ಏರು ಗ್ರಾಹಕನೆ, ಹೊಸ ಪುಟಾಣಿ ಡೀಸೆಲ್ ಕಾರು

Nissan Micra diesel car
ನವದೆಹಲಿ, ಡಿ. 11 : ಪುಟಾಣಿ ಕಾರು ಮೈಕ್ರಾ ಪೆಟ್ರೋಲ್ ಕಾರಿನ ಮಾರಾಟದಲ್ಲಿ ದಕ್ಕಿದ ಯಶಸ್ಸಿನಿಂದ ಉತ್ತೇಜಿತವಾಗಿರುವ ನಿಸ್ಸಾನ್ ಕಂಪನಿ ಡೀಸೆಲ್ ಕಾರನ್ನು ಭಾರತದಲ್ಲಿ ಡಿ.10 ಶುಭ ಶುಕ್ರವಾರದಂದು ಬಿಡುಗಡೆ ಮಾಡಿದೆ.

ಹೊಸ ವರ್ಷಕ್ಕೆ ಅಡಿಯಿಡುತ್ತಿರುವ ಸಂದರ್ಭದಲ್ಲಿ ಮುಂದಿನ ವರ್ಷ ಹೇಗೋ ಏನೋ, ಬೆಲೆಯಲ್ಲಿ ಏರಿಕೆಯಾಗುತ್ತೋ ಏನೋ ಎಂಬ ದುಗುಡದಲ್ಲಿರುವ ಕಾರು ಪ್ರಿಯರಿಗೆ ಕಾರು ಕೊಳ್ಳಲು ಪರ್ವ ಕಾಲ. ಕಾರಿನ ವ್ಯಾಪಾರವನ್ನು ವೃದ್ಧಿಸಿಕೊಳ್ಳುವ ಮತ್ತು ಗ್ರಾಹಕರನ್ನು ಆಕರ್ಷಿಸುವ ಉಮೇದಿನಿಂದ ಅನೇಕ ಕಾರು ಕಂಪನಿಗಳು ಭಾರೀ ರೀತಿಯಲ್ಲಿ ಆಫರುಗಳನ್ನು ನೀಡುತ್ತವೆ. ಇಂಥ ಸಂದರ್ಭದಲ್ಲಿ ನಿಸ್ಸಾನ್ ಕಂಪನಿ ಡೀಸೆಲ್ ಕಾರನ್ನು ಭಾರತದ ರಸ್ತೆಗೆ ಬಿಟ್ಟಿದೆ.

ಲೀಟರ್ ಗೆ 23 ಕಿ.ಮೀ. ಸಾಗುವ ಈ ಆಕರ್ಷಕ ಕಾರು ಪೆಟ್ರೋಲ್ ಕಾರಿಗಿಂತಲೂ ಹೆಚ್ಚಿನ ವ್ಯಾಪಾರ ಮಾಡುವ ನಿರೀಕ್ಷೆಯಿದೆ. ಪೆಟ್ರೋಲ್ ಕಾರನ್ನು ಆರಂಭಿಸಿದ ಆರು ತಿಂಗಳಲ್ಲೇ ಡೀಸೆಲ್ ಕಾರನ್ನು ಬಿಡುಗಡೆ ಮಾಡಿರುವುದು ನಿಸ್ಸಾನ್ ಕಂಪನಿಯ ಹೆಗ್ಗಳಿಕೆ. ಡೀಸೆಲ್ ಕಾರಿನ ಬೆಲೆ 5.59 ಲಕ್ಷ ರು.ನಿಂದ 6.05 ಲಕ್ಷ ರು. ನಡುವಿನಲ್ಲಿದೆ.

ಕಾರು ತಯಾರಿಕಾ ಘಟಕವನ್ನು ಫ್ರೆಂಚ್ ಕಂಪನಿ ರಿನಾಲ್ಟ್ ಸಹಯೋಗದೊಂದಿಗೆ 2300 ಕೋಟಿ ರು. ಬಂಡವಾಳ ಹೂಡಿ ಚೆನ್ನೈನಲ್ಲಿ ಆರಂಭಿಸಲಾಗಿದೆ. ಪ್ರಸ್ತುತ 1 ಲಕ್ಷ ಕಾರುಗಳನ್ನು ತಯಾರಿಸುತ್ತಿರುವ ನಿಸ್ಸಾನ್ ವಾರ್ಷಿಕ 4 ಲಕ್ಷ ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಗುರಿ ಹೊಂದಿದೆ. ಈ ಘಟಕದಲ್ಲಿ ದೇಸಿ ಮತ್ತು ರಫ್ತು ಮಾಡಲಾಗುವ ಮಾಡೆಲ್ ಗಳನ್ನು ತಯಾರಿಸಲಾಗುತ್ತಿದೆ. ಈಗಾಗಲೆ ಪೆಟ್ರೋಲ್ ಬಳಕೆಯ ಪುಟಾಣಿ ಕಾರುಗಳನ್ನು ಮಧ್ಯ ಪ್ರಾಚ್ಯ, ಆಫ್ರಿಕಾ ಮತ್ತು ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.

ಮಾರುತಿ ಸುಜುಕಿ, ಟಾಟಾ, ಹ್ಯುಂಡೈ ಕಂಪನಿಗಳ ಪ್ರಾಬಲ್ಯ ಮುರಿಯಲು ಪಣ ತೊಟ್ಟಿರುವ ನಿಸ್ಸಾನ್ ಇಂದು ಡಿಸೇಲ್ ಆವೃತ್ತಿಯ ಮೈಕ್ರಾ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಲಗ್ಗೆ ಹಾಕಿದೆ. ಬಾಲಿವುಡ್ ನಟ ರಣಬೀರ್ ಕಪೂರ್ ಬ್ರಾಂಡ್ ಅಂಬಾಸಿಡರ್ ಆಗಿರುವುದು ಕಾರಿನ ಮಾರಾಟದಲ್ಲಿಯೂ ಮಹತ್ತರ ಪಾತ್ರ ವಹಿಸಿದೆ.

More from DriveSpark

Article Published On: Saturday, December 11, 2010, 18:10 [IST]
English summary
Fall in love with small car. After the successful run of the Micra petrol version Nissan has now launched its diesel version in India. Small car business in India ia zooming with the entry of other motor companies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+