ಪರಿಸರ ಸ್ನೇಹಿಯಾದ ಮಾರುತಿ ಅಲ್ಟೋ

ಏನೇನು ಬದಲಾವಣೆ: BS-IV ವಾಯು ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಹೊಂದಿರು 800 ಸಿಸಿ ಪೆಟ್ರೋಲ್ ಇಂಜಿನ್ ಬದಲಿಗೆ1000 ಸಿಸಿ K ಶ್ರೇಣಿಯ ಇಂಜಿನ್ ಗಳನ್ನು ಅಳವಡಿಸಲಾಗಿದೆ. A ಸ್ಟಾರ್ ಹಾಗೂ ಎಸ್ಟಿಲೋ ಕಾರುಗಳು ಕೂಡಾ ಇಷ್ಟೇ ಸಾಮರ್ಥ್ಯಇಂಜಿನ್ ಹೊಂದಿವೆ. ಬೆಲೆ ಸುಮಾರು 2.29 ಲಕ್ಷ ದಿಂದ 2.8 ಲಕ್ಷ( ನವದೆಹಲಿ ಷೋ ರೂಂ ಬೆಲೆ)
ಕೆ ಸರಣಿಯ ಇಂಜಿನ್ ಗಳನ್ನು ಈಗಾಗಲೇ ಎಸ್ಟಿಲೋ, ವಾಗನ್ ಆರ್, ಎ ಸ್ಟಾರ್, ಸ್ವಿಫ್ಟ್ ಮುಂತಾದ ಕಾರುಗಳಿಗೆ ಅಳವಡಿಸಿ ಯಶಸ್ ಕಾಣಲಾಗಿದೆ. ಮಾರುತಿ ಉತ್ಪದನಾ ಸಾಮರ್ಥ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮೇ ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ಕಾರುಗಳ ಮಾರಾಟ ಕಂಡಿದೆ.
ಮಾರುತಿ ಆಲ್ಟೋ ತಿಂಗಳಿಗೆ ಸುಮಾರು 20 ಸಾವಿರ ಕಾರುಗಳು ಮಾರಾಟವಾಗುತ್ತಿದೆ. ಈ ಮುಂಚೆ ಮಾರುತಿ 800 ಸಂಪಾದಿಸಿದ್ದ ಅತಿ ಹೆಚ್ಚು ಮಾರಾಟವಾಗುವ ಸಣ್ಣಕಾರು ಎಂಬ ಬಿರುದನ್ನು ಆಲ್ಟೋ ಕಸಿದು ಕೊಂಡಿದೆ. ಈವರೆಗೂ ಸುಮಾರು 13.5 ಲಕ್ಷ ಕಾರುಗಳು ರಸ್ತೆಗಿಳಿದಿವೆ.
ವಾಗನ್ ಆರ್, ಮಾರುತಿ SX4 ಜೊತೆಗೆ ಆಲ್ಟೋ ಕೂಡಾ CNG(Compressed Natural Gas) ಗೆ ಹೊಂದುವ ಇಂಜಿನ್ ಬಳಕೆ ಮಾಡಲಾಗುವುದು. ಪರಿಸರಸ್ನೇಹಿಯಾಗಿ ಆಲ್ಟೋ ಜನಮನ ಗೆಲ್ಲಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.


Click it and Unblock the Notifications








