯಿದೆ.

ವಿಶೇಷತೆ

ವಿಶೇಷತೆ

  • ಎಸಿ,
  • 2 ಡಿನ್ ಆಡಿಯೋ ಸಿಸ್ಟಂ,
  • ಬ್ಲೂಟೂತ್,
  • ಪವರ್ ವಿಂಡೋ,
  • ಮೀಡಿಯಾ ನೇವಿಗೇಷನ್
  • ಏಳು ಇಂಚುಗಳ ಪರದೆ
ಬಿಡುಗಡೆ?

ಬಿಡುಗಡೆ?

ಈಗ ಜಾಗತಿಕ ಅನಾವರಣ ಕಂಡಿರುವ ರೆನೊ ಕ್ವಿಡ್ ಸಣ್ಣ ಕಾರು ನಿಕಟ ಭವಿಷ್ಯದಲ್ಲೇ ಬಿಡುಗಡೆಯಾಗಲಿದೆ. ಅಲ್ಲದೆ ಸಂಸ್ಥೆಯ ಅಧಿಕೃತ ಡೀಲರ್ ಶಿಪ್ ಗಳಲ್ಲಿ ಬುಕ್ಕಿಂಗ್ ಆರಂಭವಾಗಲಿದೆ.

ಆಕರ್ಷಕ ಕಾರು

ಆಕರ್ಷಕ ಕಾರು

ಆಟೋ ವಿಶ್ಲೇಷಕರ ಪ್ರಕಾರ ಒಂದು ಆಕರ್ಷಕ ಕಾರನ್ನು ನಿಗದಿತ ಬಜೆಟ್ ನೊಳಗೆ ಸಿದ್ಧಪಡಿಸುವಲ್ಲಿ ರೆನೊ ಯಶ ಕಂಡಿದ್ದು, ನಿಸ್ಸಂಶಯವಾಗಿಯೂ ದೇಶದ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಲಿದೆ.

ನಿಮ್ಮ ಅಭಿಮತವೇನು?

ನಿಮ್ಮ ಅಭಿಮತವೇನು?

ಅಷ್ಟಕ್ಕೂ ರೆನೊ ಕ್ವಿಡ್ ನಿಮ್ಮ ಮನಸೆಳೆಯಿತೇ? ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

English summary
Renault Kwid has been debuted today. This is the global unveiling of the French carmaker's entry level car. Renault managed to keep key specs and details as a top secret, although the internet had a lot of photos of the car being tested.
Story first published: Wednesday, May 20, 2015, 12:14 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark