ರೇವಾ ಎಲೆಕ್ಟ್ರಿಕ್ ಕಾರು ಕಂಪನಿ ಮಾರಾಟ ?

ಕ್ಯಾಲಿಫೋರ್ನಿಯಾದ ಎಇವಿ ಎಲ್ಎಲ್ ಸಿ, ಗ್ಲೋಬಲ್ ಎನ್ವಿರಾನ್ ಮೆಂಟ್ ಫಂಡ್ ಮತ್ತು ಡ್ರಾಪರ್ ಫಿಶರ್ ಜುರ್ವೆಸ್ಟನ್ ಸುಮಾರು 457 ಕೋಟಿ ರೂಪಾಯಿಯ ಪ್ರವರ್ತಕರ ಪಾಲನ್ನು ಖರೀದಿಸಲು ಸಮೀಪದಲ್ಲಿವೆ ಎನ್ನಲಾಗಿದೆ. ವಿಶ್ವದ ಉತ್ತಮ ವಿದ್ಯುತ್ ಚಾಲಿತ ಕಾರ್ ಎಂದು ಗುರುತಿಸಲ್ಪಟ್ಟಿರುವ ರೇವಾ 24 ದೇಶಗಳಲ್ಲಿ ಮಾರಾಟವಾಗುತ್ತಿದೆ. 3000ಕ್ಕಿಂತ ಅಧಿಕ ವಾಹನಗಳು ರಸ್ತೆಯಲ್ಲಿವೆ. ಮುಂಬೈ ಮೂಲದ ಮಹೀಂದ್ರಾ ಹಾಗೂ ಮಹೀಂದ್ರ ಕಂಪನಿ ಕೂಡ ರೇವಾ ಕಂಪನಿ ಖರೀದಿಯ ಇಚ್ಛೆ ವ್ಯಕ್ತಪಡಿಸಿದೆ.
ಇದರ ವ್ಯವಹಾರಿಕ ಮಾಡೆಲ್ ನಲ್ಲಿ ವಾಹನದ ವಿನ್ಯಾಸ, ಅಭಿವೃದ್ದಿ ಮತ್ತು ತಯಾರಿಕೆ, ತಂತ್ರಜ್ಞಾನ ಪರವಾನಗಿ ಹಾಗೂ ವಾಹನ ತಯಾರಿಕೆಯನ್ನು ಒಳಗೊಂಡಿದೆ. ಕಂಪೆನಿ ಕಳೆದ ವರ್ಷ ಜನರಲ್ ಮೋಟಾರ್‍ಸ್(ಭಾರತ) ನೊಂದಿಗೆ ಸಹಯೋಗ ಒಪ್ಪಂದ ಮಾಡಿಕೊಂಡಿದ್ದು ಭಾರತೀಯ ಮಾರುಕಟ್ಟೆಗೆ ವಿದ್ಯುತ್ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದೆ. ಜನರಲ್ ಮೋಟಾರ್ಸ್ ನ ಸ್ಪಾರ್ಕ್ ಕಾರಿನ ವಿದ್ಯುತ್ ಚಾಲಿತ ಆವೃತ್ತಿಯನ್ನು ಎರಡೂ ಕಂಪೆನಿಗಳು ಈ ವರ್ಷಾಂತ್ಯದೊಳಗಾಗಿ ತಯಾರಿಸಲಿವೆ.


Click it and Unblock the Notifications








