ಕಾರು ಮಾರಾಟಕ್ಕೆ ಬ್ರೇಕ್ ಹಾಕಿದ ತೈಲ ಬೆಲೆ

Fuel price hikes might affect car sales in India
ಕಡಿಮೆ ಬೆಲೆಯ ಕಾರುಗಳನ್ನು ಇನ್ನು ಮಧ್ಯಮ ವರ್ಗದವರ ಕನಸಿನ ಮಾತಾಗಲಿದೆ. ತೈಲೋತ್ಪನ್ನಗಳ ಬೆಲೆ ಏರಿಕೆ ಕಾರು ತಯಾರಿಕಾ ಖರ್ಚಿನ ಮೇಲೆ ನೇರವಾಗಿ ಪರಿಣಾಮ ಬೀರಿದ್ದು ಕಾರುಗಳ ಮಾರಾಟದ ಮೇಲೆಯೂ ಇದು ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ.

ಕಾರು ಬಿಡಿಭಾಗಗಳು ತುಟ್ಟಿಯಾಗುತ್ತಿವೆ. ಇದರಿಂದಾಗಿ ಕಾರುಗಳ ಬೆಲೆ ಏರಿಸದೆ ಮಾರಾಟಗಾರರಿಗೆ ಬೇರೆ ಗತ್ಯಂತವೇ ಇಲ್ಲದಂತಾಗಿದೆ. ಜೊತೆಗೆ ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಬೆಲೆ ಏರಿಸಿರುವುದು ಕಾರು ಮಾರಾಟಕ್ಕೆ ಭಾರೀ ಹೊಡೆತ ನೀಡಿದೆ.

ಪೆಟ್ರೋಲ್ ಬೆಲೆ ದುಬಾರಿಯಾಗಿರುವುದರಿಂದ ಮತ್ತು ಅದರ ಬೆಲೆ ಪೆಟ್ರೋಲಿಯಂ ಕಂಪನಿಗಳ ನಿಯಂತ್ರಣದಲ್ಲಿರುವುದರಿಂದ ಕೊಳ್ಳುವವರು ಡೀಸೆಲ್ ಕಾರುಗಳಿಗೆ ಒಲಿಯುತ್ತಿದ್ದಾರೆ. ದಿನೇದಿನೇ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟದ ನಡುವಿನ ಅಂತರ ಹೆಚ್ಚಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಡೀಸೆಲ್ ಕಾರುಗಳ ಮಾರಾಟ ಪೆಟ್ರೋಲ್ ಕಾರುಗಳಿಗಿಂತ ಶೇ.25ರಷ್ಟು ಹೆಚ್ಚಿದೆ.

ತೈಲೋತ್ಪನ್ನಗಳ ಮತ್ತು ಕಾರುಗಳ ಬೆಲೆ ಏರಿದರೂ ಕಾರು ಮಾರಾಟದ ಬಗ್ಗೆ ಆಟೊಮೊಬೈಲ್ ಕ್ಷೇತ್ರ ಆಶಾಭಾವನೆ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದವರಿಗೂ ಕಾರು ಅಗತ್ಯ ವಸ್ತುಗಳಲ್ಲೊಂದಾಗಿದ್ದರಿಂದ ಮಾರಾಟ ಭರ್ಜರಿಯಾಗಿಯೇ ಸಾಗಿದೆ. ಹೀಗಾಗಿ, ಕಾರು ಮಾರಾಟದ ಪ್ರಮಾಣ ಅಲ್ಪ ತಗ್ಗಿದರೂ ಅಂತಹ ವ್ಯತ್ಯಾಸವೇನೂ ಆಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಐಷಾರಾಮಿ ಕಾರು ಕೊಳ್ಳುವ ಕನಸು ಕಾಣುತ್ತಿದ್ದವರು ಕಡಿಮೆ ಬೆಲೆಯ ಕಾರಿಗೆ ಜೈ ಎನ್ನುತ್ತಿದ್ದಾರೆ. ಕಾರಿಗೆ ಪೆಟ್ರೋಲ್ ತುಂಬಿಸುವಾಗಲೂ ಹಿಂದೆ ಮುಂದೆ ನೋಡುತ್ತಿದ್ದರೂ ಕಾರು ಅಗತ್ಯ ವಸ್ತುಗಳಲ್ಲೊಂದಾಗಿದ್ದರಿಂದ ದೀರಾಘಾವಧಿಯಲ್ಲಿ ಕಾರು ಮಾರಾಟದಲ್ಲಿ ಅಂತಹ ಬದಲಾವಣೆ ಆಗುವುದಿಲ್ಲ ಎಂಬುದು ಆಟೋತಜ್ಞರ ಅಭಿಮತ.

More from DriveSpark

Article Published On: Monday, June 28, 2010, 18:48 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+