ರೆನೊ ಕ್ವಿಡ್ ಶಕ್ತಿಶಾಲಿ ಆವೃತ್ತಿ 23 ಕೀ.ಮೀ. ಮೈಲೇಜ್ ಕೊಡುತ್ತಂತೆ!

Written By:

ಅತಿ ಶೀಘ್ರದಲ್ಲೇ ರೆನೊ ಕ್ವಿಡ್ ಒಂದು ಲೀಟರ್ ಶಕ್ತಿಶಾಲಿ ಆವೃತ್ತಿಯು ಬಿಡುಗಡೆಯಾಗಲಿದೆ. ವಾಹನ ಜಗತ್ತಿನಲ್ಲಿ ಹೊಸ ಕ್ವಿಡ್ ಬರಮಾಡಿಕೊಳ್ಳಲು ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತಿರುವಂತೆಯೇ ಅತ್ಯಂತ ಸಂತಸದಾಯಕ ಸುದ್ದಿಯೊಂದು ಹೊರಬದ್ದಿದೆ.

ವಾಹನ ಆಪ್ತ ವಲಯಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಹೊಸ ರೆನೊ ಕ್ವಿಡ್ ಒಂದು ಲೀಟರ್ ಆವೃತ್ತಿಯು ಸಹ ಪ್ರತಿ ಲೀಟರ್ ಗೆ 23.01 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರಲಿದೆ. ಇದು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಮಾರುತಿ ಆಲ್ಟೊಗೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.

To Follow DriveSpark On Facebook, Click The Like Button
ರೆನೊ ಕ್ವಿಡ್ ಶಕ್ತಿಶಾಲಿ ಆವೃತ್ತಿ 23 ಕೀ.ಮೀ. ಮೈಲೇಜ್ ಕೊಡುತ್ತಂತೆ!

ಸದ್ಯ ಮಾರುಕಟ್ಟೆಯಲ್ಲಿ ರೆನೊ ಕ್ವಿಡ್ 800 ಸಿಸಿ ಆವೃತ್ತಿಯು ಮಾರಾಟದಲ್ಲಿದ್ದು, ಅತಿ ಹೆಚ್ಚು ಬೇಡಿಕೆಯನ್ನು ಗಿಟ್ಟಿಸಿಕೊಂಡಿದೆ. ನೂತನ ಶಕ್ತಿಶಾಲಿ ಕ್ವಿಡ್ ಆವೃತ್ತಿಯು ಮುಂದಿನ ದಿನಗಳಲ್ಲಿ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಗೇರ್ ಬಾಕ್ಸ್ ಸಹ ಪಡೆಯಲಿದೆ.

ರೆನೊ ಕ್ವಿಡ್ ಶಕ್ತಿಶಾಲಿ ಆವೃತ್ತಿ 23 ಕೀ.ಮೀ. ಮೈಲೇಜ್ ಕೊಡುತ್ತಂತೆ!

ಹಾಗಿದ್ದರೂ ಮಾರುತಿ ಆಲ್ಟೊ ಕೆ10 ಮೈಲೇಜ್ ಗೆ (ಪ್ರತಿ ಲೀಟರ್ ಗೆ 24.07 ಕೀ.ಮೀ.) ಹೋಲಿಸಿದಾಗ ರೆನೊ ಕ್ವಿಡ್ ಇಂಧನ ಕ್ಷಮತೆ ಕೊಂಚ ಕಡಿಮೆಯನಿಸಿದೆ. ಆದರೂ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಇಯಾನ್ ಗಿಂತಲೂ ( ಪ್ರತಿ ಲೀಟರ್ ಗೆ 20.3 ಕೀ.ಮೀ.) ಸುಧಾರಣೆ ಕಂಡುಬಂದಿದೆ.

ರೆನೊ ಕ್ವಿಡ್ ಶಕ್ತಿಶಾಲಿ ಆವೃತ್ತಿ 23 ಕೀ.ಮೀ. ಮೈಲೇಜ್ ಕೊಡುತ್ತಂತೆ!

999 ಸಿಸಿ ತ್ರಿ ಸಿಲಿಂಡರ್ ಎಸ್ ಸಿಇ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರೆನೊ ಕ್ವಿಡ್ 91 ಎನ್ ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ರೆನೊ ಕ್ವಿಡ್ ಶಕ್ತಿಶಾಲಿ ಆವೃತ್ತಿ 23 ಕೀ.ಮೀ. ಮೈಲೇಜ್ ಕೊಡುತ್ತಂತೆ!

ರೆನೊ ಕ್ವಿಡ್ 1.0 ಮ್ಯಾನುವಲ್ ಆವೃತ್ತಿಯು ಆಗಸ್ಟ್ 22ರಂದು ಮಾರುಕಟ್ಟೆಗೆ ಪ್ರವೇಶಿಸಲಿದೆ. ಆಸಕ್ತ ಗ್ರಾಹಕರು ರೆನೊ ಡೀಲರ್ ಶಿಪ್ ಗೆ ತೆರಳಿ 10,000 ರು.ಗಳನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ತದಾ ಬಳಿಕ ಎಎಂಟಿ ಆವೃತ್ತಿಯು ಎಂಟ್ರಿ ಕೊಡಲಿದೆ.

ರೆನೊ ಕ್ವಿಡ್ ಶಕ್ತಿಶಾಲಿ ಆವೃತ್ತಿ 23 ಕೀ.ಮೀ. ಮೈಲೇಜ್ ಕೊಡುತ್ತಂತೆ!

ಹಗುರ ಭಾರದ ಚಾಸೀ ಒಳಗೊಂಡಿರುವ ರೆನೊ ಕ್ವಿಡ್ ಪ್ರತಿ ಟನ್ ಗೆ 97 ಪಿಎಸ್ 'ಪವರ್-ಟು-ವೇಟ್' ಅನುಪಾತವನ್ನು ಕಾಪಾಡಿಕೊಂಡಿದೆ. ತನ್ಮೂಲಕ ಬೆಸ್ಟ್ ಇನ್ ಕ್ಲಾಸ್ ಎನಿಸಿಕೊಂಡಿದೆ.

ರೆನೊ ಕ್ವಿಡ್ ಶಕ್ತಿಶಾಲಿ ಆವೃತ್ತಿ 23 ಕೀ.ಮೀ. ಮೈಲೇಜ್ ಕೊಡುತ್ತಂತೆ!

ರೆನೊ ಕ್ವಿಡ್ 1.0 ಆವೃತ್ತಿಯು ಆರ್ ಎಕ್ಸ್ ಟಿ ಮತ್ತು ಆರ್ ಎಕ್ಸ್ ಟಿ (ಐಚ್ಚಿಕ) ವೆರಿಯಂಟ್ ಗಳಲ್ಲಿ ಮಾರಾಟವಾಗಲಿದೆ. ಇನ್ನು ಈಗ ಮಾರಾಟದಲ್ಲಿರುವ 800 ಸಿಸಿ ಕ್ವಿಡ್ ಆವೃತ್ತಿಗೆ ಸಮಾನವಾದ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ.

ರೆನೊ ಕ್ವಿಡ್ ಶಕ್ತಿಶಾಲಿ ಆವೃತ್ತಿ 23 ಕೀ.ಮೀ. ಮೈಲೇಜ್ ಕೊಡುತ್ತಂತೆ!

ಇದರಲ್ಲಿ ಏಳು ಇಂಚುಗಳ ಮೀಡಿಯಾ ನೇವ್ ಟಚ್ ಸ್ಕ್ರೀನ್ ಸಿಸ್ಟಂ ಪ್ರಮುಖ ಆಕರ್ಷಣೆಯಾಗಲಿದೆ. ಹಾಗೆಯೇ ಚಾಲಕ ಬದಿಯ ಏರ್ ಬ್ಯಾಗ್ ಸೇವೆಯೂ ಇರುತ್ತದೆ. ಹಾಗಿದ್ದರೂ ಮುಂಭಾಗದ ಪ್ರಯಾಣಿಕ ಏರ್ ಬ್ಯಾಗ್ ಮತ್ತು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸದ್ಯಕ್ಕೆ ಸಿಗುವ ಸಾಧ್ಯತೆಗಳಿಲ್ಲ.

ರೆನೊ ಕ್ವಿಡ್ ಶಕ್ತಿಶಾಲಿ ಆವೃತ್ತಿ 23 ಕೀ.ಮೀ. ಮೈಲೇಜ್ ಕೊಡುತ್ತಂತೆ!

ಅಂತಿಮವಾಗಿ ಕಾರಿನ ಹೊರಮೈ ಸಹ 800 ಸಿಸಿ ಕ್ವಿಡ್ ಕಾರಿಗೆ ಸಮಾನವಾಗಿರಲಿದೆ. ಹಾಗಿದ್ದರೂ ಕಪ್ಪು ಮತ್ತು ಬಿಳುಪಿನ ರಂಗುರಂಗಿನ ಜೊತೆಗೆ ಬದಿಯಲ್ಲಿ 1.0 ಲೀಟರ್ ಚಿಹ್ನೆಯಿರಲಿದೆ.

English summary
Renault Kwid 1.0-Litre Engine To Deliver 23.01Km/l — Is Maruti Under Attack Again?
Story first published: Friday, August 19, 2016, 16:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark