ದೇಶಿ ಕಾರು, ಬೈಕುಗಳಿಗೆ ಸುಗ್ಗಿ ಕಾಲ

ಏಪ್ರಿಲ್ ನಲ್ಲಿ ಮೋಟಾರ್ ಸೈಕಲ್ ಗಳ ಮಾರಾಟದಲ್ಲಿ ಶೇ.16.67 ಏರಿಕೆ ದಾಖಲಾಗಿದ್ದು ಒಟ್ಟು 6,56,119ಬೈಕ್ ಗಳು ಮಾರಾಟವಾಗಿದೆ. ಕಳೆದ ವರ್ಷ ಇದೇ ಆವಧಿಯಲ್ಲಿ 5,62,349 ಬೈಕ್ ಗಳು ಮಾರಾಟವಾಗಿದ್ದವು.
ಒಟ್ಟು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.22.06 ಏರಿಕೆ ದಾಖಲಾಗಿದೆ. ಏಪ್ರಿಲ್ ನಲ್ಲಿ 8,55,670 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದರೆ, 2009 ರ ಏಪ್ರಿಲ್ ನಲ್ಲಿ 7,00,987 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ 64.49 ಏರಿಕೆ ದಾಖಲಾಗಿದ್ದು, 49,086 ವಾಹನಗಳು ಮಾರಾಟವಾಗಿದೆ. ಕಳೆದ ಏಪ್ರಿಲ್ ನಲ್ಲಿ 29,842 ವಾಹನಗಳು ಮಾರಾಟವಾಗಿದ್ದವು ಎಂದು ಅಂಕಿ ಅಂಶಗಳು ತಿಳಿಸುತ್ತವೆ.


Click it and Unblock the Notifications








