ಹ್ಯುಂಡೈ ಸೇಡನ್ ವರ್ನಾಗೆ ಸಿಕ್ತು ಹೊಸ ರೂಪ

ಹೊಸ ವರ್ನಾ ಟ್ರಾನ್ಸ್ ಫಾರ್ಮ್ ಕಾರು 1.6 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಮಾದರಿಯಲ್ಲಿ ಲಭ್ಯವಿದೆ. ಸೇಡನ್ ಸಿ ಮಾದರಿಯ ವಾಹನಗಳ ತಯಾರಿಕೆಯಲ್ಲಿ ಕಂಪೆನಿ ಮುಂಚೂಣಿಯಲ್ಲಿದ್ದು, ಹೊಸ ವರ್ನಾಮಾದರಿ ಕಂಪೆನಿ ಶ್ರೇಷ್ಠತೆ ಪೂರಕವಾಗಲಿದೆ ಎಂದ ಹ್ಯುಂಡೈ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್ .ಡಬ್ಲ್ಯೂ.ಪಾರ್ಕ್ ಅವರು 2006 ರ ಸಪ್ಟೆಂಬರ್ ನಿಂದ ಒಟ್ಟು 82,076 ವರ್ನಾ ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದರು.
ಕೊರಿಯಾ ಮೂಲದ ಕಾರು ಉತ್ಪಾದನಾ ಸಂಸ್ಥೆ ಭಾರತಕ್ಕೆ ಕಾಲಿಟ್ಟ ಕೆಲ ವರ್ಷಗಳಲ್ಲೇ, ಗ್ರಾಹಕರ ಮನಸ್ಥಿತಿ ಅರಿತು, ಅಗತ್ಯಕ್ಕೆ ತಕ್ಕ ಹಾಗೆ ಕಾರುಗಳನ್ನು ವಿನ್ಯಾಸಗೊಳಿಸತೊಡಗಿತು.
ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ನಂತರದ ಸ್ಥಾನದಲ್ಲಿರುವ ಹ್ಯುಂಡೈ, ಹೊಸ ಮಾದರಿಯ ವರ್ನಾ ಕಾರನ್ನು ಕೊರಿಯಾದಲ್ಲಿ ಈಗಾಗಲೇ ಪರಿಚಯಿಸಿದೆ. ಹ್ಯುಂಡೈ ಐ10, ಐ20 ಸರಣಿ ಕಾರಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದೆ.
ಸ್ಯಾಂಟ್ರೋ, ಅಸ್ಸೆಂಟ್ ಮಾರುಕಟ್ಟೆ ಯಲ್ಲಿ ಸಮತೋಲನ ಕಾಯ್ದುಕೊಂಡಿದೆ. ಸೊನಾಟಾ ಕಾರಿನ ವಿನ್ಯಾಸವನ್ನೂ ಬದಲಿಸಲು ಚಿಂತನೆ ನಡೆಸಿರುವ ಹ್ಯುಂಡೈ ಕಾರು ತಯಾರಿಕಾ ಘಟಕ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿದೆ.


Click it and Unblock the Notifications








