ರೆನೊ ಕ್ವಿಡ್ 1.0 ಲೀಟರ್ ಶಕ್ತಿಶಾಲಿ ಆವೃತ್ತಿ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳೇನು?
800 ಸಿಸಿ ಎಂಜಿನ್ ಸಾಮರ್ಥ್ಯದ ಕ್ವಿಡ್ ಸಣ್ಣ ಹ್ಯಾಚ್ ಬ್ಯಾಕ್ ಕಾರಿಗೆ ಸಿಕ್ಕಿರುವ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ, ಭಾರತದಲ್ಲಿ ಅತಿ ನೂತನ ಒಂದು ಲೀಟರ್ ಎಂಜಿನ್ ಸಾಮರ್ಥ್ಯದ ಶಕ್ತಿಶಾಲಿ ಕ್ವಿಡ್ ಕಾರನ್ನು ಬಿಡುಗಡೆಗೊಳಿಸಿದೆ.
ಪರಿಚಯಾತ್ಮಕ ಬೆಲೆ: 3,82,776 ರುಪಾಯಿ

ಗಮನಿಸಬೇಕಾದ ಅಂಶಗಳು
- ಈಗ ಮಾರುಕಟ್ಟೆಯಲ್ಲಿರುವ ಕ್ವಿಡ್ ಆವೃತ್ತಿಗಿಂತಲೂ ಕೇವಲ 22,000 ರು.ಗಳಷ್ಟೇ ದುಬಾರಿ,
- ಎರಡು ವೆರಿಯಂಟ್ ಗಳಲ್ಲಿ ಲಭ್ಯ,
- 1.0 ಲೀಟರ್ ಸ್ಮಾರ್ಟ್ ಕಂಟ್ರೋಲ್ ಎಫಿಷಿಯನ್ಸಿ (ಎಸ್‌ಸಿಇ) ಎಂಜಿನ್
ಭಾರತದಲ್ಲಿ ತನ್ನ ಬದ್ಧತೆಯನ್ನು ಮುಂದುವರಿಸಿರುವ ರೆನೊ ಸಂಸ್ಥೆಯೀಗ ಬೆಸ್ಟ್ ಇನ್ ಕ್ಲಾಸ್ ನಿರ್ವಹಣೆಯ ಕ್ವಿಡ್ 1.0 ಲೀಟರ್ ಎಸ್ ಸಿಇ ಎಂಜಿನ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಇದು ತನ್ನ ಉದ್ದ, ಪವರ್-ಟು-ವೇಟ್ ಅನುಪಾತ, ಗ್ರೌಂಡ್ ಕ್ಲಿಯರನ್ಸ್, ಢಿಕ್ಕಿ ಜಾಗ ಮತ್ತು ತಂತ್ರಜ್ಞಾನಗಳಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದೆ.

ಫಸ್ಟ್ ಇನ್ ಕ್ಲಾಸ್ ವೈಶಿಷ್ಟ್ಯಗಳು
ಎಸ್ ಯುವಿ ಪ್ರೇರಿತ ವಿನ್ಯಾಸ,
- 7 ಇಂಚುಗಳ ಮೀಡಿಯಾ ನೇವ್ ಸಿಸ್ಟಂ,
- ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,
- ಒನ್ ಟಚ್ ಲೇನ್ ಚೇಂಜ್ ಇಂಡಿಕೇಟರ್,
- ರೆಡಿಯೋ ಸ್ಪೀಡ್ ಡಿಪೆಂಡೆಂಟ್ ವೊಲ್ಯೂಮ್ ಕಂಟ್ರೋಲ್,
- ಪ್ರೊ-ಸೆನ್ಸ್ ಸೀಟ್ ಬೆಲ್ಟ್ ಪ್ರಿಟೆನ್ಷನರ್ ಜೊತೆ ಲೋಡ್ ಲಿಮಿಟರ್.
ಬೆಸ್ಟ್ ಇನ್ ಕ್ಲಾಸ್ ವೈಶಿಷ್ಟ್ಯಗಳು
- 300 ಲೀಟರ್ ಗಳ ಡಿಕ್ಕಿ ಜಾಗ,
- ಎರ್ಗೊ ಸ್ಮಾರ್ಟ್ ಕ್ಯಾಬಿನ್,
- ಬಹು ಸ್ಟೋರೆಜ್ ಜಾಗ,
- ಮೇಲಿನ ಸೆಗ್ಮೆಂಟ್ ಬಾಡಿ ಆಯಾಮ,
- ಇಂಟಿರಿಯರ್ ಜಾಗ,
- ಸರ್ವೀಸ್ ಪಾರ್ಟ್ ನಿರ್ವಹಣಾ ವೆಚ್ಚ,
- ಚಾಲನೆ ಮತ್ತು ಹ್ಯಾಂಡ್ಲಿಂಗ್,
- ವೈಯಕ್ತಿಕರಣಗೊಳಿಸುವ ಆಯ್ಕೆಗಳು

ಕಳೆದ ವರ್ಷ ಮಾರುಕಟ್ಟೆಗೆ ಪ್ರವೇಶಿಸಿರುವ ರೆನೊ ಕ್ವಿಡ್ ಗೆ ಈಗಾಗಲೇ 1,65,000 ಬುಕ್ಕಿಂಗ್ ದಾಖಲಾಗಿದೆ. ಅಲ್ಲದೆ ಶೇಕಡಾ 98ರಷ್ಟು ನಿರ್ಮಾಣ ಪ್ರಕ್ರಿಯೆಯನ್ನು ಸ್ಥಳೀಯವಾಗಿಸಿರುವುದು ವೆಚ್ಚ ಕಡಿತಕ್ಕೆ ನೆರವಾಗಿದೆ. ಹೊಸ ಕ್ವಿಡ್ ಡೋರ್ ಗಳಲ್ಲಿ ಸ್ಪೀಡ್-ಸ್ಪೋರ್ಟ್ ಡಿಸೈನರ್ ಗ್ರಾಫಿಕ್ಸ್ ಮತ್ತು ಹೊರಗಿನ ರಿಯರ್ ವ್ಯೂ ಮಿರರ್ ಗಳಲ್ಲಿ ಟು ಟೋನ್ ಬಣ್ಣದ ಆಯ್ಕೆಯು ಇರುತ್ತದೆ.
ಸುರಕ್ಷತೆ
ಸುರಕ್ಷತೆಯಲ್ಲೂ ಯಾವುದೇ ರಾಜಿಗೂ ತಯಾರಾಗದ ರೆನೊ ಕ್ವಿಡ್ ಐಚ್ಛಿಕ ಚಾಲಕ ಏರ್ ಬ್ಯಾಗ್ ನೀಡುತ್ತದೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ ಈ ವಿಭಾಗದಲ್ಲಿ ಪ್ರೊ-ಸೆನ್ಸ್ ಸೀಟ್ ಬೆಲ್ಟ್ ಪ್ರಿಟೆನ್ಷನರ್ ಜೊತೆ ಲೋಡ್ ಲಿಮಿಟರ್ ಸುರಕ್ಷತೆಯೂ ಇರುತ್ತದೆ.
ವೆರಿಯಂಟ್ ಮತ್ತು ಬೆಲೆ ಮಾಹಿತಿ
- ಆರ್ ಎಕ್ಸ್ ಟಿ 1.0: 3,82,776 ರು.
- ಆರ್ ಎಕ್ಸ್ ಟಿ 1.0 (ಐಚ್ಛಿಕ): 3,95,776 ರು.
ತಾಂತ್ರಿಕತೆಗಳು (ಎಂಎಂ)
ಉದ್ದ: 3679
ಅಗಲ: 1579
ಎತ್ತರ: 1478
ಚಕ್ರಾಂತರ: 2422
ಎಂಜಿನ್ ಸಾಮರ್ಥ್ಯ: 1.0 ಲೀಟರ್
ಸಂರಚನೆ: 3 ಸಿಲಿಂಡರ್, ಪ್ರತಿ ಸಿಲಿಂಡರ್ ಗೆ ಡಬಲ್ ಓವರ್ ಹೆಡ್ ಕಾಮ್ ಶಾಫ್ಟ್ (ಡಿಒಎಚ್ ಸಿ) 4 ವಾಲ್ವ್
ಪವರ್: 68 ಅಶ್ವಶಕ್ತಿ @5500 ಆರ್ ಪಿಎಂ
ತಿರುಗುಬಲ: 91 ಎನ್ ಎಂ @ 4250 ಆರ್ ಪಿಎಂ
ಚಕ್ರದ ಗಾತ್ರ: 155/80 13

ಮುಂಭಾಗದ ಸಸ್ಪೆನ್ಷನ್: ಮ್ಯಾಕ್ ಫೆರ್ಸನ್ ಸ್ಟ್ರಟ್ ಜೊತೆ ಲೋವರ್ ಟ್ರಾವರ್ಸಿಂಗ್ ಲಿಂಕ್
ಹಿಂಭಾಗದ ಸಸ್ಪೆನ್ಷನ್: ಟ್ವಿಸ್ಟ್ ಬೀಮ್ ಸಸ್ಪೆನ್ಷನ್ ಜೊತೆ ಕಾಯಿಲ್ ಸ್ಪ್ರಿಂಗ್
ಡಿಕ್ಕಿ ಜಾಗ: 300 ಲೀಟರ್, ಹಿಂಭಾಗದ ಸೀಟು ಮಡಚಿದಾಗ 1115 ಲೀಟರ್
ಇಂಧನ ಟ್ಯಾಂಕ್ ಸಾಮರ್ಥ್ಯ: 28 ಲೀಟರ್
ವಿನ್ಯಾಸ
- ವಿಶಿಷ್ಟ ಎಸ್ ಯುವಿ ಶೈಲಿ,
- ದಿಟ್ಟ ಮತ್ತು ರಚನಾತ್ಮಕ ಫ್ರಂಟ್ ಗ್ರಿಲ್,
- ಸಿ ಆಕಾರದ ರೆನೊ ಲೈಟಿಂಗ್,
- ಡ್ಯುಯಲ್ ಟೋನ್ ಬಂಪರ್,
- ಅತ್ಯುತ್ತಮ ರಸ್ತೆ ಸಾನಿಧ್ಯ
ನಾವೀನ್ಯತೆ
- ಏಳು ಇಂಚುಗಳ ಟಚ್ ಸ್ಕ್ರೀನ್ ಮೀಡಿಯಾ ನೇವ್ ಸಿಸ್ಟಂ,
- ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,
- ರಿಮೋಟ್ ಕೀಲೆಸ್ ಎಂಟ್ರಿ ಜೊತೆ ಸೆಂಟ್ರಲ್ ಲಾಕಿಂಗ್,
- ಒನ್ ಟಚ್ ಲೇನ್ ಚೇಂಜ್ ಇಂಡಿಕೇಟರ್,
- ಫ್ರಂಟ್ ಫಾಗ್ ಲ್ಯಾಂಪ್
ವಾರಂಟಿ: 50,000 ಕೀ.ಮೀ./2 ವರ್ಷಗಳ ವಾರಂಟಿ. ಇದನ್ನು ನಾಲ್ಕು ವರ್ಷ ಅಥವಾ 80,000 ಕೀ.ಮೀ. ವರೆಗೆ ವರ್ಧಿಸುವ ಅವಕಾಶ. ಇದರ ಜೊತೆಗೆ ಎರಡು ವರ್ಷಗಳ ರೋಡ್ ಸೈಡ್ ಅಸಿಸ್ಟನ್ಸ್ ಸೇವೆಯೂ ಲಭ್ಯವಿರುತ್ತದೆ.


Click it and Unblock the Notifications

























































