ರೇವಾ ಬಿಟ್ಟ ಮೇಲೆ ಜಿಎಂ ನಿಂದ ಸ್ವಂತ ಕಾರು

ಕಳೆದ ವರ್ಷ ಜನರಲ್ ಮೋಟಾರ್ಸ್ ಇಂಡಿಯಾ ಹಾಗೂ ಶಾಂಘೈ ಆಟೋಮೋಟಿವ್(SAIC) ಶೇ.50:50 ಅನುಪಾತದಲ್ಲಿ ಕಂಪೆನಿಯನ್ನು ಸ್ಥಾಪಿಸಿದ್ದು ಗುಜರಾತ್ ನ ಹಲೋಲ್ ನ ಲಘು ವಾಣಿಜ್ಯ ವಾಹನಗಳನ್ನು ತಯಾರಿಸಲಿದೆ. ಚೀನಾದ ಕಂಪೆನಿಯ ಸಹಯೋಗದಿಂದ ಜನರಲ್ ಮೋಟಾರ್ಸ್ ಇಂಡಿಯಾ ವಿಶಾಲ ಶ್ರೇಣಿಯ ಚೀನಾ ವಾಹನಗಳ ಅಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ ಎನ್ನಲಾಗಿದೆ.
ಚೀನಾದ ಪ್ರಯಾಣಿಕರ ಕಾರುಗಳನ್ನು ಭಾರತದಲ್ಲಿ ಚವರ್ಲೆ ಬ್ರಾಂಡ್ ನಲ್ಲಿ ಮಾರಾಟ ಮಾಡಲಾಗುವುದು ಮತ್ತು ಒಂದು ಟನ್ ಸಾಮರ್ಥ್ಯದ ಲಘು ವಾಣಿಜ್ಯ ವಾಹನಗಳಿಗೆ ಬ್ರಾಂಡ್ ನ್ನು ಇನ್ನು ಅಂತಿಮಗೊಳಿಸಿಲ್ಲ ಎಂದು ಜನರಲ್ ಮೋಟಾರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಾಲ್ ಸಿಮ್ ತಿಳಿಸಿದರು.
ಪ್ರತಿ ವಾಹನವನ್ನು ತಯಾರಿಸಲು ಕಂಪೆನಿಗೆ ಯಂತ್ರೋಪಕರಣಗಳಿಗೆ 50 ಮಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದೂ ಅವರು ಹೇಳಿದರು. ಕಂಪೆನಿಯ ಹಲೋಲ್ ಕಾರ್ಖಾನೆಯಲ್ಲಿ ವಾರ್ಷಿಕ 85,000 ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು ಇಲ್ಲಿ ತಯಾರಾದ ವಾಹನಗಳನ್ನು ಅಮೆರಿಕಾ, ಆಫ್ರಿಕಾ ಮತ್ತಿತರ ದೇಶಗಳಿಗೆ ರಫ್ತು ಮಾಡಲಾಗುವುದು ಎಂದರು . ಜನರಲ್ ಮೋಟಾರ್ಸ್ ಭಾರತದಲ್ಲಿ ಟವೇರ, ಎವೊ, ಆಪ್ಟ್ರಾ, ಕ್ಯಾಪ್ಟಿವಾ ವಾಹನಗಳನ್ನು ತಯಾರಿಸುತ್ತಿದೆ.


Click it and Unblock the Notifications








