2020ಕ್ಕೆ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಕೈಬಿಡಲಿದೆ ಪೋರ್ಷೆ

Written By:

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಪ್ರಮುಖ ಆಟೋ ಉತ್ಪಾದಕರು ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದು, ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿರುವ ಪೋರ್ಷೆ 2020ರಿಂದ ಡೀಸೆಲ್ ಆವೃತ್ತಿಗಳ ಉತ್ಪಾದನೆಯನ್ನು ಪೂರ್ಣಪ್ರಮಾಣದಲ್ಲಿ ಕೈಬಿಡಲಿದೆ.

To Follow DriveSpark On Facebook, Click The Like Button
2020ಕ್ಕೆ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಕೈಬಿಡಲಿದೆ ಪೋರ್ಷೆ

ಜರ್ಮನ್ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಪೋರ್ಷೆ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಕೈಬಿಡುವ ಪ್ರಮುಖ ನಿರ್ಧಾರವನ್ನು ಪ್ರಕಟಿಸಿದ್ದು, ಇನ್ಮುಂದೆ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳನ್ನು ಮಾತ್ರ ಉತ್ಪಾದನೆ ಮಾಡಲಿದೆ.

2020ಕ್ಕೆ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಕೈಬಿಡಲಿದೆ ಪೋರ್ಷೆ

ಈ ಬಗ್ಗೆ ಮಾತನಾಡಿರುವ ಪೋರ್ಷೆ ಹಿರಿಯ ಕಾರ್ಯಕಾರಣಿ ಅಧಿಕಾರಿ ಒಲಿವೆರ್ ಬ್ಲೂಮ್, "ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದಿದ್ದಾರೆ.

2020ಕ್ಕೆ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಕೈಬಿಡಲಿದೆ ಪೋರ್ಷೆ

ಈ ಮಧ್ಯೆ ಡೀಸೆಲ್ ಕಾರು ಮಾದರಿಗಳಲ್ಲಿ ಅತಿಯಾದ ಮಾಲಿನ್ಯ ಹೊರಸೂಸುವಿಕೆ ಪ್ರಕರಣಗಳು ಹೆಚ್ಚಿದ್ದು, ಪ್ರತಿಷ್ಠಿತ ಫೋಕ್ಸ್‌ವ್ಯಾಗನ್ ಉತ್ಪನ್ನಗಳಲ್ಲಿ ಕೂಡಾ ಇಂತಹ ದೋಷಗಳು ಪತ್ತೆಯಾಗಿ ಭಾರೀ ಚರ್ಚೆಗೆ ಕಾರಣವಾಗಿತ್ತು.

2020ಕ್ಕೆ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಕೈಬಿಡಲಿದೆ ಪೋರ್ಷೆ

ಈ ಹಿನ್ನೆಲೆ ಡೀಸೆಲ್ ಕಾರುಗಳ ಭವಿಷ್ಯದ ಬಗೆಗೆ ಗಂಭೀರವಾಗಿ ಚಿಂತನೆ ಮಾಡಿರುವ ಪೋರ್ಷೆ ಸಂಸ್ಥೆಯು, ಮುಂದಿನ 15 ರಿಂದ 20 ವರ್ಷಗಳಲ್ಲಿ 1.2 ಮಿಲಿಯನ್ ಡಾಲರ್ ಬಂಡವಾಳದೊಂದಿಗೆ ವಿವಿಧ ಮಾದರಿಯ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳು ಉತ್ಪಾದನೆ ಮಾಡುವ ಯೋಜನೆಯಲ್ಲಿದೆ.

2020ಕ್ಕೆ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಕೈಬಿಡಲಿದೆ ಪೋರ್ಷೆ

ಪೋರ್ಷೆ ಮಹತ್ವದ ನಿರ್ಧಾರಕ್ಕೂ ಮುನ್ನ ಈಗಾಗಲೇ ಕೆಲವು ಪ್ರತಿಷ್ಠಿತ ಕಾರು ಉತ್ಪಾದಕರು ಕೂಡಾ ಡೀಸೆಲ್ ಉತ್ಪನ್ನಗಳ ಉತ್ಪಾದನೆಯನ್ನು ಕೈಬಿಡುವ ಬಗ್ಗೆ ನಿರ್ಧಾರವನ್ನು ಪ್ರಕಟಿಸಿದ್ದು, 2030ರ ವೇಳೆಗೆ ಸಂಪೂರ್ಣವಾಗಿ ಡೀಸೆಲ್ ಮಾದರಿಗಳು ನಿಷೇಧಗೊಳ್ಳುವುದು ಖಚಿತವಾಗಿದೆ.

2020ಕ್ಕೆ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಕೈಬಿಡಲಿದೆ ಪೋರ್ಷೆ

ಡ್ರೈವ್ ಸ್ಪಾಕ್ ಅಭಿಪ್ರಾಯ

ಡೀಸೆಲ್ ಕಾರುಗಳ ಉತ್ಪಾದನೆಯನ್ನು ಕೈಬಿಡುವ ಬಗ್ಗೆ ಪೋರ್ಷೆ ತೆಗೆದುಕೊಂಡಿರುವ ಕ್ರಮ ಮಹತ್ವದ ನಿರ್ಧಾರವಾಗಿದ್ದು, ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ಮಾದರಿಗಳ ಉತ್ಪಾದನೆಗೆ ವಿಶೇಷ ಒತ್ತು ನೀಡಿರುವುದು ಉತ್ತಮ ಕ್ರಮವಾಗಿದೆ.

English summary
Read in Kannada about Porsche May Retire Diesel Engines By 2020.
Story first published: Thursday, July 20, 2017, 10:53 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark