2016 ಜುಲೈ ಮಾರಾಟ; ಹೀರೊ, ಹೋಂಡಾ ಶೈನಿಂಗ್

By Nagaraja

2016ನೇ ಸಾಲಿನ ಮೊದಲಾರ್ಧ ಕಳೆದಾಗ ಕಾರುಗಿಂತಲೂ ದ್ವಿಚಕ್ರ ವಾಹನಗಳೇ ಮಾರಾಟದಲ್ಲಿ ಧೂಳೆಬ್ಬಿಸುತ್ತಿದೆ. ಮುಂಬರುವ ಹಬ್ಬದ ಆವೃತ್ತಿಯಲ್ಲಿ ಬೈಕ್ ಹಾಗೂ ಸ್ಕೂಟರ್ ಗಳಿಗೆ ಇದಕ್ಕಿಂತಲೂ ಹೆಚ್ಚು ಬೇಡಿಕೆ ಕಂಡುಬರುವ ನಿರೀಕ್ಷೆಯಿದೆ.

ಪ್ರಸ್ತುತ ಲೇಖನದಲ್ಲಿ 2016 ಜುಲೈ ತಿಂಗಳಲ್ಲಿ ಧನಾತ್ಮಕ ಮಾರಾಟ ಏರುಗತಿ ಸಾಧಿಸಿರುವ ನಾಲ್ಕು ಪ್ರಮುಖ ವಾಹನ ಸಂಸ್ಥೆಗಳ ಬಗ್ಗೆ ವಿವರವನ್ನು ಕೊಡುವ ಪ್ರಯತ್ನವನ್ನು ಮಾಡಲಿದ್ದೇವೆ. ಪ್ರಸ್ತುತ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಸಂಸ್ಥೆಯು ಗಳಿಸಿರುವ ಮಾರಾಟ ಅಂಕಿಅಂಶಗಳನ್ನು ಪರಿಶೀಲಿಸಲು ಮರೆಯದಿರಿ.

ಹೀರೊ ಮೊಟೊಕಾರ್ಪ್

ಹೀರೊ ಮೊಟೊಕಾರ್ಪ್

ಈಗಷ್ಟೇ ಆಕರ್ಷಕ ಐಸ್ಮಾರ್ಟ್ 110 ಬೈಕ್ ಬಿಡುಗಡೆ ಮಾಡಿರುವ ದೇಶದ ಅತಿ ದೊಡ್ಡ ಹೀರೊ ಮೊಟೊಕಾರ್ಪ್ 2016 ಜುಲೈ ತಿಂಗಳಲ್ಲಿ ಒಟ್ಟು 5,32,113 ಯುನಿಟ್ ಗಳ ಮಾರಾಟವನ್ನು ಕಂಡುಕೊಂಡಿದೆ. ತನ್ಮೂಲಕ ಶೇಕಡಾ 9.13 ಮಾರಾಟ ಏರುಗತಿಯನ್ನು ಸಾಧಿಸಿದೆ. ಸಂಸ್ಥೆಯು ಕಳೆದ ವರ್ಷ ಇದೇ ಅವಧಿಯಲ್ಲಿ 4,87,580 ಯುನಿಟ್ ಗಳ ಮಾರಾಟವನ್ನಷ್ಟೇ ದಾಖಲಿಸಿತ್ತು.

ರಾಯಲ್ ಎನ್ ಫೀಲ್ಡ್

ರಾಯಲ್ ಎನ್ ಫೀಲ್ಡ್

ಕಳೆದ ವರ್ಷ 39,867 ಯುನಿಟ್ ಗಳ ಮಾರಾಟ ಕಂಡುಕೊಂಡಿರುವ ರಾಯಲ್ ಎನ್ ಫೀಲ್ಡ್ 2016 ಜುಲೈ ತಿಂಗಳಲ್ಲಿ 52,128 ಯುನಿಟ್ ಗಳ ಮಾರಾಟ ದಾಖಲಿಸುವ ಮೂಲಕ ಶೇಕಡಾ 31ರಷ್ಟು ಮಾರಾಟ ಏರುಗುತಿ ದಾಖಲಿಸಿದೆ. 1250 ಯುನಿಟ್ ಗಳಷ್ಟು ರಫ್ತು ಮಾಡಿರುವ ಎನ್ ಫೀಲ್ಡ್ ರಫ್ತು ಮಾರಾಟದಲ್ಲು ಶೇಕಡಾ 40ರಷ್ಟು ಏರಿಕೆ ಕಂಡಿದೆ.

ಹೋಂಡಾ

ಹೋಂಡಾ

ಮಗದೊಂದು ಮೈಲುಗಲ್ಲನ್ನು ಸ್ಥಾಪಿಸಿರುವ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು 2016 ಜುಲೈ ತಿಂಗಳಲ್ಲಿ ಒಟ್ಟು 4,53,844 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ. 2015ನೇ ಸಾಲಿನ ಇದೇ ಅವಧಿಯಲ್ಲಿ 3,09,144 ಯುನಿಟ್ ಗಳ ಮಾರಾಟ ದಾಖಲಿಸಿರುವ ಹೋಂಡಾ, ಶೇಕಡಾ 17ರಷ್ಟು ಮಾರಾಟ ಏರುಗತಿ ಕಂಡಿದೆ. ಈ ಮೂಲಕ ತನ್ನದೇ ದಾಖಲೆಯನ್ನು ಅಳಿಸಿ ಹಾಕಿದೆ.

ಯಮಹಾ

ಯಮಹಾ

ಇಂಡಿಯಾ ಯಮಹಾ ಮೋಟಾರು ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಸಹ ಶೇಕಡಾ 12ರಷ್ಟು ಮಾರಾಟ ಏರುಗತಿಯನ್ನು ದಾಖಲಿಸಿದೆ. ಕಳೆದ ಸಾಲಿನಲ್ಲಿ 58,477 ಯುನಿಟ್ ಗಳಷ್ಟು ಮಾರಾಟ ಕಂಡಿರುವ ಯಮಹಾ ಈ ವರ್ಷದಲ್ಲಿ ಒಟ್ಟು 65,244 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ.

More from DriveSpark

Article Published On: Tuesday, August 2, 2016, 13:48 [IST]
English summary
Hero, Honda, Royal enfield Sets Sales growth in July 2016
Read more on ಮಾರಾಟ sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+